Don't Miss!
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- News
Indira Canteens: ಇಂದಿರಾ ಕ್ಯಾಂಟೀನ್ಗಳಲ್ಲಿ ಕುಡಿಯಲು ನೀರಿಲ್ಲ, ಬಿಲ್ ಕಟ್ಟಿಲ್ಲ ಎಂದು ಸಂಪರ್ಕ ಕಡಿತ
- Sports
ಮೂಲೆಗುಂಪಾದ ಶಿಖರ್ ಧವನ್ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ: ಇಶಾನ್, ಗಿಲ್ ಬಗ್ಗೆ ಹೇಳಿದ್ದೇನು?
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಮೇಶ್ ಅರವಿಂದ್ 'ಯಾರಿ' ಆಗಿ 'ಇವರು' ಬರಬೇಕಿತ್ತು.!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಕಾರ್ಯಕ್ರಮ 'ನಂ.1 ಯಾರಿ ವಿತ್ ಶಿವಣ್ಣ'. ಸ್ನೇಹಿತರ ಸ್ನೇಹ ಸಂಬಂಧ, ಅನುಬಂಧ ಸಾರುವ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಕುಚಿಕ್ಕು ಗೆಳೆಯರಾದ ಉಪೇಂದ್ರ-ಗುರುಕಿರಣ್, ಶರಣ್-ತರುಣ್ ಸುಧೀರ್, ಯೋಗಿ-ದಿಗಂತ್ ಭಾಗವಹಿಸಿದ್ದರು.
ಈಗ ಇದೇ ಕಾರ್ಯಕ್ರಮದಲ್ಲಿ ನಟ-ನಿರ್ದೇಶಕ ರಮೇಶ್ ಅರವಿಂದ್ ಪಾಲ್ಗೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ರಮೇಶ್ ಅರವಿಂದ್ ಆತ್ಮೀಯ ಸ್ನೇಹಿತ ಯಾರು ಅಂದ್ರೆ ಮುಲಾಜಿಲ್ಲದೇ ನೀಡಬಹುದಾದ ಉತ್ತರ 'ಕರುನಾಡ ಚಕ್ರವರ್ತಿ' ಶಿವರಾಜ್ ಕುಮಾರ್.
ಆದ್ರೆ, ಸ್ವತಃ ಶಿವಣ್ಣ ಕಾರ್ಯಕ್ರಮವನ್ನ ಹೋಸ್ಟ್ ಮಾಡ್ತಿರೋದ್ರಿಂದ ರಮೇಶ್ ಜೊತೆ 'ಯಾರಿ' ಅಗಿ ಕೂರುವ ಅವಕಾಶ ಅವರಿಗೆ ಸಿಗಲಿಲ್ಲ. ಹೀಗಾಗಿ, ರಮೇಶ್ ಅರವಿಂದ್ ತಮ್ಮ ಬೇರೆ ಸ್ನೇಹಿತನನ್ನ ಕರೆದುಕೊಂಡು ಬರಬೇಕಾಗಿತ್ತು. ಆಗ ರಮೇಶ್ ಕಣ್ಣಿಗೆ ಬಿದ್ದವರು 'ಗೌರವ್'. ಮುಂದೆ ಓದಿರಿ...

ಯಾರು ಈ ಗೌರವ್.?
'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ 'ಯಾರಿ' ಆಗಿ ಬಂದವರು ಗೌರವ್. ಈ ಗೌರವ್ ಬೇರಾರೂ ಅಲ್ಲ, ರಮೇಶ್ ಅರವಿಂದ್ ಸೋದರ ಅಳಿಯ.
'ನಂ.1
ಯಾರಿ
ವಿತ್
ಶಿವಣ್ಣ'
ಕಾರ್ಯಕ್ರಮ
ದಿಢೀರ್
ಮುಕ್ತಾಯ:
ಕಾರಣವೇನು.?

ಶಿವಣ್ಣ ನನ್ನ 'ಯಾರಿ'
''ನನ್ನ ಯಾರಿ ಆಗಿ ನೀವು (ಶಿವರಾಜ್ ಕುಮಾರ್) ಬರಬೇಕಿತ್ತು. ಆದ್ರೆ ನೀವೇ ಹೋಸ್ಟ್. ಹೀಗಾಗಿ ಬೇರೆ ಫ್ರೆಂಡ್ ಕರೆದುಕೊಂಡು ಬಂದಿದ್ದೇನೆ. ನನ್ನ ಬಹುತೇಕ ಫ್ರೆಂಡ್ಸ್ ಇರುವುದು ವಿದೇಶದಲ್ಲಿ. ಇಲ್ಲಿ ನನಗೆ ತುಂಬಾ ಕ್ಲೋಸ್ ಆಗಿರುವುದು ನನ್ನ ಸೋದರ ಅಳಿಯ'' ಎಂದು ಗೌರವ್ ರನ್ನ ಪರಿಚಯ ಮಾಡಿಸಿದರು ರಮೇಶ್ ಅರವಿಂದ್.

ಶಿವಣ್ಣಗೆ ಥ್ಯಾಂಕ್ಸ್ ಹೇಳಿದ ರಮೇಶ್ ಅರವಿಂದ್
''ನಮ್ಮೂರ ಮಂದಾರ ಹೂವೆ' ಚಿತ್ರದ ಸೆಟ್ ನಲ್ಲಿ ನಾನು ನಿಮ್ಮನ್ನ ಮೊದಲ ಬಾರಿಗೆ ಭೇಟಿ ಮಾಡಿದ್ದು. ನಮ್ಮ ಮೊದಲ ಭೇಟಿಯಿಂದ ಹಿಡಿದು ಇಲ್ಲಿಯವರೆಗೂ (ಸುಮಾರು 24 ವರ್ಷಗಳು) ಒಂದೇ ಒಂದು ಅಹಿತಕರ ಕ್ಷಣ ಕೂಡ ಇಲ್ಲ. ಅದಕ್ಕೋಸ್ಕರ ಥ್ಯಾಂಕ್ಯು'' ಎಂದು ಶಿವಣ್ಣನಿಗೆ ಅಪ್ಪುಗೆ ನೀಡಿದರು ರಮೇಶ್ ಅರವಿಂದ್.

ಗ್ಯಾರೆಂಟಿ ಸಿನಿಮಾ ಮಾಡ್ತೀವಿ
''ಮುಂದಿನ ವರ್ಷ ಗ್ಯಾರೆಂಟಿ ನಾವಿಬ್ಬರು ಸೇರಿ ಒಂದು ಸಿನಿಮಾ ಮಾಡ್ತೀವಿ. ರಮೇಶ್ ಅರವಿಂದ್ ನಿರ್ದೇಶನದಲ್ಲಿ ನಾವಿಬ್ಬರೂ ಆಕ್ಟ್ ಮಾಡ್ತೀವಿ'' ಎಂದು ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಘೋಷಿಸಿದರು. ಅಲ್ಲಿಗೆ, ರಮೇಶ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ನೀವು ಒಂದು ಸಿನಿಮಾ ನಿರೀಕ್ಷೆ ಮಾಡಬಹುದು.