»   » ಈ ವೀಕೆಂಡ್‌ನಲ್ಲಿ 'ಮಜಾ ಟಾಕೀಸ್' ನೋಡುವುದಕ್ಕೆ 7 'ಪವರ್'ಫುಲ್ ಕಾರಣಗಳಿವು..

ಈ ವೀಕೆಂಡ್‌ನಲ್ಲಿ 'ಮಜಾ ಟಾಕೀಸ್' ನೋಡುವುದಕ್ಕೆ 7 'ಪವರ್'ಫುಲ್ ಕಾರಣಗಳಿವು..

Posted By:
Subscribe to Filmibeat Kannada

'ಅಪ್ಪು' ಅಭಿಮಾನಿಗಳು ಹಲವು ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಕ್ಷಣಕ್ಕೆ ದಿನಗಣನೆ ಶುರುವಾಗಿದೆ. ಅವರು ಅತಿಥಿಯಾಗಿ ಆಗಮಿಸಿರುವ 'ಮಜಾ ಟಾಕೀಸ್' ಎಪಿಸೋಡ್ ಇದೇ ಜುಲೈ 1 ಮತ್ತು 2 ನೇ ತಾರೀಖು ಪ್ರಸಾರವಾಗಲಿದೆ.['ಅಪ್ಪು' ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಡ್ತು!]

ಅಯ್ಯೋ 'ಮಜಾ ಟಾಕೀಸ್' ಕಾರ್ಯಕ್ರಮ ಅಂದ್ಮೇಲೆ ಇನ್ನೇನಿರುತ್ತೆ. ಯಾರೇ ಸೆಲೆಬ್ರಿಟಿಗಳು ಬಂದ್ರು ಅವರ ಜೊತೆ ಒಂದಷ್ಟು ಮಾತುಕತೆ, ಕುರಿ ಪ್ರತಾಪ್ ಮತ್ತು ಇತರರ ಒಂದಷ್ಟು ಪಂಚಿಂಗ್ ಹಾಸ್ಯ ಡೈಲಾಗ್ ಗಳು, ಬಿಟ್ರೆ ಯಾರಾದ್ರು ಒಬ್ರು ಹೆಚ್ಚಾಗಿ ಕಾಮಿಡಿ ಡೈಲಾಗ್ ಹೊಡಿತಾರೆ. ಅಷ್ಟರಲ್ಲೇ ಟೈಮ್ ಆಗಿರುತ್ತೆ ಕಾರ್ಯಕ್ರಮ ಮುಗಿಯುತ್ತೆ ಅಂತ ಯಾರು ಸಹ ಈ ವಾರ ನೆಗ್‌ಲೆಟ್ ಮಾಡುವಹಾಗಿಲ್ಲ. ಯಾಕಂದ್ರೆ ಈ ವಾರದ ಅತಿಥಿ ಸ್ಯಾಂಡಲ್ ವುಡ್ ನ 'ಪವರ್ ಸ್ಟಾರ್'. ಜುಲೈ 1-2 ನೇ ತಾರೀಖು 'ಮಜಾ ಟಾಕೀಸ್' ಕಾರ್ಯಕ್ರಮ ನೋಡಲು ಏಳು ವಿಶೇಷ ಕಾರಣಗಳಿವೆ. ಅವುಗಳ ಬಗ್ಗೆ ಮುಂದೆ ಓದಿ ತಿಳಿಯಿರಿ.

ಮಕ್ಕಳೊಂದಿಗೆ ಅಪ್ಪು ಡ್ಯಾನ್ಸ್

ಕನ್ನಡದ ರಾಜರತ್ನ ಅತಿಥಿಯಾಗಿರುವ 'ಮಜಾ ಟಾಕೀಸ್' ಎಪಿಸೋಡ್ ಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ಆಗಮಿಸಿ ಡ್ಯಾನ್ಸ್ ಮಾಡಿದ್ದಾರೆ. ಕನ್ನಡ ಕಲಾರಸಿಕರ ನೆಚ್ಚಿನ ಅಪ್ಪು ಸಹ ಮಕ್ಕಳೊಂದಿಗೆ ಅದ್ಧೂರಿ ಸ್ಟೆಪ್ ಹಾಕಿದ್ದಾರೆ. ಮಕ್ಕಳೊಂದಿಗೆ ಪುನೀತ್ ರಾಜ್ ಕುಮಾರ್ ಡ್ಯಾನ್ಸ್ ಮಾಡಿರುವ ಆ ಅಪರೂಪದ ನೃತ್ಯವನ್ನು ಕಣ್ತುಂಬಿಕೊಳ್ಳಬಹುದು.

ಮಜಾ ಟಾಕೀಸ್ ನಲ್ಲಿ ಮ್ಯಾಜಿಕ್

ಪ್ರತಿ ಎಪಿಸೋಡ್ ಗೆ ಆಗಮಿಸುವ ಸೆಲೆಬ್ರಿಟಿಗಳಿಂದ ಹಾಡು ಹೇಳಿಸುವುದು, ನಟನೆ ಮಾಡಿಸುವ ಮುಖಾಂತರ 'ಮಜಾ ಟಾಕೀಸ್'ನಲ್ಲಿ ಮನರಂಜನೆ ನೀಡಲಾಗುತ್ತಿತ್ತು. ಆದರೆ ಪುನೀತ್ ರಾಜ್ ಕುಮಾರ್ ಅತಿಥಿ ಆಗಿರುವ 'ಮಜಾ ಟಾಕೀಸ್' ಸಂಚಿಕೆಗೆ ಜಾದುಗಾರರು ಆಗಮಿಸಿ ಪುನೀತ್ ಕೈಯಲ್ಲು ಸಹ ಮ್ಯಾಜಿಕ್ ಮಾಡಿಸಲಾಗಿದೆ.

ರೆಮೋ ಜೊತೆಗೆ ಪುನೀತ್ ಹಾಡು

'ಮಜಾ ಟಾಕೀಸ್'ನ ಸ್ಪೆಷಲ್ ಸಿಂಗರ್ ರೆಮೋ ಜೊತೆ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಆದರೆ ಅವರು ಹಾಡಿರುವ ವಿಶೇಷ ಸಾಂಗ್ ಯಾವುದು ಎಂದು ಕಾರ್ಯಕ್ರಮ ನೋಡಿಯೇ ತಿಳಿಯಿರಿ.

ಬಾಲ್ಯದ ಕ್ಷಣಗಳ ಮೆಲುಕು

ತಾರೆಗಳ ಬಾಲ್ಯ ಜೀವನ ಹೇಗಿತ್ತು ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆ. ತಮ್ಮ ನೆಚ್ಚಿನ ನಟನ ಬಾಲ್ಯದ ಬಗ್ಗೆ ತಿಳಿಯುವುದು ಅಂದ್ರೆ ಎಲ್ಲಿಲ್ಲದ ಖುಷಿ. ಅದರಲ್ಲೂ ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ರವರ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ ಚೈಲ್ಡ್‌ಹುಡ್ ಹೇಗಿತ್ತು ಎಂಬುದು ತುಂಬಾ ಇಂಟ್ರೆಸ್ಟಿಂಗ್ ವಿಷಯ. ಯಾಕಂದ್ರೆ ಅವರು ಬಾಲ್ಯದಿಂದಲೇ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು. 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ 'ಅಪ್ಪು' ತಮ್ಮ ಬಾಲ್ಯದ ಹಲವು ಮರೆಯಲಾಗದ ಘಟನೆಗಳನ್ನು ಹಂಚಿಕೊಂಡಿದ್ದು ಅವುಗಳನ್ನು ತಿಳಿಯುವ ಹಂಬಲ ಇರುವವರು ಈ ಕಾರ್ಯಕ್ರಮ ನೋಡಲೇಬೇಕು.

ಅಭಿಮಾನಿಗಳಿಂದ ವಿಶೇಷ ಗಿಫ್ಟ್

ಪುನೀತ್ ರಾಜ್ ಕುಮಾರ್ 'ಮಜಾ ಟಾಕೀಸ್' ಸಂಚಿಕೆಗೆ ಅವರ ಅಭಿಮಾನಿಗಳು ಬಂದು ವಿಶೇಷ ರೀತಿಯ ಉಡುಗೊರೆ ನೀಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಈ ಮೇಲಿನ ಫೋಟೋ ನೋಡಿ. ಆದರೆ ಇನ್ನೂ ಹಲವು ಅಭಿಮಾನಿಗಳು ಏನೇನು ಸರ್‌ಪ್ರೈಸ್ ನೀಡಿದ್ದಾರೆ ಅನ್ನೋದನ್ನ ಕಾರ್ಯಕ್ರಮ ನೋಡಿಯೇ ತಿಳಿಯಬೇಕು.

'ಕನ್ನಡದ ಕೋಟ್ಯಾಧಿಪತಿ'

ಪುನೀತ್ ರಾಜ್ ಕುಮಾರ್ ನಿರೂಪಕರಾಗಿ ನಡೆಸಿಕೊಡುತ್ತಿದ್ದ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಆ ಕಾರ್ಯಕ್ರಮವನ್ನು ಪುನೀತ್ ರವರು ಅತಿಥಿಯಾಗಿರುವ ಸಂಚಿಕೆಯಲ್ಲಿ ರೀಕ್ರಿಯೇಟ್ ಮಾಡಲಾಗಿದೆ. ಈ ವಿಶೇಷತೆಯನ್ನು ಈ ವಾರ ಎಲ್ಲರೂ ಕಣ್ತುಂಬಿಕೊಳ್ಳಬಹುದಾಗಿದೆ.

ಮಕ್ಕಳಿಂದ 'ಅಪ್ಪು'ಗೆ ಸ್ವಾಗತ

ಪುನೀತ್ ರಾಜ್ ಕುಮಾರ್ ಸಂಚಿಕೆಗಾಗಿ 'ಮಜಾ ಟಾಕೀಸ್' ಮನೆಯನ್ನು ಇಂದೆಂದು ನೋಡಿರದ ರೀತಿಯಲ್ಲಿ ಅಲಂಕಾರ ಮಾಡಿ ಶೂಟ್ ಮಾಡಲಾಗಿದೆ. ಅಲ್ಲದೇ ಮಕ್ಕಳೇ ವಿಶೇಷ ರೀತಿಯಲ್ಲಿ ಅವರನ್ನು ಸ್ವಾಗತಿಸಿದ್ದು ಆ ದೀರ್ಘಕಾಲದ ಅದ್ಭುತ ಕ್ಷಣಗಳನ್ನು ನೋಡಲು ಈ ಶನಿವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿ ಮುಂದೆ ಎಲ್ಲರೂ ಕೂರಲೇಬೇಕು.

English summary
Power Star Puneeth Rajkumar participated 'Majaa Talkies' episode telecasting on July 1st. This episode is also 'Majaa Talkies' 250th special episode and it has 7 power full reasons to watch.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada