»   » ಉದಯ ಟಿವಿಯಲ್ಲಿ ಶುರು ಆಗಲಿದೆ ಹೊಸ ರಿಯಾಲಿಟಿ ಶೋ 'ಸತ್ಯಕಥೆ'

ಉದಯ ಟಿವಿಯಲ್ಲಿ ಶುರು ಆಗಲಿದೆ ಹೊಸ ರಿಯಾಲಿಟಿ ಶೋ 'ಸತ್ಯಕಥೆ'

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ 'ಉದಯ ಟಿವಿ'ಯಲ್ಲಿ 'ಸತ್ಯಕಥೆ' ಎಂಬ ಹೊಸ ರಿಯಾಲಿಟಿ ಶೋ ಆರಂಭವಾಗಲಿದೆ.

'ಸತ್ಯಕಥೆ'... ಬದುಕಿನ ಸತ್ಯ ಘಟನೆಗಳನ್ನು ಆಧರಿಸಿ ಪ್ರಸ್ತುತ ಪಡಿಸುವ ಶೋ. ಎರಡು ಮನಸ್ಸುಗಳ ನಡುವೆ ಬೆಸುಗೆ ಹಾಕುವ ಕಾರ್ಯಕ್ರಮ ಇದು.

'ಸತ್ಯಕಥೆ' ಕಾರ್ಯಕ್ರಮವನ್ನು ನಟಿ ಶ್ರುತಿ ನಡೆಸಿಕೊಡಲಿದ್ದಾರೆ. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಕರುನಾಡ ಜನರ ಮನೆಮಗಳಾದ ಶ್ರುತಿ ಈ ಕಾರ್ಯಕ್ರಮದಲ್ಲಿ ಬರುವವರ ಕಷ್ಟ-ಸುಖಗಳಲ್ಲಿ ಭಾಗಿಯಾಗುವುದರ ಜೊತೆಗೆ ನೊಂದ ಮನಸ್ಸಿಗೆ ತಾಯಿಯಾಗಿ, ಸಹೋದರಿಯಾಗಿ ಪ್ರಾಮಾಣಿಕವಾಗಿ ಬಗೆಹರಿಸುವಲ್ಲಿ ಪ್ರಯತ್ನಿಸಲಿದ್ದಾರೆ.

'Sathya Kathe': New Reality show in Udaya TV

ಅದ್ಧೂರಿ ಸೆಟ್ ನಲ್ಲಿ ಚಿತ್ರೀಕರಣಗೊಂಡಿರುವ ಕಾರ್ಯಕ್ರಮದ ಪ್ರೋಮೋ ಈಗಾಗಲೇ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿದೆ.

'Sathya Kathe': New Reality show in Udaya TV

'ಹೊಸ ಆರಂಭ' ಎಂಬ ಟ್ಯಾಗ್ ಲೈನ್ ಹೊಂದಿರುವ 'ಸತ್ಯಕಥೆ' ಸದ್ಯದಲ್ಲಿಯೇ ಉದಯ ಟಿವಿಯಲ್ಲಿ ಪ್ರಾರಂಭವಾಗಲಿದೆ.

English summary
Kannada Actress Shruthi is hosting a new reality show called 'Sathya Kathe'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada