Just In
Don't Miss!
- Automobiles
ಮಾರಾಟದಲ್ಲಿ ಹೊಸ ಮೈಲಿಗಲ್ಲು ದಾಟಿದ ಟಾಟಾ ಆಲ್ಟ್ರೋಜ್ ಕಾರು
- News
ಗಡಿ ವಿವಾದ; ಮತ್ತೊಂದು ಆಗ್ರಹ ಮುಂದಿಟ್ಟ ಮಹಾರಾಷ್ಟ್ರ ಸಿಎಂ
- Finance
ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಈ ವರದಿಗೆ ಏಕಿಷ್ಟು ಮಹತ್ವ?
- Lifestyle
ಕಾಂತಿಯುತ ತ್ವಚೆಗಾಗಿ ಬಾಳೆಹಣ್ಣಿನ ವಿವಿಧ ಫೇಸ್ ಮಾಸ್ಕ್ ಗಳು
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್: ಚೆನ್ನೈಗೆ ಬಂದಿಳಿದ ಜೋ ರೂಟ್ ಪಡೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಜ ಜೀವನದಲ್ಲಿ 'ಅಗ್ನಿಸಾಕ್ಷಿ' ಚಂದ್ರಿಕಾಗೆ ವಿಜಯ್ ಸೂರ್ಯ ಮೇಲೆ ಕಣ್ಣು.!

ಕಿರುತೆರೆಯ ಜನಪ್ರಿಯ 'ಅಗ್ನಿಸಾಕ್ಷಿ' ಧಾರಾವಾಹಿಯ ಚಂದ್ರಿಕಾ ಯಾರಿಗ್ತಾನೆ ಗೊತ್ತಿಲ್ಲ ಹೇಳಿ. 'ಅಗ್ನಿಸಾಕ್ಷಿ' ಧಾರಾವಾಹಿಯನ್ನ ತಪ್ಪದೆ ನೋಡುವವರಿಗೆ ಚಂದ್ರಿಕಾಳ ಜೊತೆಗೆ ಆಕೆಯ ಕುತಂತ್ರ ಬುದ್ಧಿಯ ಪರಿಚಯ ಇದ್ದೇ ಇರುತ್ತೆ.
ಕ್ರಿಮಿನಲ್ ಐಡಿಯಾಗಳನ್ನ ಮಾಡುವ ಚಂದ್ರಿಕಾಗೆ ಪ್ರತಿದಿನ ಗೃಹಿಣಿಯರು ಹಿಡಿಶಾಪ ಹಾಕುತ್ತಲೇ ಇರುತ್ತಾರೆ. ಅಷ್ಟರಮಟ್ಟಿಗೆ ಚಂದ್ರಿಕಾ ಪಾತ್ರಕ್ಕೆ ಜೀವ ತುಂಬಿರುವವರು ನಟಿ ಪ್ರಿಯಾಂಕಾ.
'ಅಗ್ನಿಸಾಕ್ಷಿ' ಸಿದ್ಧಾರ್ಥ್-ಸನ್ನಿಧಿ ಬಗ್ಗೆ ಹರಿದಾಡಿದ ಗಾಳಿ ಸುದ್ದಿ ನಿಜವೇ.?
ಇಂತಿಪ್ಪ ಪ್ರಿಯಾಂಕಾಗೆ 'ಅಗ್ನಿಸಾಕ್ಷಿ'ಯ ಹೀರೋ ವಿಜಯ್ ಸೂರ್ಯ ಮೇಲೆ ಕಣ್ಣು ಬಿದ್ದಿರುವ ಹಾಗಿದೆ. ಹಾಗೊಂದು ವೇಳೆ ಪ್ರಿಯಾಂಕಾ ಸ್ವಯಂವರ ನಡೆದರೆ, ಅದರಲ್ಲಿ ನಟ ವಿಜಯ್ ಸೂರ್ಯ ಇರಲೇಬೇಕಂತೆ. ಹಾಗಂತ ಸ್ವತಃ ನಟಿ ಪ್ರಿಯಾಂಕಾ ಹೇಳಿದ್ದಾರೆ. ಮುಂದೆ ಓದಿರಿ....

'ಸೂಪರ್ ಟಾಕ್ ಟೈಮ್'ನಲ್ಲಿ ನಟಿ ಪ್ರಿಯಾಂಕಾ
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕಾ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕಾ ಕೊಟ್ಟ ಒಂದು ಹೇಳಿಕೆ ಈಗ ಎಲ್ಲರ ತಲೆಯಲ್ಲಿ ಹುಳ ಬಿಟ್ಟಂಗಾಗಿದೆ.

ಸ್ವಯಂವರ ನಡೆದರೆ....
'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ 'ದಿಢೀರ್ ಬೆಂಕಿ' ಸುತ್ತಿನಲ್ಲಿ, ''ಇವತ್ತು ನಿಮ್ಮ ಸ್ವಯಂವರ ಆದರೆ ನಿಮ್ಮ ಪ್ರಕಾರ ಯಾವ ಮೂರು ಹೀರೋಗಳು ಇರಲೇಬೇಕು.!'' ಎಂಬ ಪ್ರಶ್ನೆಯನ್ನ ನಿರೂಪಕ ಅಕುಲ್ ಬಾಲಾಜಿ, ನಟಿ ಪ್ರಿಯಾಂಕಾ ಮುಂದಿಟ್ಟರು.

ಪ್ರಿಯಾಂಕಾ ಕೊಟ್ಟ ಉತ್ತರ
ತಮ್ಮ ಸ್ವಯಂವರದಲ್ಲಿ ನಟ ದರ್ಶನ್, ನಟ ಸುದೀಪ್ ಹಾಗೂ ನಟ ವಿಜಯ್ ಸೂರ್ಯ ಇರಲೇಬೇಕು ಎಂದರು ನಟಿ ಪ್ರಿಯಾಂಕಾ.

ಕಣ್ಣರಳಿಸಿದ ಅಕುಲ್ ಬಾಲಾಜಿ.!
ನಟಿ ಪ್ರಿಯಾಂಕಾ ಕೊಟ್ಟ ಉತ್ತರ ಕೇಳಿ ಅಕುಲ್ ಬಾಲಾಜಿ ಕಣ್ಣರಳಿಸಿದರು.

ಹೇಳಿಕೆಯ ಹಿಂದಿದೆ ಒಂದು ಸೀಕ್ರೆಟ್
''ಪ್ರಿಯಾಂಕಾ ಕೊಟ್ಟ ಮೂರು ಆಯ್ಕೆಗಳ ಪೈಕಿ ಇನ್ನೂ ಮದುವೆ ಆಗದೆ ಇರುವ ಏಕೈಕ ವ್ಯಕ್ತಿ ಅಂದ್ರೆ ಅದು ವಿಜಯ್ ಸೂರ್ಯ'' ಎಂದು ಪಕ್ಕದಲ್ಲಿಯೇ ಕುಳಿತಿದ್ದ ಸೂರಜ್ ಗೌಡ ಹೇಳಿದರು. ಅದಕ್ಕೆ ಪ್ರಿಯಾಂಕಾ ಕಿಸಕ್ ಎಂದು ನಕ್ಕರು. ಜೊತೆಗೆ 'ಸತ್ಯ ಹೇಳಿದ್ದು' ಎಂದು ಒಪ್ಪಿಕೊಂಡರು. ಅಲ್ಲಿಗೆ, ಇದರ ಅರ್ಥ ಏನು.? ಪ್ರಿಯಾಂಕಾ ಅವರೇ ಬಿಡಿಸಿ ಹೇಳಬೇಕು.