For Quick Alerts
  ALLOW NOTIFICATIONS  
  For Daily Alerts

  BBK9: "ರೂಪಿ ಸ್ಟ್ರಾಂಗ್ ಆಗಿರು.. ಅವರು ಶರ್ಟ್‌ಗಳನ್ನು ತಲುಪಿಸುತ್ತಿಲ್ಲ": ಬಿಗ್ ಬಾಸ್ ವಿರುದ್ಧ ಸಾನ್ಯಾ ಆರೋಪ!

  |

  ಕನ್ನಡದ ರಿಯಾಲಿಟಿ ಶೋ ಬಿಗ್‌ ಬಾಸ್ ಸೀಸನ್ 9 ಹೊಸ ಹೊಸ ಬದಲಾವಣೆಗಳೊಂದಿಗೆ ಪ್ರಸಾರ ಆಗುತ್ತಿದೆ. ಕೆಲವೊಮ್ಮೆ ನಿರೀಕ್ಷೆ ಮಾಡದಂತಹ ಟಾಸ್ಕ್‌ಗಳನ್ನು ನೀಡುತ್ತಾರೆ. ನಿರೀಕ್ಷಿಸದಂತಹ ಟ್ವಿಸ್ಟ್ ಕೊಡುತ್ತಾರೆ. ಈ ವಾರ ಇವರು ಮನೆಯಿಂದ ಹೊರ ಹೋಗಲ್ಲ ಅಂದುಕೊಂಡವರು ಹೊರಬೀಳುತ್ತಾರೆ.

  ಬಿಗ್ ಬಾಸ್‌ನಲ್ಲಿ ಸದಸ್ಯರು ಇದ್ದಕ್ಕಿದ್ದಂತೆ ಪ್ರೀತಿ ತೋರಿತ್ತಾರೆ. ಕಿತ್ತಾಡಿಕೊಂಡವರು ಒಂದಾಗುತ್ತಾರೆ. ಒಂದಾಗಿ ಇರುತ್ತಿದ್ದವರು ಕಿತ್ತಾಡುತ್ತಾರೆ. ಈ ಕಾರಣಕ್ಕೆ ವೀಕ್ಷಕರು ಬಿಗ್ ಬಾಸ್ ನೋಡುವುದಕ್ಕೆ ಕಾದು ಕೂರುತ್ತಾರೆ.

  BBK9: ಅರುಣ್ ಸಾಗರ್, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ನಡುವೆ ಸಖತ್ ಫೈಟ್!BBK9: ಅರುಣ್ ಸಾಗರ್, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ನಡುವೆ ಸಖತ್ ಫೈಟ್!

  ಇದೂವರೆಗೂ ಬಿಗ್ ಬಾಸ್‌ ಸ್ಪರ್ಧಿಗಳು ಆ ಶೋ ವಿರುದ್ಧ ತಿರುಗಿಬಿದ್ದ ಉದಾಹರಣೆಗಳು ತುಂಬಾನೇ ಕಡಿಮೆ ಇವೆ. ಆದ್ರೀಗ ಬಿಗ್ ಬಾಸ್‌ 9 ರ ಸ್ಪರ್ಧಿಯಾಗಿದ್ದ ಸಾನ್ಯಾ ಐಯ್ಯರ್ ಈ ರಿಯಾಲಿಟಿ ಶೋ ತಂಡದ ವಿರುದ್ಧವೇ ಆರೋಪ ಮಾಡಿದ್ದಾರೆ. ಈ ಸಂಬಂಧ ಇನ್‌ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಮಾಡಿದ್ದು ಅದರ ಸಾರಾಂಶ ಹೀಗಿದೆ.

  ಬಿಗ್ ಬಾಸ್ ವಿರುದ್ಧ ಸಾನ್ಯಾ ಆರೋಪ

  ಬಿಗ್ ಬಾಸ್ ವಿರುದ್ಧ ಸಾನ್ಯಾ ಆರೋಪ

  ಇದು ಕನ್ನಡದ ಒಂಬತ್ತನೇ ಬಿಗ್ ಬಾಸ್‌ ಸೀಸನ್. ಇದೂವರೆಗೂ ಬಿಗ್ ಬಾಸ್‌ ಮನೆಯಲ್ಲಿ ಹಲವು ಜೋಡಿಗಳು ಅನ್ಯೋನ್ಯವಾಗಿದ್ದರು. ಮನೆಯೊಳಗೆ ಪ್ರೀತಿ ಹುಟ್ಟಿದೆ. ಆ ಪ್ರೀತಿ ಮನೆಯಿಂದ ಆಚೆ ಬಂದ ಮೇಲೂ ಮುಂದುವರೆದಿದೆ. ಅದೇ ಪ್ರೀತಿ ಮುಂದುವರೆಗೂ ಸಾಂಸಾರಿಕ ಜೀವನಕ್ಕೂ ಕಾಲಿಟ್ಟಿದೆ. ಈ ಬಾರಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ನಡುವೆ ಇಂತಹದ್ದೊಂದು ಸೂಚನೆ ಕಾಣಿಸುತ್ತಿದೆ. ಸಾನ್ಯಾ ಐಯ್ಯರ್ ಸದ್ಯ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು, ರೂಪೇಶ್ ಶೆಟ್ಟಿಗೆ ಶರ್ಟ್‌ಗಳನ್ನು ಕಳುಹಿಸಿಕೊಡುತ್ತಿದ್ದರಂತೆ. ಅದನ್ನು ರೂಪೇಶ್‌ ಶೆಟ್ಟಿಗೆ ಬಿಗ್ ಬಾಸ್ ತಲುಪಿಸುತ್ತಿಲ್ಲ ಅಂತ ಆರೋಪ ಮಾಡಿದ್ದಾರೆ.

  ಸಾನ್ಯಾ ಐಯ್ಯರ್ ಆರೋಪವೇನು?

  ಸಾನ್ಯಾ ಐಯ್ಯರ್ ಆರೋಪವೇನು?

  ತಾನು ಕಳುಹಿಸಿಕೊಡುವ ಶರ್ಟ್‌ ಅನ್ನು ಬಿಗ್ ಬಾಸ್ ರೂಪೇಶ್ ಶೆಟ್ಟಿ ಕೊಡುತ್ತಿಲ್ಲ ಅನ್ನೋದು ಸಾನ್ಯಾ ಐಯ್ಯರ್ ಆರೋಪ. ಇದಕ್ಕೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. "ರೂಪಿ ನೀನು ಸ್ಟ್ರಾಂಗ್ ಆಗಿರಬೇಕು ಆಯ್ತಾ. ನಾನು ಕಳುಹಿಸಿದ ಶರ್ಟ್‌ ಅನ್ನು ಅವರು ತೆಗೆದುಕೊಂಡಿದ್ದರೂ, ಅದನ್ನು ನಿನ್ನ ಬಳಿಗೆ ತಲುಪಿಸುತ್ತಿಲ್ಲ. ಆದರೆ, ನಾನು ಕಳುಹಿಸೋ ಪಾಸಿಟಿವಿಯನ್ನು ನಿನಗೆ ತಲುಪಿಸಲು ಯಾರಿಂದಲೂ ಸಾಧ್ಯವಿಲ್ಲ ಆಯ್ತಾ. ನೀನು ಯಾವಾಗಲೂ ಮಿನುಗುತ್ತಿರು." ಎಂದು ಸಾನ್ಯಾ ಐಯ್ಯರ್ ಪೋಸ್ಟ್ ಮಾಡಿದ್ದಾರೆ.

  ಸಾನ್ಯಾ ಶರ್ಟ್ ತಲುಪುತ್ತಿಲ್ವಾ?

  ಸಾನ್ಯಾ ಶರ್ಟ್ ತಲುಪುತ್ತಿಲ್ವಾ?

  ಸಾನ್ಯಾ ಐಯ್ಯರ್ ಬಿಗ್ ಬಾಸ್ ಮನೆಯಿಂದ ಹೊರಬೀಳುವಾಗ ಗೆಳೆಯ ರೂಪೇಶ್ ಶೆಟ್ಟಿಗೆ ಶರ್ಟ್ ಅನ್ನು ಪ್ರತಿ ವಾರ ಕಳುಹಿಸಿಕೊಡುವುದಾಗಿ ಹೇಳಿದ್ದರು. ಆದರೆ, ಇತ್ತೀಚೆಗೆ ರೂಪೇಶ್ ಶೆಟ್ಟಿ ಪ್ರತಿ ವಾರ ಬೇರೆ ಕಾಸ್ಟ್ಯೂಮ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಇದು ವೀಕ್ಷಕರ ಗಮನಕ್ಕೂ ಬಂದಿದೆ. ಈ ಚರ್ಚೆಯಾಗುತ್ತಿರುವಾಗಲೇ ಸಾನ್ಯಾ ಐಯ್ಯರ್ ಇನ್‌ಸ್ಟಾಗ್ರಾಂನಲ್ಲಿ ಈ ರೀತಿ ಪೋಸ್ಟ್ ಮಾಡಿದ್ದು, ಬಿಗ್ ಬಾಸ್ ಉದ್ದೇಶಪೂರ್ವಕವಾಗಿಯೇ ಹೀಗೆ ಶರ್ಟ್ ತಲುಪಿಸುತ್ತಿಲ್ಲವೇ ಅನ್ನೋ ಅನುಮಾನ ಮೂಡಿದೆ.

  ಬಿಗ್ ಬಾಸ್‌ನಲ್ಲಿ ರೂಪೇಶ್‌ ಶೆಟ್ಟಿ ಸ್ಟ್ರಾಂಗ್

  ಬಿಗ್ ಬಾಸ್‌ನಲ್ಲಿ ರೂಪೇಶ್‌ ಶೆಟ್ಟಿ ಸ್ಟ್ರಾಂಗ್

  ಸಾನ್ಯಾ ಐಯ್ಯರ್ ಹೊರಬಿದ್ದ ದಿನ ರೂಪೇಶ್ ಶೆಟ್ಟಿ ಸಿಕ್ಕಾಪಟ್ಟೆ ಭಾವುಕರಾಗಿದ್ರು. ಆದ್ರೀಗ ರೂಪೇಶ್ ಶೆಟ್ಟಿ ಅದರಿಂದ ಹೊರಬಂದಿದ್ದಾರೆ. ಗೇಮ್‌ಗಳಲ್ಲಿ ಆಕ್ಟಿವ್ ಆಗಿ ಭಾಗವಹಿಸುತ್ತಿದ್ದಾರೆ. ಮನೆಯಲ್ಲಿ ಉಳಿದ ಸದಸ್ಯರೊಂದಿಗೆ ಹೊಂದಾಣಿ ಮಾಡಿಕೊಂಡು ಆಟ ಆಡುತ್ತಿದ್ದಾರೆ. ಆದರೂ, ಆಗಾಗ ಸಾನ್ಯಾ ನೆನಪಾಗುತ್ತಲೇ ಇರುತ್ತಾರೆ. ಹೀಗಾಗಿ ಬಿಗ್ ಬಾಸ್ ಮುಗಿದ ಬಳಿಕ ಈ ಜೋಡಿಯದ್ದು ಸ್ನೇಹನಾ? ಪ್ರೀತಿನಾ? ಅನ್ನೋದು ಗೊತ್ತಾಗಲಿದೆ.

  English summary
  Sanya Iyer Post About Bigg Boss Not Sending Red T-Shirt To Roopesh Shetty, Know More.
  Sunday, December 4, 2022, 12:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X