»   » 'ಸಿಂಪಲ್ಲಾಗ್' ಟಿವಿ ರೈಟ್ಸ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

'ಸಿಂಪಲ್ಲಾಗ್' ಟಿವಿ ರೈಟ್ಸ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

Posted By:
Subscribe to Filmibeat Kannada

ತುಂಬಿದ ಪ್ರದರ್ಶನ ಕಾಣುತ್ತಿರುವ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' (ಚಿತ್ರ ವಿಮರ್ಶೆ ಓದಿ) ಚಿತ್ರದ ಟಿವಿ ರೈಟ್ಸ್ ಗೆ ಭಾರಿ ಬೇಡಿಕೆ ಬಂದಿದೆ. ಚಿತ್ರ ತೆರೆಕಂಡ ದಿನವೇ ಮನರಂಜನಾ ಚಾನಲ್ ಗಳು ಈ ಚಿತ್ರಕ್ಕಾಗಿ ಮುಗಿಬಿದ್ದಿವೆ ಎಂಬ ಸುದ್ದಿ ಗಾಂಧಿನಗರದಿಂದ ಅಲೆಅಲೆಯಾಗಿ ತೇಲಿಬಂದಿದೆ.

ಮೊದಲ ದಿನವೇ ಈ ಚಿತ್ರಕ್ಕೆ ರು.70 ಲಕ್ಷಕ್ಕೆ ಮಾತುಕತೆಯಾಗಿದೆ. ಇನ್ನೇನು ಚಿತ್ರದ ರೈಟ್ಸ್ ಕೊಡಬೇಕು ಎನ್ನುವಷ್ಟರಲ್ಲಿ ಮತ್ತೊಂದು ವಾಹಿನಿ ರು.1.5 ಕೋಟಿ ಕೊಡುವುದಾಗಿ ಮುಂದೆ ಬಂತಂತೆ. ಇದು ಯಾಕೋ ವ್ಯವಹಾರ ಕೈಹತ್ತುತ್ತಿದೆ ಎನ್ನಿಸುತ್ತಿದ್ದಂತೆ ಚಿತ್ರದ ನಿರ್ಮಾಪಕರು ಸೈಲೆಂಟಾಗಿದ್ದಾರೆ.


ಸದ್ಯಕ್ಕೆ ತಮ್ಮ ಚಿತ್ರದ ಸ್ಯಾಟಲೈಟ್ ರೈಟ್ಸ್ ಯಾರಿಗೂ ಕೊಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರಂತೆ. ಸ್ವಲ್ಪ ಸಮಯ ಕಾದುನೋಡುವ ತಂತ್ರವನ್ನು ಅವರು ಅಳವಡಿಸಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಚಿತ್ರದಲ್ಲಿ ಹೇಳಿಕೊಳ್ಳುವಂತಹ ಸ್ಟಾರ್ ಗಳಲ್ಲಿದ್ದರೂ ಬಾಕ್ಸ್ ಆಫೀಸಲ್ಲಿ ಸಿಂಪಲ್ಲಾಗಿ ಸದ್ದು ಮಾಡುತ್ತಿದೆ ಚಿತ್ರ.

ಹೊಸತನದಿಂದ ಕೂಡಿರುವ ಈ ಚಿತ್ರಕ್ಕೆ ಅಮೆರಿಕಾದ "50 First Dates" ಎಂಬ ಚಿತ್ರದ ಸ್ಫೂರ್ತಿ ಎನ್ನಬಹುದು. ಸುನಿ ಅಲಿಯಾಸ್ ಸುನಿಲ್ ಅವರ ಚೊಚ್ಚಲ ಪ್ರಯತ್ನವಿದು. ಹೇಮಂತ್ ನಿರ್ಮಿಸಿರುವ ಚಿತ್ರಕ್ಕೆ ಮನೋಹರ್ ಜೋಷಿ ಛಾಯಾಗ್ರಹಣವಿದೆ.

ಚಿತ್ರದ ಟ್ರೇಲರ್ ಗಳು ಆರಂಭದಿಂದಲೂ ಕುತೂಹಲ ಕೆರಳಿಸುತ್ತಾ ಬಂದು ಕೊನೆಗೀಗ ಫಲಿತಾಂಶ ನೀಡುತ್ತಿವೆ. ತುಘ್ಲಕ್ ಖ್ಯಾತಿಯ ರಕ್ಷಿತ್ ಶೆಟ್ಟಿ ಹಾಗೂ ಶ್ವೇತಾ ಶ್ರೀವಾತ್ಸವ್ ಚಿತ್ರದ ನಾಯಕ ನಾಯಕಿಯಾಗಿರುವ ಈ ಚಿತ್ರ ಯುವಜನತೆಯನ್ನು ಸೆಳೆಯುತ್ತಿದೆ. (ಏಜೆನ್ಸೀಸ್)

English summary
It is said that, Simple Aag Ond Love Story satellite rithts to be acquired by a television channel for Rs 1.5 crore. But as of now, the rights have not been given away.
Please Wait while comments are loading...