»   » ಸೆಟ್ ಟಾಪ್ ಬಾಕ್ಸ್ ಅನ್ನೋದು ಇದ್ದರೆಷ್ಟು, ಬಿಟ್ಟರೆಷ್ಟು

ಸೆಟ್ ಟಾಪ್ ಬಾಕ್ಸ್ ಅನ್ನೋದು ಇದ್ದರೆಷ್ಟು, ಬಿಟ್ಟರೆಷ್ಟು

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು,ಮೈಸೂರು ಗಲ್ಲಿಗಲ್ಲಿಯಲ್ಲಿ, ಗೃಹಿಣಿಯರ ಚಾವಡಿಯಲಿ ಸೆಟ್ ಟಾಪ್ ಬಾಕ್ಸಿನದೇ ಮಾತು. ಮುಂಡಾಮೋಚ್ತು ಒಂದೂ ವಾಹಿನಿ ಸರಿಯಾಗಿ ಬರಲ್ಲಾಂತೀನಿ. ಈ ಸರಕಾರದವ್ರಿಗೆ ಬರೀ ದುಡ್ಡು ಮಾಡೋದು ಬಿಟ್ರೆ ಬೇರೇನೂ ಗೊತ್ತಿಲ್ವಾ ಎಂದು ಶಾಪ ಹಾಕುವವರೇ ಹೆಚ್ಚು.

  ಹೆಚ್ಚಾಗಿ ಕೇಬಲ್ ಆಪರೇಟರುಗಳು ಬೈಗುಳಕ್ಕೆ ಒಳಗಾಗುತ್ತಿರುವುದು ಗೃಹಿಣಿಯರಿಂದಲೇ. ಹಾಗಾಗಿ ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎನ್ನುವ ಗಾದೆ ಮಾತೊಂದು ಇದೆ ಎನ್ನುವುದು ಕೇಬಲ್ ಆಪರೇಟರುಗಳಿಗೆ ತಿಳಿದಿರಲಿ. ಹಾಗೇ, ಸಮಸ್ಯೆಗೆ ಸೂಕ್ತ ಮತ್ತು ಶೀಘ್ರ ಪರಿಹಾರ ಕಂಡುಕೊಳ್ಳಿ ಎನ್ನುವುದು ನಮ್ಮ ಕಡೆಯಿಂದ ಒಂದು ಸಲಹೆ.

  ಸೆಟ್ ಟಾಪ್ ಬಾಕ್ಸ್ ಅಂದರೇನು: ಸೆಟ್ ಟಾಪ್ ಬಾಕ್ಸ್ ಅಥವಾ ಎಸ್ಟಿಪಿ (standard tariff package) ಎಂದು ಕರೆಯಲ್ಪಡುವ ಇದು ಹೊರಗಿನ ಸಿಗ್ನಲನ್ನು ಟ್ಯೂನರ್ ಮೂಲಕ ಟೆಲಿವಿಷನಿಗೆ ನೀಡುತ್ತದೆ. ಡಿಜಿಟಲ್ ಕ್ವಾಲಿಟಿಯಲ್ಲಿ ಪಿಚ್ಚರ್ ವೀಕ್ಷಿಸಲು ಕಂಡುಕೊಂಡ ಸಾಧನವೇ ಸೆಟ್ ಟಾಪ್ ಬಾಕ್ಸ್.

  ಅಂದ ಹಾಗೆ, ಸೆಟ್ ಟಾಪ್ ಬಾಕ್ಸ್ ಕಡ್ಡಾಯಕ್ಕೂ ರಾಜ್ಯ ಸರಕಾರಕ್ಕೂ ಸಂಬಂಧವಿಲ್ಲ. ಸುಖಾ ಸುಮ್ಮನೆ ನಮ್ಮ ಸಿದ್ರಾಮಣ್ಣನಿಗೆ ಬೈಯೋದು/ಹಿಡಿಶಾಪ ಹಾಕುವುದು ಸೂಕ್ತವಲ್ಲ. ಇದು ಕೇಂದ್ರ ಸರಕಾರದ ಅಧೀನದ ದೂರಸಂಪರ್ಕ ಇಲಾಖೆಯ ನಿರ್ಧಾರ.

  ಸೆಟ್ ಟಾಪ್ ಬಾಕ್ಸಿನ ಅನುಕೂಲ ಮತ್ತು ಅನಾನುಕೂಲವೇನು? ಸ್ಲೈಡಿನಲ್ಲಿ ಓದಿ..

  ಸೆಟ್ ಟಾಪ್ ಬಾಕ್ಸಿನ ಅನುಕೂಲ

  * ನಾವು ನೋಡಬಹುದಾದ ಚಾನೆಲ್ ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ.

  * ಕೇಬಲ್ ವ್ಯವಸ್ಥೆ ಸಂಪೂರ್ಣ digitization ಆದ ಮೇಲೆ 400 ರಿಂದ 700ರ ವರೆಗೆ ಚಾನೆಲ್ ಸಂಖ್ಯೆ ಹೆಚ್ಚಾಗಲಿದೆ.
  * ಪಿಚ್ಚರ್ ಕ್ವಾಲಿಟಿ ಉನ್ನತ ಮಟ್ಟದಲ್ಲಿರುತ್ತದೆ.
  * ಟಿವಿ ವೀಕ್ಷಿಸುವಾಗ ಕ್ವಾಲಿಟಿ ಸಂಬಂಧ ಕಿರಿಕಿರಿ ಕಮ್ಮಿಯಾಗಲಿದೆ.

  ಸೆಟ್ ಟಾಪ್ ಬಾಕ್ಸಿನ ಅನುಕೂಲ

  * ಕೇಬಲ್ ಆಪರೇಟರ್ ಗಳು ಸೆಟ್ ಟಾಪ್ ಬಾಕ್ಸಿನಲ್ಲಿ HD quality ನೀಡುವ ವ್ಯವಸ್ಥೆಯನ್ನೂ ಕಲ್ಪಿಸಬಹುದು.
  * ನಮ್ಮ ಆಯ್ಕೆಯ ಕಾರ್ಯಕ್ರಮಗಳನ್ನು ರೆಕಾರ್ಡಿಂಗ್ ಮಾಡಿಕೊಳ್ಳುವ ವ್ಯವಸ್ಥೆ.
  * ಟಿವಿ ಜೊತೆ ಎಫ್ಎಂ ರೇಡಿಯೋ ಆಲಿಸುವ ವ್ಯವಸ್ಥೆ.
  * ಹಲವು ಬಗೆಯ ಗೇಮ್ಸ್ ಸೆಟ್ ಟಾಪ್ ಬಾಕ್ಸಿನಲ್ಲಿ ಅಳವಡಿಸಲಾಗಿದೆ.

  ಸೆಟ್ ಟಾಪ್ ಬಾಕ್ಸಿನ ಅನಾನುಕೂಲ

  * ಸೆಟ್ ಟಾಪ್ ಬಾಕ್ಸಿಗೆ ನೀಡಬೇಕಾದ one time charge ಬಡ ಕುಟುಂಬಕ್ಕೆ ಅನಗತ್ಯ ಹೊರೆ.
  * ಸೆಟ್ ಟಾಪ್ ಬಾಕ್ಸ್ ಇಲ್ಲದೆ ಟಿವಿ ವೀಕ್ಷಿಸಲಾಗುವುದಿಲ್ಲ.
  * ಪೇ ಚಾನೆಲ್ ಅಲ್ಲದ ವಾಹಿನಿಗಳನ್ನು ನೋಡಲು ಅಸಾಧ್ಯ,
  * ಗುಡುಗು, ಸಿಡಿಲು ಬಂದಾಗ ಸೆಟ್ ಬಾಕ್ಸ್ ಸಿಗ್ನಲಿನಲ್ಲಿ ವ್ಯತ್ಯಯ ಉಂಟಾಗುತ್ತದೆ.

  ಬೆಂಗಳೂರಿನಲ್ಲಿರುವ ಕೇಬಲ್ ಆಪರೇಟರ್ ಸಂಸ್ಥೆಗಳು

  1. ಹಾಥ್ ವೇ
  2. ಇನ್ ಕೇಬಲ್
  3. ಡೆನ್ ಕೇಬಲ್
  4. ಸಿಟಿ ಕೇಬಲ್
  5. ಕೇಬಲ್ ಫಸ್ಟ್
  6. ಕೈಜನ್
  7. ಯು ಟೆಲಿಕಾಂ

  ಕೇಬಲ್ ಆಪರೇಟರ್ ರಹಿತ ಡಿಟಿಎಚ್ ಸೇವಾ ಸಂಸ್ಥೆಗಳು

  ಟಾಟಾ ಸ್ಕೈ
  ಡಿಷ್ ಟಿವಿ
  ವಿಡಿಯೋಕಾನ್
  ಏರ್ ಟೆಲ್
  ಸನ್ ಡೈರೆಕ್ಟ್

  English summary
  TV viewers in Bangalore and Mysore struggling because of set-top box. Here is advantage and disadvantage of set-top box.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more