»   » ಶ್ರುತಿಗೆ ಸೂಪರ್ ಅಧಿಕಾರ ಕೊಟ್ಟು ಹೋದ ಕೃಷಿ

ಶ್ರುತಿಗೆ ಸೂಪರ್ ಅಧಿಕಾರ ಕೊಟ್ಟು ಹೋದ ಕೃಷಿ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಐದನೇ ವಾರ ನಟಿ ಕೃಷಿ ತಾಪಂಡ ಹೊರಗೆ ಬಂದಿದ್ದಾಗ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಅವರಿಗೆ ಸೂಪರ್ ಅಧಿಕಾರ ನೀಡಿದ್ದರು. ಅಂದು 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗುವಾಗ ಕೃಷಿ ತಲೆಯಲ್ಲಿ ಏನಿತ್ತೋ, ಗೊತ್ತಿಲ್ಲ.

ಆದ್ರೀಗ, ಶ್ರುತಿ ಪ್ರಕಾಶ್ ಗೆ ಯಾರೂ ಬೇಜಾರು ಮಾಡಬೇಡಿ ಎಂದು ಹೇಳುತ್ತಾ, ಅದೇ ಶ್ರುತಿ ಕೈಗೆ ಸೂಪರ್ ಅಧಿಕಾರವನ್ನು ಕೊಟ್ಟು ನಟಿ ಕೃಷಿ ತಾಪಂಡ ಎರಡನೇ ಬಾರಿಗೆ 'ಬಿಗ್ ಬಾಸ್' ಮನೆಯಿಂದ ಔಟ್ ಆಗಿದ್ದಾರೆ.

'ದೊಡ್ಮನೆ'ಯಿಂದ ಹೊರಬರುವ ಮುನ್ನ ಎಂದಿನಂತೆ, ಎಲಿಮಿನೇಟ್ ಆದ ಕೃಷಿ ತಾಪಂಡ ಅವರಿಗೆ 'ಬಿಗ್ ಬಾಸ್' ಸೂಪರ್ ಅಧಿಕಾರವನ್ನು ಹಸ್ತಾಂತರಿಸಲು ಸೂಚಿಸಿದರು. ಇದರ ಅನುಸಾರ ಸೂಪರ್ ಅಧಿಕಾರವನ್ನು ಕೃಷಿ, ಶ್ರುತಿ ಪ್ರಕಾಶ್ ಗೆ ನೀಡಿದರು.

Shruti Prakash gets Super Power from Krishi Thapanda

ಎಂಟನೇ ಅದ್ಭುತ: ಜಯಶ್ರೀನಿವಾಸನ್ ಗೆ ಸಿಕ್ತು ಸೂಪರ್ ಅಧಿಕಾರ.!

ತಮ್ಮ ಸಿಕ್ಕ ಸೂಪರ್ ಅಧಿಕಾರವನ್ನ ಶ್ರುತಿ ಪ್ರಕಾಶ್, ಮುಂದಿನ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಳಸಬಹುದು. ಸೂಪರ್ ಅಧಿಕಾರವನ್ನ ಶ್ರುತಿ ಹೇಗೆ ಸದುಪಯೋಗ ಪಡಿಸಿಕೊಳ್ಳುತ್ತಾರೋ, ನೋಡ್ಬೇಕು.

English summary
Bigg Boss Kannada 5 Contestant Shruti Prakash gets Super Power from Krishi Thapanda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X