twitter
    For Quick Alerts
    ALLOW NOTIFICATIONS  
    For Daily Alerts

    ಮುಂಬೈನಲ್ಲಿ ಮೂರು ಹೊತ್ತು ಊಟಕ್ಕೆ ಪರದಾಡಿದ್ದರು ಶ್ರೀಮುರಳಿ

    |

    Recommended Video

    Weekend With Ramesh Season 4:ಮಾಸ್ಟರ್ ಶ್ರೀಮುರಳಿಗೆ ಹೇಳಿದ್ದ ಆ ಮಾತು ನಿಜವಾಯ್ತು | Oneindia Kannada

    'ಕಾಲೇಜು ಮುಗಿದಿತ್ತು. ವಿದ್ಯಾ ಜೊತೆ ಪ್ರೀತಿಯಲ್ಲಿದ್ದೆ. ಕೈಯಲ್ಲಿ ಕೆಲಸ ಇಲ್ಲ. ಏನಾದರೂ ಮಾಡಬೇಕು ಎಂದು ಯೋಚಿಸಿದಾಗ ಚಿತ್ರರಂಗಕ್ಕೆ ಬರುವ ನಿರ್ಧಾರ ಮಾಡಿದೆ. ನಮ್ಮ ಹುಡುಗಿಗೂ ಹೇಳಿದೆ, ಮನೆಯಲ್ಲೂ ಹೇಳಿದೆ, ಅಣ್ಣನಿಗೂ ಹೇಳಿದೆ. ಸರಿ ಮಾಡು ಅಂದ್ರು. ಆದ್ರೆ, ಏನೂ ಗೊತ್ತಿಲ್ಲದೇ ಹೇಗೆ ಮಾಡೋದು ಎಂಬ ಯೋಚನೆ'

    'ನಾನು ಇಂಡಸ್ಟ್ರಿಗೆ ಬರಬೇಕು ಎಂದು ನಿರ್ಧರಿಸಿದ ಮೇಲೆ ಮೂರ್ನಾಲ್ಕು ಆಫರ್ ಬಂತು. ಒಂದು ಸಿನಿಮಾದಲ್ಲಿ ಹತ್ತು ಹೀರೋಯಿನ್. ಇನ್ನೊಂದು ಚಿತ್ರದಲ್ಲಿ ಮೂರು ಹೀರೋಯಿನ್. ಮತ್ತೊಂದರಲ್ಲಿ ಇಬ್ಬರು ಹೀರೋಯಿನ್. ಆದ್ರೆ, ನನಗೇನೋ ಭಯ. ಆಕ್ಟಿಂಗ್ ಗೊತ್ತಿಲ್ಲ, ಪರ್ಫಾಮೆನ್ಸ್ ಗೊತ್ತಿಲ್ಲ, ಸ್ಟೇಜ್ ಗೊತ್ತಿಲ್ಲ ಇದಕ್ಕೆಲ್ಲ ರೆಡಿಯಾಗಿ ಬರಬೇಕು ಅಂತ ಡಿಸೈಡ್ ಮಾಡಿದೆ'

    'ಉಗ್ರಂ' ಹೆಸರಿಡುವುದಕ್ಕೂ ಮುಂಚೆ ರಿಜೆಕ್ಟ್ ಆಗಿದ್ದ ಆ ಎರಡು ಟೈಟಲ್ ಯಾವುದು?'ಉಗ್ರಂ' ಹೆಸರಿಡುವುದಕ್ಕೂ ಮುಂಚೆ ರಿಜೆಕ್ಟ್ ಆಗಿದ್ದ ಆ ಎರಡು ಟೈಟಲ್ ಯಾವುದು?

    'ಆಗಲೇ ಮುಂಬೈಗೆ ಹೋಗಬೇಕು ಅಂತ ನಿರ್ಧಾರ ಮಾಡಿದ್ದು. ಮೂರು ತಿಂಗಳು ಮುಂಬೈನಲ್ಲಿದ್ದೆ. ಆ ಮುಂಬೈ ಜೀವನ ನೆನಪಿಸಿಕೊಂಡರೇ ಈಗಲೂ ಕೋಪ ಬರುತ್ತೆ. ಬಹಳ ನೋವು, ಸಂಕಟ, ಕಷ್ಟ ಯಪ್ಪಾ ಯಾರಿಗೂ ಬೇಡ ಆ ಜೀವನ' ಎಂದು ನಟ ಶ್ರೀಮುರಳಿ ಕಣ್ಣೀರಿಟ್ಟಿದ್ದಾರೆ. ಅಷ್ಟಕ್ಕೂ, ಮುಂಬೈನಲ್ಲಿ ಶ್ರೀಮುರಳಿ ಬದುಕು ಹೇಗಿತ್ತು?

    ಮನೆಯಲ್ಲಿ ಇರೋದಕ್ಕೆ ಆಗ್ತಿರಲಿಲ್ಲ

    ಮನೆಯಲ್ಲಿ ಇರೋದಕ್ಕೆ ಆಗ್ತಿರಲಿಲ್ಲ

    ಮುಂಬೈಗೆ ನಟನೆ ಕಲಿಯಬೇಕು ಎಂದು ಹೋದ ಶ್ರೀಮುರಳಿ ಯಾವುದು ಸುಲಭವಿರಲಿಲ್ಲ. ಅಲ್ಲೊಂದು ಪಿಜಿಯಲ್ಲಿ ಉಳಿದುಕೊಳ್ಳುತ್ತಾರೆ. ಬಹಳ ಸಣ್ಣ ಮನೆಯಾಗಿದ್ದರಿಂದ ಮನೆಯಲ್ಲಿ ನೆಮ್ಮದಿಯಿಂದ ಇರಲು ಆಗುತ್ತಿರಲಿಲ್ಲ. ಸರಿಯಾಗಿ ನಿದ್ರೆ ಮಾಡಲು ಮನೆ ಮಾಲೀಕರೇ ಬಿಡುತ್ತಿರಲಿಲ್ಲ. ನಾಯಿ ಕಾಟ ಬೇರೆ ಇತ್ತಂತೆ.

    'ಉಗ್ರಂ' ವೀರ ಕಷ್ಟದಲ್ಲಿದ್ದಾಗ ಕೈಹಿಡಿದಿದ್ದರಂತೆ ದಾಸ ದರ್ಶನ್'ಉಗ್ರಂ' ವೀರ ಕಷ್ಟದಲ್ಲಿದ್ದಾಗ ಕೈಹಿಡಿದಿದ್ದರಂತೆ ದಾಸ ದರ್ಶನ್

    ದುಡ್ಡು ಖರ್ಚು ಆಗುತ್ತೆ ಅಂತ ಬಸ್, ಆಟೋ ಹತ್ತುತ್ತಿರಲಿಲ್ಲ

    ದುಡ್ಡು ಖರ್ಚು ಆಗುತ್ತೆ ಅಂತ ಬಸ್, ಆಟೋ ಹತ್ತುತ್ತಿರಲಿಲ್ಲ

    ಶ್ರೀಮುರಳಿ ಇದ್ದ ಮನೆಯಿಂದ ಕ್ಲಾಸ್ ಗೆ ಹೋಗಿಬರಲು ಹದಿನೈದು ರೂಪಾಯಿ ಖರ್ಚು ಆಗ್ತಿತ್ತಂತೆ. ಹಾಗಾಗಿ, ಒಂದು ಕಡೆ ಬಸ್ ನಲ್ಲಿ ಹೋಗಿ ಮತ್ತೊಂದು ಕಡೆಯಿಂದ ನಡೆದುಕೊಂಡು ಬರುತ್ತಿದ್ದರಂತೆ. ಯಾಕಂದ್ರೆ, ಏಳು ರೂಪಾಯಿ ಉಳಿಯುತ್ತಿತ್ತು. ಅದರಿಂದ ವಡಾ ಪಾವ್ ತಿನ್ನುತ್ತಿದ್ದರಂತೆ.

    ಶ್ರೀ ಮುರಳಿ ಸಂಚಿಕೆಗೆ ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು!ಶ್ರೀ ಮುರಳಿ ಸಂಚಿಕೆಗೆ ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು!

    30 ದಿನಕ್ಕೆ 10 ಸಾವಿರ

    30 ದಿನಕ್ಕೆ 10 ಸಾವಿರ

    ಮನೆಯಿಂದ ತಿಂಗಳಿಗೆ ಹತ್ತು ಸಾವಿರ ರೂಪಾಯಿ ಹಣ ಕಳುಹಿಸಿಕೊಡುತ್ತಿದ್ದರಂತೆ. 4.5 ಸಾವಿರ ಬಾಡಿಗೆ ಕಟ್ಟಬೇಕು. 5.5 ಸಾವಿರದಲ್ಲಿ ಮೂರೊತ್ತು ತಿನ್ನೋಕೆ ಆಗಲ್ಲ. ಅದಕ್ಕಾಗಿ ಎರಡು ಹೊತ್ತು ಮಾತ್ರ ಊಟ ಮಾಡ್ತಿದ್ರಂತೆ. ಖುಷಿ ಖುಷಿಯಿಂದ ಎರಡು ವಡಾ ಪಾವ್, ಎರಡು ರೊಟ್ಟಿ ತಿನ್ನುತ್ತಿದ್ದರಂತೆ.

    ಕುಡಿದು ಬಿಡುತ್ತಿದ್ದ ಜ್ಯೂಸ್ ಕುಡಿತ್ತಿದ್ದೆ

    ಕುಡಿದು ಬಿಡುತ್ತಿದ್ದ ಜ್ಯೂಸ್ ಕುಡಿತ್ತಿದ್ದೆ

    ಅಲ್ಲೊಂದು ಜ್ಯೂಸ್ ಅಂಗಡಿ ಇತ್ತು. ಅವನು ಕನ್ನಡದವನು. ನನ್ನ ಕಂಡ್ರೆ ಏನೋ ಒಂಥರಾ ಖುಷಿ. ಹನ್ನೆರಡು ರೂಪಾಯಿ ಜ್ಯೂಸ್. ಬಟ್, ನನಗೆ ಕುಡಿದು ಉಳಿಯುತ್ತಿದ್ದ ಜ್ಯೂಸ್ ಎಲ್ಲ ಸೇರಿಸಿ ಕೊಡ್ತಿದ್ದ. ಅದನ್ನ ಕುಡಿದು ಕ್ಲಾಸ್ ಗೆ ಹೋಗುತ್ತಿದ್ದೆ. ಅದರಿಂದ ಬಹಳ ಸಹಾಯವಾಗ್ತಿತ್ತು. ಡ್ಯಾನ್ಸ್, ಫೈಟ್, ಸಿಂಗಿಂಗ್ ಎಲ್ಲವೂ ಇತ್ತು.

    'ಚಂದ್ರ ಚಕೋರಿ' ಸಿನಿಮಾಗೆ ಮುರಳಿ ಆಯ್ಕೆಯ ಹಿಂದಿದೆ ರೋಚಕ ಸಂಗತಿ'ಚಂದ್ರ ಚಕೋರಿ' ಸಿನಿಮಾಗೆ ಮುರಳಿ ಆಯ್ಕೆಯ ಹಿಂದಿದೆ ರೋಚಕ ಸಂಗತಿ

    ಮನೆಯವರೇ ವಿಲನ್ ಆದ್ರು

    ಮನೆಯವರೇ ವಿಲನ್ ಆದ್ರು

    ಆರಂಭದಲ್ಲಿ ಹಿಂದಿ ಬರುತ್ತಿರಲಿಲ್ಲ. ಮನೆಯವರು ಸಹಾಯ ಮಾಡಿದ್ರು. ಆದ್ರೆ, ಆಮೇಲೆ ಅವರೇ ವಿಲನ್ ಆದ್ರು. ನನ್ನ ಸ್ನೇಹಿತ ಸಂಜಯ್ ದೊಡ್ಡ ಸಪೋರ್ಟ್ ಆಗಿದ್ದ. ಎಲ್ಲದಕ್ಕೂ ಜೊತೆಯಲ್ಲಿರುತ್ತಿದ್ದ'' ಎಂದು ಹಳೆಯ ನೆನಪುಗಳನ್ನ ನೆನೆದು ಕಣ್ಣೀರು ಹಾಕಿದರು. ಅಲ್ಲಿಂದ ಬೆಂಗಳೂರಿಗೆ ಬಂದ ನಂತರ ಅವಕಾಶಗಳು ಸಿಕ್ತು. ಅದರಲ್ಲಿ ಮೊದಲು ನಾವು ಆಯ್ಕೆ ಮಾಡಿಕೊಂಡಿದ್ದು 'ಚಂದ್ರ ಚಕೋರಿ'.

    English summary
    Kannada actor Sri Murali went learn acting in mumbai before he started his career in sandalwood. but he struggled heavily in Mumbai. he revealed about his struggling days.
    Tuesday, May 21, 2019, 13:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X