»   » ಕನ್ನಡ ಸಿನಿಮಾರಂಗಕ್ಕೆ ಸಿಕ್ಕಾಯ್ತು ಹೊಸ ಲೀಡರ್ !

ಕನ್ನಡ ಸಿನಿಮಾರಂಗಕ್ಕೆ ಸಿಕ್ಕಾಯ್ತು ಹೊಸ ಲೀಡರ್ !

Posted By:
Subscribe to Filmibeat Kannada
ಶಿವಣ್ಣನ ಪ್ರಕಾರ ಕನ್ನಡ ಸಿನಿಮಾರಂಗಕ್ಕೆ ಹೊಸ ಲೀಡರ್ ಸಿಕ್ಕಾಯ್ತು ! | Filmibeat Kannada

ಯಾವುದೇ ಸಿನಿಮಾರಂಗವಾದರೂ ಅದನ್ನ ನೆಡೆಸಿಕೊಂಡು ಹೋಗಲು ಒಬ್ಬ ಲೀಡರ್ ನ ಅವಶ್ಯಕತೆ ಇದ್ದೇ ಇರುತ್ತೆ. ಚಿತ್ರರಂಗದಲ್ಲಿ ಸಮಸ್ಯೆಗಳಾದ, ಶೂಟಿಂಗ್ ವೇಳೆಯಲ್ಲಿ ಏನಾದರೂ ಹೆಚ್ಚು ಕಮ್ಮಿ ಆದಾಗ ಸಿನಿಮಾದಲ್ಲಿ ಕೆಲಸ ಮಾಡುವ ಕಾರ್ಮಿಕರ ನೋವು ನಲಿವುಗಳನ್ನ ಹಂಚಿಕೊಳ್ಳಲು ಯಾರದರೂ ಒಬ್ಬರು ನಿಂತು ಚಿತ್ರರಂಗವನ್ನ ಮುನ್ನಡೆಸಬೇಕಾಗುತ್ತದೆ. ಸದ್ಯ ಕನ್ನಡ ಸಿನಿಮಾರಂಗವನ್ನ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಶಿವರಾಜ್ ಕುಮಾರ್ ಮುಂದೆ ನಿಂತು ನಡೆಸಿಕೊಂಡು ಹೋಗುತ್ತಿದ್ದಾರೆ.

ಮುಂದಿನ ಪೀಳಿಗೆಯನ್ನ ಮುನ್ನೆಡೆಸಲು ಸ್ಯಾಂಡಲ್ ವುಡ್ ಗೆ ಹೊಸ ಲೀಡರ್ ಸಿಕ್ಕಾಗಿದೆ. ಅದ್ಯಾರಪ್ಪಾ ಅಂದ್ರೆ ರಾಕಿಂಗ್ ಸ್ಟಾರ್ ಯಶ್. ಹೌದು ಈ ಮಾತನ್ನ ನಾವು ಹೇಳಿದಲ್ಲಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವ್ರೇ ಹೇಳಿದ್ದು.

Shruti Hariharan and Shraddha Srinath part of no 1 Yaari with shivanna program.

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್

ಶಿವಣ್ಣ ನಡೆಸಿಕೊಡುವ 'ನಂ 1 ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ನಟಿ ಶೃತಿ ಹರಿಹರನ್ ಶಿವರಾಜ್ ಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾರಂಗವನ್ನ ಯಾರು ಚೆನ್ನಾಗಿ ನಡೆಸಿಕೊಂಡು ಹೋಗಬಹುದು, ಕನ್ನಡ ಚಿತ್ರರಂಗವನ್ನ ಬೇರೆಯದ್ದೇ ಹಂತಕ್ಕೆ ಯಾರು ತೆಗೆದುಕೊಂಡು ಹೋಗುತ್ತಾರೆ ಎಂದು ಕೇಳಿದಾಗ ಶಿವಣ್ಣ ನನ್ನ ಪ್ರಕಾರ ಯಶ್ ಅಂತ ಉತ್ತರಿಸಿದ್ದಾರೆ.

ಚಿತ್ರರಂಗವನ್ನ ಮುನ್ನೆಡಿಸಿಕೊಂಡು ಹೋಗುವುದು ಸುಲಭವಾದ ಮಾತಲ್ಲ. ಎಲ್ಲರಿಗೂ ಸಮ್ಮತವಾಗುವಂತಹ ನ್ಯಾಯ ನೀಡುವ ಶಕ್ತಿ ಇರುವಂತವರಾಗಿರಬೇಕು. ಅದರ ಜೊತೆಯಲ್ಲಿ ಉತ್ತಮ ಸಿನಿಮಾಗಳನ್ನ ನೀಡಿ ಪ್ರೇಕ್ಷಕರ ಮನಸ್ಸು ಗೆದ್ದಿರಬೇಕು. ಯಶ್ ಅವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಇದೆ. ಅದನ್ನ ಈಗಾಗಲೇ ಸಾಕಷ್ಟು ಭಾರಿ ನಿರೂಪಿಸಿದ್ದಾರೆ. ಉತ್ತಮ ಸಿನಿಮಾ ಹಾಗೂ ಸಮಾಜ ಸೇವೆಯಿಂದಲೇ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ. ಹಾಗಾಗಿ ಶಿವರಾಜ್ ಕುಮಾರ್ ಯಶ್ ಅವರ ಹೆಸರನ್ನ ಹೇಳಿದ್ದಾರೆ.

'ಸಲಾಂ ಸಿನಿಮಾ' ಎನ್ನುತ್ತಿದ್ದಾರೆ ಮಾಸ್ಟರ್ ಡ್ಯಾನ್ಸರ್ಸ್

English summary
kannada actress Shruti Hariharan and Shraddha Srinath part of the Shivanna's number one Yaari with shivanna program.Shivaraj Kumar said in the program Rockstar Star Yash best performing Kannada cinema in recent days,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X