Just In
Don't Miss!
- News
ಕೊರೊನಾ ಲಸಿಕೆ ಪಡೆದವರೂ ಸೋಂಕು ಹರಡಬಹುದು: ತಜ್ಞರು
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 24ರ ಚಿನ್ನ, ಬೆಳ್ಳಿ ದರ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಸೀರಿಯಲ್ ಕ್ಷೇತ್ರ'ಕ್ಕೆ ಕಾಲಿಟ್ಟ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ

ಸಿನಿಮಾ ಕಲಾವಿದರು ಅಂದ ಮಾತ್ರಕ್ಕೆ ಕೇವಲ ಅಭಿನಯವಷ್ಟೇ ಅವರ ಕೆಲಸವಲ್ಲ. ಅಭಿನಯ ಹೊರತು ಪಡಿಸಿದಂತೆ ಬೇರೆ ಬೇರೆ ಕ್ಷೇತ್ರದಲ್ಲೂ ತಮ್ಮನ್ನ ಗುರುತಿಸಿಕೊಳ್ಳುವುದು ಕಾಮನ್. ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ಹ್ಯಾಟ್ರಿಕ್ ಹೀರೋ ಈಗ ಕಿರುತೆರೆಯಲ್ಲಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
'ನಾನಿರುವಿದೆ ನಿಮಗಾಗಿ' ಹಾಗೂ 'ಕಿಕ್' ಶೋಗಳಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ ಈಗ ಮೆಗಾ ಸೀರಿಯಲ್ ನತ್ತ ಮುಖ ಮಾಡಿದ್ದಾರೆ. ಶಿವರಾಜ್ ಕುಮಾರ್ ನಿರ್ಮಾಣದ ಸಂಸ್ಥೆಗೆ ಡಿಸೆಂಬರ್ 18(ಶನಿವಾರ) ಅಧಿಕೃತವಾಗಿ ಚಾಲನೆ ಸಿಗಲಿದೆ. ವಿಶೇಷ ಅಂದ್ರೆ ಈ ಬಾರಿ ಶಿವಣ್ಣ ತಮ್ಮ ಮಗಳನ್ನೂ ಜೊತೆಯಲ್ಲಿ ಕರೆತಂದಿದ್ದಾರೆ.

ಕಿರುತೆರೆಯಲ್ಲಿ ಧಾರಾವಾಹಿ ನಿರ್ಮಾಣ
ಶಿವರಾಜ್ ಕುಮಾರ್ ನಿರ್ಮಾಣದ ಸಂಸ್ಥೆಗೆ 'ಶ್ರೀ ಮುತ್ತು ಸಿನಿ ಸರ್ವಿಸ್' ಅಂತ ಹೆಸರಿಡಲಾಗಿದೆ. ಈಗಾಗ್ಲೇ ಇದೇ ಹೆಸರಿನಲ್ಲಿ ಹೊರಾಂಗಣ ಚಿತ್ರೀಕರಣ (ಔಟ್ ಡೋರ್ ಯೂನಿಟ್ ) ಘಟಕ ಇದೆ. ಈಗ ಅದೇ ಹೆಸರಿನಲ್ಲಿ ಶಿವಣ್ಣ 'ಧಾರಾವಾಹಿ' ನಿರ್ಮಾಣಕ್ಕೆ ಮುಂದಾಗಿದ್ದಾರೆ

ಪದ್ಮ ವಾಸಂತಿ-ಶ್ರೀನಾಥ್ ನಟನೆ
ಶಿವರಾಜ್ ಕುಮಾರ್ ನಿರ್ಮಾಣದ ಧಾರಾವಾಹಿ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಧಾರಾವಾಹಿಯಲ್ಲಿ ನಟಿ 'ಪದ್ಮಾವಾಸಂತಿ' ಹಾಗೂ 'ಪ್ರಣಯರಾಜ ಶ್ರೀನಾಥ್' ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಿರುತೆರೆಯಲ್ಲಿ ಒಂದಾದ ಜೋಡಿ
'ಪಟ್ಟಣ್ಣ ಕಣಗಾಲ್' ನಿರ್ದೇಶನದ 'ಮಾನಸ ಸರೋವರ' ಸಿನಿಮಾದಲ್ಲಿ 'ಶ್ರೀನಾಥ್' ಹಾಗೂ 'ಪದ್ಮವಾಸಂತಿ' ಅಭಿನಯಿಸಿದ್ರು. ಈಗ ಅದೇ ಹೆಸರಿನ ಧಾರಾವಾಹಿಯಲ್ಲಿ ಅದೇ ಜೋಡಿ ಕಾಣಿಸಿಕೊಳ್ತಿದೆ. 'ರಾಮಚಂದ್ರ ವೈದ್ಯ' ಎಂಬುವರು ಧಾರಾವಾಹಿಯ ನಿರ್ದೇಶನದ ಜವಾಬ್ದಾರಿಯನ್ನ ಹೊತ್ತಿದ್ದಾರೆ.

19 ವರ್ಷದ ನಂತ್ರ ಮತ್ತೆ ಸಿನಿಮಾರಂಗಕ್ಕೆ
ಶಿವರಾಜ್ ಕುಮಾರ್ ಕಿರಿಯ ಪುತ್ರಿ 'ನಿವೇದಿತಾ'ರ ಹೆಸರಿನಲ್ಲಿ ಧಾರಾವಾಹಿ ನಿರ್ಮಾಣವಾಗ್ತಿದೆ. 19 ವರ್ಷಗಳ ಹಿಂದೆ 'ನಿವೇದಿತಾ' 'ಅಂಡಮಾನ್' ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ರು. ಈಗ ನಿರ್ಮಾಪಕಿಯಾಗಿ ಮತ್ತೆ ಸಿನಿಮಾರಂಗದತ್ತ ಹೆಜ್ಜೆ ಹಾಕುತಿದ್ದಾರೆ.