For Quick Alerts
  ALLOW NOTIFICATIONS  
  For Daily Alerts

  ಶ್ರೀನಗರ ಕಿಟ್ಟಿ ಬಿಚ್ಚಿಡಲಿದ್ದಾರೆ ಐದು ಕೊಲೆ ರಹಸ್ಯ!

  By Rajendra
  |

  ಅತ್ಯಂತ ಕಡಿಮೆ ಅವಧಿಯಲ್ಲೇ ಹೆಚ್ಚು ವೀಕ್ಷಕ ಹಾಗು ಅಭಿಮಾನಿಗಳನ್ನು ಸಂಪಾದಿಸಿರುವ ಕ್ರೈಂ ಫೈಲ್,ಯಶಸ್ವಿಯಾಗಿ 100ನೇ ಸಂಚಿಕೆಯನ್ನು ಪೂರೈಸುತ್ತಿದೆ.

  ಜೀ ಕನ್ನಡ ವಾಹಿನಿಯಲ್ಲಿ ಇದೇ ದಿನಾಂಕ ಆಗಷ್ಟ್ 10 ಮತ್ತು 11 ರಂದು ಶನಿವಾರ ಮತ್ತು ಭಾನುವಾರ ರಾತ್ರಿ 10 ಗಂಟೆಗೆ ಎರಡು ಕಂತುಗಳಲ್ಲಿ ವಿಶೇಷ ಸಂಚಿಕೆ ಪ್ರಸಾರವಾಗಲಿದೆ.

  ಈ ವಿಶೇಷ ಸಂಚಿಕೆಯಲ್ಲಿ ಬೆಂಗಳೂರಿನಲ್ಲಿ 1956 ರಲ್ಲಿ ನಡೆದ ಒಂದು ರೋಚಕ ಕ್ರೈಂ ಸ್ಟೋರಿಯನ್ನು ಪ್ರಸಾರ ಮಾಡಲಾಗುತ್ತಿದೆ. ಈ ವಿಶೇಷ ಸಂಚಿಕೆಯಲ್ಲಿ ಜನಪ್ರಿಯ ಸಿನೆಮಾ ನಟರಾದ ಶ್ರೀನಗರ ಕಿಟ್ಟಿ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ.

  ಈ ಸಂಚಿಕೆಯಲ್ಲಿ ಐದು ಕೊಲೆ ಪ್ರಕರಣ ಹಾಗು ಅದು ನಡೆದ ರೀತಿ, ಪೊಲೀಸ್ ತನಿಖೆ, ಕೊಲೆ ಹಿಂದಿನ ಉದ್ದೇಶ, ಅದರ ಹಿಂದಿನ ಸತ್ಯ ಘಟನೆಗಳನ್ನು ಶ್ರೀನಗರ ಕಿಟ್ಟಿ ವೀಕ್ಷಕರ ಮುಂದೆ ಬಿಚ್ಚಿಡಲಿದ್ದಾರೆ.

  ಇಡೀ ದೇಶದ ಗಮನ ಸೆಳೆದಿದ್ದ ಈ ಅಪರಾಧ ಪ್ರಕರಣವನ್ನು ಸಿನೆಮಾ ಮಾದರಿಯಲ್ಲಿ ಸಂಪೂರ್ಣ ಮರುಸೃಷ್ಟಿಸಲಾಗಿದೆ.ಅಂದಿನ ಕಾಲದ ವಾಹನಗಳು, ಜಟಕಾಬಂಡಿ, ವೇಷಭೂಷಣಗಳು ಹಾಗು ಲೋಕೇಶನ್ ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ನಿರ್ವಾಹಕರಾದ ಸಿದ್ದು ಕಾಳೋಜಿ ತಿಳಿಸಿದ್ದಾರೆ.

  ಇದರಲ್ಲಿ ಇದುವರೆಗೆ ಕ್ರೈಂ ಫೈಲ್ ನ ನಿರೂಪಕರಾಗಿದ್ದ ಖ್ಯಾತ ಕಿರುತೆರೆ ನಟ ರವಿಪ್ರಸಾದ ಮಂಡ್ಯ ಸೇರಿದಂತೆ ಅನೇಕ ನುರಿತ ಕಲಾವಿದರು ಅಭಿನಯಿಸಿದ್ದಾರೆ.

  ಖ್ಯಾತ ಕಿರುತೆರೆ ನಿರ್ದೇಶಕ ವಿನೋದ ಧೊಂಡಾಳೆ ಈ ವಿಶೇಷ ಸಂಚಿಕೆಯನ್ನು ನಿರ್ದೇಶಿಸಿದ್ದಾರೆ. ತಪ್ಪದೆ ವೀಕ್ಷಿಸಿ. (ಒನ್ಇಂಡಿಯಾ ಕನ್ನಡ)

  English summary
  Kannada actor Srinagara Kitty to reveal five Murder Mysteries in Zee Kannada's 'Crime File'. The special episodes air on 10th and 11th August at 10 pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X