For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಗೆದ್ದ ಆಧುನಿಕ ಕೃಷಿಕ: ಸ್ಟೆಪ್ ಹಾಕ್ತಾವ್ರೆ ಶಶಿ ಫ್ಯಾನ್ಸ್.!

  |

  ಅದು ಫೇಕ್ ಐಡಿಗಳೋ ಅಥವಾ ನಿಜವಾದ ಫ್ಯಾನ್ಸೋ.. ಅದರ ವಾದ-ವಿವಾದ ತರ್ಕ ಆಮೇಲೆ. ಒಟ್ನಲ್ಲಿ, 'ಬಿಗ್ ಬಾಸ್' ಮನೆಯೊಳಗೆ 'ಮಾಡರ್ನ್ ರೈತ' ಅಂತ ಹೇಳಿಕೊಂಡು ಚಿಂತಾಮಣಿಯ ಯುವಕ ಶಶಿ ಕುಮಾರ್ ಕಾಲಿಟ್ಟ ಮೇಲೆ, ಸೋಷಿಯಲ್ ಮೀಡಿಯಾದಲ್ಲಿ ದಿಢೀರನೇ ಹೆಚ್ಚು ಫ್ಯಾನ್ಸ್ ಹುಟ್ಟಿಕೊಂಡರು.

  ಅ ಎಲ್ಲಾ ಅಭಿಮಾನಿಗಳ ಕೃಪೆಯಿಂದ ಇಂದು ಶಶಿ ಮೊಗದಲ್ಲಿ ಮಂದಹಾಸ ಮೂಡಿದೆ. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ವಿನ್ನರ್ ಆಗಿದ್ದಾರೆ ಶಶಿ ಕುಮಾರ್.

  ರೈತ ಆಗಿದ್ದುಕೊಂಡು 'ಬಿಗ್ ಬಾಸ್' ಮನೆಯಲ್ಲಿ ರೈತರ ಬಗ್ಗೆ ಏನನ್ನೂ ಮಾತನಾಡದ ಶಶಿಗೆ ವಿನ್ನರ್ ಪಟ್ಟ ಕೊಟ್ಟಿರುವುದು ಹಲವು ವೀಕ್ಷಕರಿಗೆ ಖುಷಿ ನೀಡಿಲ್ಲ. ಆದ್ರೆ, ಅಭಿಮಾನಿಗಳು ಮಾತ್ರ ಶಶಿ ಗೆದ್ದಿರುವುದಕ್ಕೆ ಸ್ಟೆಪ್ಸ್ ಹಾಕ್ತಿದ್ದಾರೆ. 'ಬಿಗ್ ಬಾಸ್'ಗೆ ಜೈಕಾರ ಕೂಗುತ್ತಿದ್ದಾರೆ.

  ಕಾಮನ್ ಮ್ಯಾನ್ ಶಶಿಗೆ 'ವಿಜೇತ' ಟ್ರೋಫಿ ನೀಡಿದ 'ಬಿಗ್ ಬಾಸ್'ಗೆ ಉಘೇ ಉಘೇ ಎನ್ನುತ್ತ ಕೆಲ ಫ್ಯಾನ್ಸ್ ಮಾಡಿರುವ ಕಾಮೆಂಟ್ಸ್ ಇಲ್ಲಿವೆ, ನೋಡಿರಿ...

  ಹಾಕ್ರೋ ಸ್ಟೆಪ್ಪು.!

  ಹಾಕ್ರೋ ಸ್ಟೆಪ್ಪು.!

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ವಿನ್ನರ್ ಆಗಿದ್ದಾರೆ ಶಶಿ ಕುಮಾರ್. ಎಲ್ಲಾ ಶಶಿ ಫ್ಯಾನ್ಸ್ ಹಾಕ್ರೋ ಸ್ಟೆಪ್ಪು ಅಂತ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

  'ಮಾರ್ಡನ್ ರೈತ' ಶಶಿ ಮುಡಿಗೆ 'ಬಿಗ್ ಬಾಸ್ ಕನ್ನಡ-6' ಗೆಲುವಿನ ಗರಿ.!

  ಮಣ್ಣಿನ ಮಗನಿಗೆ ಅಭಿನಂದನೆ

  ಮಣ್ಣಿನ ಮಗನಿಗೆ ಅಭಿನಂದನೆ

  ಚಿಂತಾಮಣಿಯ ಯುವಕ ಶಶಿ 'ಬಿಗ್ ಬಾಸ್' ಗೆದ್ದಿರುವುದಕ್ಕೆ ಚಿಂತಾಮಣಿಯ ಜನತೆ ಫುಲ್ ಖುಷಿಯಾಗಿದ್ದಾರೆ. ಅದಕ್ಕೆ ಕಾಮೆಂಟ್ಸ್ ಸಾಕ್ಷಿ.

  ಈ ಬಾರಿಯ 'ಬಿಗ್ ಬಾಸ್' ವಿನ್ನರ್ ನವೀನ್ ಸಜ್ಜು?

  ನಿಜವಾದ ವಿನ್ನರ್.!

  ನಿಜವಾದ ವಿನ್ನರ್.!

  'ಬಿಗ್ ಬಾಸ್' ಕಾರ್ಯಕ್ರಮದ ನಿಜವಾದ ವಿನ್ನರ್ ಶಶಿಗೆ ಅಭಿನಂದನೆಗಳು. ನೀವು 'ಬಿಗ್ ಬಾಸ್' ಗೆದ್ದಿರುವುದಕ್ಕೆ ನನಗೆ ನಿಜವಾಗಲೂ ಖುಷಿ ಆಗಿದೆ ಅಂತಿದ್ದಾರೆ ಅಭಿಮಾನಿಗಳು.

  ಒಳ್ಳೆಯವರನ್ನು ಹೊರಗೆ ತಳ್ಳುವ 'ಡಬ್ಬಾ' ಬಿಗ್ ಬಾಸ್ ಗೆ ಮಹಾ ಮಂಗಳಾರತಿ ಎತ್ತಿದ ವೀಕ್ಷಕರು.!

  ನ್ಯಾಯ ಸಿಕ್ತು.!

  ನ್ಯಾಯ ಸಿಕ್ತು.!

  ''ಅಂತೂ ಇಂತೂ ಮೊದಲ ಬಾರಿ ನ್ಯಾಯ ಸಿಕ್ತು. ರೈತ ಶಶಿಗೆ ಶುಭಾಶಯಗಳು. ಗೆದ್ದ ಹಣವನ್ನು ಯುವಕರಿಗೆ ಮತ್ತು ರೈತರ ಸಬಲೀಕರಣಕ್ಕೆ ಬಳಸುವೆ ಅಂತ ಹೇಳಿ ಜನತೆಗೆ ಶಶಿ ಇನ್ನಷ್ಟು ಹತ್ತಿರವಾಗಿದ್ದಾರೆ'' ಎಂದು ಫ್ಯಾನ್ಸ್ ಕಾಮೆಂಟ್ ಹಾಕಿದ್ದಾರೆ.

  ಬಿಗ್ ಬಾಸ್.. ಈ ಬಾರಿ ನೀವು ವೀಕ್ಷಕರಿಗೆ ಈ ಅವಕಾಶ ನೀಡಿಲ್ಲ ಯಾಕೆ.?

  ಅದೇ ಸಂತೋಷ.!

  ಅದೇ ಸಂತೋಷ.!

  ''ಒಬ್ಬ ಸಾಮಾನ್ಯ ಯುವ ರೈತನಿಗೆ ಸಂದ ಜಯವಿದು. ಕೊನೆಗೂ ಕಲರ್ಸ್ ನವರಿಗೆ ಬುದ್ಧಿ ಬಂತಲ್ಲ. ಈ ಸಲನಾದ್ರೂ ಕಾಮನ್ ಮ್ಯಾನ್ ನ ಗೆಲ್ಸಿದ್ರಲ್ಲ ಅದೇ ಸಂತೋಷ'' ಅಂತಾವ್ರೆ ವೀಕ್ಷಕರು.

  'ಬಿಗ್ ಬಾಸ್' ನಿಮ್ಗೆ ತಲೆ ಕೆಟ್ಟಿದ್ಯಾ.? ಹೋಗಿ ಹೋಗಿ ಡವ್ ರಾಜನ್ನ ಗೆಲ್ಸಿದ್ದೀರಲ್ಲ.! ಅನ್ನದಾತರಿಗೆ ಅವಮಾನ.!

  ನಿಜವಾದ ಆಟಗಾರನೇ ಗೆಲ್ಲೋದು.!

  ನಿಜವಾದ ಆಟಗಾರನೇ ಗೆಲ್ಲೋದು.!

  ''ಸೂಪರ್ ನಿರ್ಧಾರ. ಕೊನೆಗೂ ಗೆದ್ದ ಶಶಿ. ಯಾವತ್ತೂ ನಿಜವಾದ ಆಟಗಾರನೇ ಗೆಲ್ಲೋದು ಅಂತ ಪ್ರೂವ್ ಆಯ್ತು'' ಎಂಬುದು ಶಶಿ ಅಭಿಮಾನಿಯೊಬ್ಬರ ಅಭಿಪ್ರಾಯ.

  ನಿಮ್ಮ ಅಭಿಪ್ರಾಯವನ್ನು ತಿಳಿಸಿ...

  ನಿಮ್ಮ ಅಭಿಪ್ರಾಯವನ್ನು ತಿಳಿಸಿ...

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಶಶಿ ಕುಮಾರ್ ವಿನ್ನರ್ ಆಗಿದ್ದಕ್ಕೆ ನಿಮ್ಮ ಪ್ರತಿಕ್ರಿಯೆ ಏನು.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 6: Viewers have taken Colors Super official Facebook page to express their happiness for making Shashi Kumar as Winner.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X