»   » ಎಂ.ಟಿವಿ 'ರೋಡೀಸ್' ಶೋದಿಂದ ಔಟ್ ಆದ 'ಕಿರಿಕ್' ಹುಡುಗಿ ಸಂಯುಕ್ತ.!

ಎಂ.ಟಿವಿ 'ರೋಡೀಸ್' ಶೋದಿಂದ ಔಟ್ ಆದ 'ಕಿರಿಕ್' ಹುಡುಗಿ ಸಂಯುಕ್ತ.!

Posted By:
Subscribe to Filmibeat Kannada

ಎಂ.ಟಿವಿ ವಾಹಿನಿಯ ಬಹು ಜನಪ್ರಿಯ ರಿಯಾಲಿಟಿ ಶೋ 'ರೋಡೀಸ್'ನಿಂದ 'ಕಿರಿಕ್ ಪಾರ್ಟಿ' ಚಿತ್ರದ ಎರಡನೇ ನಾಯಕಿ ಸಂಯುಕ್ತ ಹೆಗಡೆ ಔಟ್ ಆಗಿದ್ದಾರೆ. ಸೆಮಿ ಫಿನಾಲೆಗೆ ಇನ್ನೊಂದು ಹೆಜ್ಜೆ ಬಾಕಿ ಇರುವಾಗಲೇ, ಸಂಯುಕ್ತ ಹೊರನಡೆದಿದ್ದಾರೆ.

'ರೋಡೀಸ್' ಶೋನಲ್ಲಿ 'ಕಿರಿಕ್' ಸಂಯುಕ್ತ ವಿರುದ್ಧ ಆರೋಪಗಳ ಸುರಿಮಳೆ.!

ಟಾಸ್ಕ್ ನಲ್ಲಿ ಚೆನ್ನಾಗಿ ಪರ್ಫಾಮ್ ಮಾಡದ ಕಾರಣ, ವೋಟ್ ಔಟ್ ಇಲ್ಲದೇ ಸಂಯುಕ್ತ ಹಾಗೂ ಪ್ರಿಯಾಂಕ್ ಡೈರೆಕ್ಟಾಗಿ ಎಲಿಮಿನೇಟ್ ಆಗಿದ್ದಾರೆ.

ಅಷ್ಟಕ್ಕೂ ಟಾಸ್ಕ್ ಏನು.?

ಜೋಡಿಗಳು ಪರ್ಫಾಮ್ ಮಾಡಬೇಕಾಗಿದ್ದ ಟಾಸ್ಕ್ ನಲ್ಲಿ, ಹುಡುಗಿಯರು ಮೇಲೆ ಕೂತು ಬಾವುಟಗಳನ್ನ ಸಿಲುಕಿಸಬೇಕಿತ್ತು. ಕೆಳಗಿನಿಂದ, ಹುಡುಗರು ಇತರೆ ಜೋಡಿಗಳ ಬಾವುಟಗಳನ್ನ ಕಿತ್ತು ಹಾಕಬೇಕಿತ್ತು. ಐದು ನಿಮಿಷಗಳಲ್ಲಿ ಯಾರ ಬಾವುಟ ಹೆಚ್ಚು ಸಿಲುಕಿಸಲ್ಬಡುತ್ತದೋ, ಅವರು ಟಾಸ್ಕ್ ಗೆದ್ದಂತೆ.

ಪ್ರಿಯಾಂಕ್ ಜೊತೆ ಪರ್ಫಾಮ್ ಮಾಡಿದ ಸಂಯುಕ್ತ

ನಿಖಿಲ್ ಗ್ಯಾಂಗ್ ನಿಂದ ಪ್ರಿಯಾಂಕ್ ಜೊತೆ ನಟಿ ಸಂಯುಕ್ತ ಟಾಸ್ಕ್ ಪರ್ಫಾಮ್ ಮಾಡಿದರು.

'ರೋಡೀಸ್'ನಲ್ಲಿ ಕಿಸ್ ಕೊಟ್ಟ 'ಕಿರಿಕ್' ಹುಡುಗಿ: ಬಯಲಾಯ್ತು ಸಂಯುಕ್ತ ಲವ್ ಸ್ಟೋರಿ!

ವಿಫಲರಾದ ಸಂಯುಕ್ತ

ಐದು ನಿಮಿಷಗಳಲ್ಲಿ ಹೆಚ್ಚು ಬಾವುಟಗಳನ್ನು ಸಿಲುಕಿಸಲು ಸಂಯುಕ್ತ ವಿಫಲರಾದರು. ಬಾಕಿ ಎರಡು ಜೋಡಿಗಳು ಸಂಯುಕ್ತರನ್ನೇ ಟಾರ್ಗೆಟ್ ಮಾಡಿದರು.

ಮೂರನೇ ಸ್ಥಾನ ಪಡೆದ ಸಂಯುಕ್ತ

ಟಾಸ್ಕ್ ನಲ್ಲಿ ಮೂರನೇ ಸ್ಥಾನ ಪಡೆದ ಸಂಯುಕ್ತ ಔಟ್ ಆದರು. ಸಂಯುಕ್ತ ಹೆಚ್ಚು ಬಾವುಟಗಳನ್ನ ಹಾಕದ ಪರಿಣಾಮ, ಅವರೊಂದಿಗೆ ಪ್ರಿಯಾಂಕ್ ಕೂಡ ಮನೆ ಕಡೆ ಹೆಜ್ಜೆ ಹಾಕಿದರು.

ತಮಿಳು ಸಿನಿಮಾ ಆಸೆಗೆ ಕನ್ನಡ ಚಿತ್ರಕ್ಕೆ ಕೈ ಕೊಡಲು ರೆಡಿ ಇದ್ರಾ ಕನ್ನಡತಿ ಸಂಯುಕ್ತ.?

ಕಣ್ಣೀರಿಟ್ಟ ಸಂಯುಕ್ತ

''ರೋಡೀಸ್' ನನ್ನ ಡ್ರೀಮ್'' ಎನ್ನುತ್ತಿದ್ದ ಸಂಯುಕ್ತ, ಹೊರಹೋಗುವ ಮುನ್ನ ಭಾವುಕರಾಗಿ ಕಣ್ಣೀರಿಟ್ಟರು.

English summary
Kannada Actress Samyuktha Hegde gets evicted from MTV 'Roadies' reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada