For Quick Alerts
  ALLOW NOTIFICATIONS  
  For Daily Alerts

  ಹಿರಿಯ ಕಲಾವಿದ ಶಂಕರ್ ರಾವ್ ನಿಧನ

  |

  'ಪಾಪಾ ಪಾಂಡು' ಸೇರಿ ಹಲವು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದ ಶಂಕರ್ ರಾವ್ ನಿಧನ ಹೊಂದಿದ್ದಾರೆ.

  ಅನಾರೋಗ್ಯದಿಂದ ಬಳಲುತ್ತಿದ್ದ ಶಂಕರ್ ರಾವ್ ಇಂದು (ಅಕ್ಟೋಬರ್ 18)ರ ಬೆಳಿಗ್ಗೆ 6:30ರ ಸುಮಾರಿಗೆ ನಿಧನ ಹೊಂದಿದ್ದಾರೆ. ಶಂಕರ್ ರಾವ್ ನಿಧನಕ್ಕೆ ಹಲವು ಧಾರಾವಾಹಿ ನಟ-ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.

  'ಪಾಪಾ ಪಾಂಡು' ಧಾರಾವಾಹಿಯಲ್ಲಿ ಬಾಸ್ ಪಾತ್ರ ನಿರ್ವಹಿಸಿದ್ದ ಶಂಕರ್ ರಾವ್, ರಮೇಶ್ ಅರವಿಂದ್ ನಿರ್ದೇಶನದ 'ಬಿಸಿ-ಬಿಸಿ' ಸಿನಿಮಾದ ಪಕ್ಕದ ಮನೆಯ ಅಂಕಲ್ ಪಾತ್ರದಿಂದಲೂ ಸಾಕಷ್ಟು ಖ್ಯಾತಿ ಗಳಿಸಿದ್ದರು. 'ಪರ್ವ', 'ಸಿಲ್ಲಿ-ಲಲ್ಲಿ' ಧಾರಾವಾಹಿಗಳಲ್ಲಿಯೂ ಅವರು ನಟಿಸಿದ್ದಾರೆ.

  ತುಮಕೂರಿನಲ್ಲಿ ಹುಟ್ಟಿ ಬೆಳೆದ ಶಂಕರ್ ರಾವ್ ಎಳವೆಯಿಂದಲೇ ಸಿನಿಮಾ ಪ್ರೇಮಿ. ಶಾಲಾ ದಿನಗಳಲ್ಲಿ ನಟನೆಯ ಬಗ್ಗೆ ಅಭಿರುಚಿ ಬೆಳೆಸಿಕೊಂಡು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸಣ್ಣ ವಯಸ್ಸಿಗೆ ತಂದೆ ಕಳೆದುಕೊಂಡ ಶಂಕರ್ ರಾವ್ ಮನೆಯ ಜವಾಬ್ದಾರಿ ನಿಭಾಯಿಸುವ ಜೊತೆಗೆ ನಟನೆಯ ಹವ್ಯಾಸವನ್ನೂ ಮುಂದುವರೆಸಿದರು. 1956ರಲ್ಲಿ ಬೆಂಗಳೂರಿಗೆ ಬಂದ ಶಂಕರ್ ರಾವ್, 'ಗೆಳೆಯರ ಬಳಗ' ತಂಡ ಕಟ್ಟಿಕೊಂಡು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. 'ನಟರಂಗ' ತಂಡದಲ್ಲಿಯೂ ಸಕ್ರಿಯರಾಗಿದ್ದರು. ಇವರ ಅಭಿನಯ ಚತುರತೆ ಗಮನಿಸಿ ನಿರ್ಮಾಪಕರೊಬ್ಬರು 'ಯಾರ ಸಾಕ್ಷಿ' ಸಿನಿಮಾದಲ್ಲಿ ಅವಕಾಶ ನೀಡಿದರು. ಅಲ್ಲಿಂದ ಸಾಕಷ್ಟು ಸಿನಿಮಾಗಳಲ್ಲಿ ಶಂಕರ್ ರಾವ್ ನಟಿಸಿದರು.

  English summary
  Kannada serial and movie actor Shankar Rao passed way on October 18 morning. He acted in Papa Pandu, Parva, Silly-Lally and many serials and movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X