ಬಿಗ್ ಬ್ರೇಕಿಂಗ್: 'ಬಿಗ್ ಬಾಸ್' ಮನೆಗೆ ಮತ್ತೆ 'ಬಾಸ್ ರವಿ ಬೆಳಗೆರೆ' ವಾಪಸ್ !

Recommended Video

Bigg Boss Kannada season-7 Ravi Belagere Returns to BB House after Health Issues |FILMIBEAT KANNADA

ಅನಾರೋಗ್ಯ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದ ಪತ್ರಕರ್ತ ರವಿ ಬೆಳಗೆರೆ ಮತ್ತೆ ಬಿಗ್ ಬಾಸ್ ಗೆ ವಾಪಸಾಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ರವಿ ಬೆಳಗೆರೆ ಅವರು ಬಿಗ್ ಬಾಸ್ ಮನೆಯಿಂದ ವಾಪಸ್ ಬಂದ ಸುದ್ದಿಯನ್ನು 'ಫಿಲ್ಮಿ ಬೀಟ್ ಕನ್ನಡ' ಬ್ರೇಕ್ ಮಾಡಿತ್ತು.

ಲೋ ಬಿಪಿ ಹಾಗೂ ನಿಶ್ಶಕ್ತಿ ಕಾರಣದಿಂದ ಬಿಗ್ ಬಾಸ್ ಮನೆಯಲ್ಲಿ ರವಿ ಬೆಳಗೆರೆ ಕೆಳಗೆ ಬಿದ್ದಿದ್ದರು. ಬಿಗ್ ಬಾಸ್ ಆಯೋಜಕರ ಅನುಮತಿ ಪಡೆದು ಮನೆಯಿಂದ ರವಿ ಬೆಳಗೆರೆ ಆಚೆ ಬಂದಿದ್ದರು. ಆ ನಂತರ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ನಂತರ ಮತ್ತೆ ಬಿಗ್ ಬಾಸ್ ಮನೆಗೆ ಬೆಳಗೆರೆ ಹಿಂತಿರುಗಿದ್ದಾರೆ.

Senior Journalist Ravi Belagere Return To Bigg Boss House

ರವಿ ಬೆಳಗೆರೆ ಬಿಗ್ ಬಾಸ್ ನಿಂದ ಹೊರಬಂದ ವಿಷಯದ ಬಗ್ಗೆ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದರು. ''ಅವರಿಗೆ (ರವಿ ಬೆಳಗೆರೆ) ಆರೋಗ್ಯ ಸಮಸ್ಯೆ ಇರುವುದು ನಿಜ. ಅವರು ಅಕಸ್ಮಾತ್ ವಾಪಸ್ ಹೋಗ್ತಾರೆ ಅಂದ್ರೆ (ಬಿಗ್‌ ಬಾಸ್ ಮನೆಗೆ), ಈಗಲೇ ಹೊರಗೆ ಹೋದರು ಅನ್ನೋದು ತಪ್ಪಾಗುತ್ತೆ ಅಲ್ಲವಾ?'' ಎಂದು ಪ್ರತಿಕ್ರಿಯಿಸಿದ್ದರು.

ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಕೂಡ ಈ ಬಗ್ಗೆ ಮಾತನಾಡಿದ್ದರು. ''ಅಪ್ಪ ಹೊರಗೆ ಬಂದಿರುವುದು ನಿಜ. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಅವರು ಒಳಗೆ ಹೋಗುವ ಆಯ್ಕೆ ಇದೆ" ಎಂದಿದ್ದರು.

More from Filmibeat

English summary
Bigg Boss Kannada season-7: Senior Journalist Ravi Belagere Return To Bigg Boss House
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X