For Quick Alerts
  ALLOW NOTIFICATIONS  
  For Daily Alerts

  ವಾರಾಂತ್ಯ ಟಿವಿಯಲ್ಲಿ ಮನೋರಂಜನೆಯ ಸುಗ್ಗಿ, ಡೋಂಟ್ ಮಿಸ್

  |

  ಕಿರುತೆರೆಯಲ್ಲಿ ಈ ವಾರ ವೀಕ್ಷಕರಿಗೆ ಸಕತ್ ಮನೋರಂಜನೆ ಕಾದಿದೆ. ರಿಯಾಲಿಟಿ ಶೋಗಳ ನಡುವೆ ಎರಡು ಸೂಪರ್ ಹಿಟ್ ಚಿತ್ರಗಳು ಪ್ರಪ್ರಥಮ ಬಾರಿಗೆ ಪ್ರಸಾರ ಕಾಣಲಿವೆ. ಈಗಾಗಲೇ ಈ ವಾರದಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪೈಪೋಟಿಯಾಗಿ ಸುವರ್ಣ ವಾಹಿನಿಯ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ತಾರೆಗಳ ದಂಡೇ ಹರಿದು ಬಂದಿತ್ತು.

  ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ಅರುಣ್ ಸಾಗರ್, ವಿಜಯ್ ರಾಘವೇಂದ್ರ, ನಿಕಿತಾ ಹಾಗೂ ನರೇಂದ್ರ ಬಾಬು ಶರ್ಮಾ ಇವರಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಬಗ್ಗೆ ತೀವ್ರ ಕುತೂಹಲ ನೆಲೆಸಿದೆ. ಈ ಕುತೂಹಲಕ್ಕೆ ಈ ವಾರ ತೆರೆ ಬೀಳಲಿದೆ.

  ಇತ್ತ ನವರಸ ನಾಯಕ ಜಗ್ಗೇಶ್, ರಮ್ಯಾ ಮತ್ತು ಪಂಚಭಾಷಾ ನಟಿ ಪ್ರಿಯಾಮಣಿ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವೀಕ್ಷಕರಿಗೆ ಮನೋರಂಜನೆ ನೀಡಿದ್ದರು.

  ಈ ವಾರಾಂತ್ಯ ಪ್ರಸಾರವಾಗಲಿರುವ ಜನಪ್ರಿಯ ಕಾರ್ಯಕ್ರಮಗಳ ವಿವರ ಸ್ಲೈಡಿನಲ್ಲಿ

  ಬಿಗ್ ಬಾಸ್ ಫೈನಲ್

  ಬಿಗ್ ಬಾಸ್ ಫೈನಲ್

  ಕಿಚ್ಚ ಸುದೀಪ್ ನಡೆಸಿಕೊಡುವ 98 ದಿನಗಳ ಮೆಗಾ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಈ ಭಾನುವಾರ ( ಜೂ 30) ರಾತ್ರಿ ತೆರೆ ಬೀಳಲಿದೆ. ಅಂದು ಕನ್ನಡದ ಬಿಗ್ ಬಾಸ್ ಯಾರೆಂದು ಅಂತಿಮವಾಗಲಿದೆ. ಕಾರ್ಯಕ್ರಮ ರಾತ್ರಿ ಎಂಟು ಗಂಟೆಯಿಂದ ಆರಂಭವಾಗಲಿದೆ.

  ಈಟಿವಿ ಕನ್ನಡ ಬಿಗ್ ಬಾಸ್

  ಈಟಿವಿ ಕನ್ನಡ ಬಿಗ್ ಬಾಸ್

  ಬಿಗ್ ಬಾಸ್ ಸೆಟ್ ಇರುವ ಲೋನಾವಾಲದಿಂದ ಕಿಚ್ಚ ಸುದೀಪ್ ಗುರುವಾರ ಟ್ವೀಟ್ ಮಾಡಿ, ಇಲ್ಲಿ ಉತ್ತಮ ವಾತಾವರಣವಿದ್ದು, ಫೈನಲಿಗೆ ಭರ್ಜರಿ ತಯಾರಿ ನಡೆಯುತ್ತಿದೆ. ಕೋರಿಯೋಗ್ರಾಫರ್ ಹರ್ಷ ನೇತೃತ್ವದಲ್ಲಿ ರಿಹರ್ಸಲ್ ನಡೆಯುತ್ತಿದೆ ಎಂದಿದ್ದಾರೆ. ಫೈನಲ್ ಕಾರ್ಯಕ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಭಾಗವಹಿಸಲಿದ್ದಾರೆ.

  ಸುವರ್ಣ ಟಿವಿ

  ಸುವರ್ಣ ಟಿವಿ

  ಮಂಗಳವಾರ ಮೇ 2012ರಲ್ಲಿ ಬಿಡುಗಡೆಯಾದ ಪುನೀತ್ ರಾಜಕುಮಾರ್, ಪ್ರಿಯಾಮಣಿ, ನಿಧಿ ಸುಬ್ಬಯ್ಯ, ಜಾಕಿ ಶ್ರಾಫ್ ಪ್ರಮುಖ ತಾರಾಗಣದಲ್ಲಿರುವ ದುನಿಯಾ ಸೂರಿ ನಿರ್ದೇಶನದ ಸೂಪರ್ ಹಿಟ್ ಅಣ್ಣಾಬಾಂಡ್ ಚಿತ್ರ ಈ ಭಾನುವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ.

  (ಅಣ್ಣಾಬಾಂಡ್ ಚಿತ್ರವಿಮರ್ಶೆ)

  ಈಟಿವಿ ಕನ್ನಡದಲ್ಲಿ

  ಈಟಿವಿ ಕನ್ನಡದಲ್ಲಿ

  ಧಾರಾವಾಹಿ ಲೋಕದ ದಿಗ್ಗಜ ಟಿ.ಎನ್.ಸೀತಾರಾಂ ನಿರ್ದೇಶನದ ಮತ್ತೊಂದು ಮೆಗಾ ಧಾರಾವಾಹಿ `ಮಹಾಪರ್ವ`ದ ಉದ್ಘಾಟನೆ ಕಾರ್ಯಕ್ರಮದ ಪ್ರಸಾರ ಭಾನುವಾರ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಧಾರಾವಾಹಿ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂವಾದದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಭಾನುವಾರದಂದು ಪ್ರಸಾರವಾಗಲಿದೆ.

  ಉದಯಟಿವಿ

  ಉದಯಟಿವಿ

  2012ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ಅದ್ದೂರಿ ಇದೇ ಮೊದಲಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಎ ಪಿ ಅರ್ಜುನ್ ನಿರ್ದೇಶನದ ಧ್ರುವ್ ಸರ್ಜಾ, ರಾಧಿಕಾ ಪಂಡಿತ್, ನಾಗತಿಹಳ್ಳಿ ಚಂದ್ರಶೇಖರ್, ತರುಣ್ ಚಂದ್ರ, ತಬ್ಲಾ ನಾಣಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಶನಿವಾರ ಸಂಜೆ ಆರು ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  (ಅದ್ದೂರಿ ಚಿತ್ರವಿಮರ್ಶೆ)

  ಸುವರ್ಣ ಜೋಡಿ

  ಸುವರ್ಣ ಜೋಡಿ

  ಇದೇ ಜೂನ್ 29ರಂದು ಶನಿವಾರ ಸಂಜೆ 8.30ಕ್ಕೆ ಪ್ರಸಾರವಾಗಲಿರುವ ಸುವರ್ಣ ಸೂಪರ್ ಜೋಡಿ ಕಾರ್ಯಕ್ರಮದಲ್ಲಿ ರಮ್ಯಾ ಭಾಗವಹಿಸುತ್ತಿದ್ದಾರೆ. ಸುವರ್ಣ ಪರಿವಾರದ ಸದಸ್ಯರೆಲ್ಲಾ ಸೇರಿ ನಟಿ ರಮ್ಯಾರನ್ನು ಇಂಪ್ರೆಸ್ ಮಾಡುವ ಸಂದರ್ಭ ತುಂಬಾ ಮಜವಾಗಿದೆ.

  English summary
  A galore of reality shows and super hit movies sure will make this week-end exiting for you. Most popular programs on Kannada TV channels on 29-30, June 2013, listed. Our pick : Biggboss Kannada finals at 8 PM on Sunday the 30th. Enjoy!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X