»   » ಪುನೀತ್ Vs ಸುದೀಪ್:TRP ಸಮರದಲ್ಲಿ ಗೆದ್ದವರಾರು?

ಪುನೀತ್ Vs ಸುದೀಪ್:TRP ಸಮರದಲ್ಲಿ ಗೆದ್ದವರಾರು?

Posted By:
Subscribe to Filmibeat Kannada

ಜನಪ್ರಿಯತೆಯ ಉತ್ತುಂಗದಲ್ಲಿರುವ ಕಿಚ್ಚ ಸುದೀಪ್ ಮತ್ತೊಮ್ಮೆ ಗೆದ್ದಿದ್ದಾರೆ. ಕಿರುತೆರೆಯಲ್ಲಿ ನಿರೂಪಕರಾಗಿ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಅಖಂಡ ಕರ್ನಾಟಕದ ಜನತೆಯ ಮನಸನ್ನು ಗೆಲುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

ಈಟಿವಿ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಮತ್ತು ಸುವರ್ಣ ವಾಹಿನಿಯಲ್ಲಿ ಪುನೀತ್ ರಾಜಕುಮಾರ್ ನಡೆಸಿಕೊಡುತ್ತಿರುವ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ನಡುವಣ TRP ಸಮರದಲ್ಲಿ ಬಿಗ್ ಬಾಸ್ ಪ್ರಚಂಡ ಮುನ್ನಡೆ ಸಾಧಿಸಿದೆ.

TAM (television audience measurement) ಪ್ರಕಾರ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ದಿನಕ್ಕೆ ಬರುವ ಅಂದಾಜು TRP ಗಿಂತ ಹೆಚ್ಚಿನ ಅಂದರೆ ಸರಿಸುಮಾರು 4.7 TRP ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುತ್ತಿದೆ. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ದಿನಕ್ಕೆ ಅಂದಾಜು 4.2 TRP ಬರುತ್ತಿದೆ (ಸುವರ್ಣ ವಾಹಿನಿಯ ಮೂಲಗಳ ಪ್ರಕಾರ)

ಬಿಗ್ ಬಾಸ್ ಕಾರ್ಯಕ್ರಮ ಮತ್ತು ಅದರ ಮರುಪ್ರಸಾರ ಕಾರ್ಯಕ್ರಮಕ್ಕೆ ಸಾಕಷ್ಟು ವೀಕ್ಷಕರಿದ್ದು ಕೋಟ್ಯಾಧಿಪತಿ ಕಾರ್ಯಕ್ರಮಕ್ಕಿಂತ ಬಿಗ್ ಬಾಸ್ TRP ಹೆಚ್ಚಿದೆ ಎಂದು ಈಟಿವಿ ಕನ್ನಡದ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ. ಬಿಗ್ ಬಾಸ್ TRP ಎಷ್ಟು? ಮುಂದುವರಿಯುತ್ತದೆ..

ಬಿಗ್ ಬಾಸ್

ಹಿಂದಿಯ ಬಿಗ್ ಬಾಸ್ ಕಾರ್ಯಕ್ರಮದ ಪ್ರತಿ ಸ್ಪರ್ಧಿಗಳು ಅಂದಾಜು 30,000 to 35,000 ವೋಟ್ ಪಡೆಯುತ್ತಾರೆ. ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಗಳು ಅವರ ಜನಪ್ರಿಯತೆಯ ಮೇಲೆ 47,000 ದಷ್ಟು ವೋಟ್ ಪಡೆಯುತ್ತಾರೆಂದು ರಾಘವೇಂದ್ರ ಹುಣಸೂರು ಹೇಳಿದ್ದಾರೆ.

ಬಿಗ್ ಬಾಸ್ ನಲ್ಲಿ ಲೂಸ್ ಮಾದ

ಲೂಸ್ ಮಾದ ಯಾನೆ ಯೋಗೀಶ್ ಮತ್ತು ನಿಖಿತಾ ನಡುವಣ ಮದುವೆ ಕಾರ್ಯಕ್ರಮದ ನಂತರ ಬಿಗ್ ಬಾಸ್ ಭಾರೀ ಸಂಖ್ಯೆಯಲ್ಲಿ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈಟಿವಿ ಬಿಗ್ ಬಾಸ್ TRP

ಮೇ ಹದಿನಾರರಂದು ಪ್ರಸಾರವಾದ ಯೋಗಿ - ನಿಖಿತಾ ಮದುವೆಯ ಕಾರ್ಯಕ್ರಮದ್ ಎಪಿಸೋಡಿಗೆ ದಾಖಲೆಯ 6.76 TRP ಬಂದಿತ್ತು.

ಬಿಗ್ ಬಾಸ್ ಮ್ಯಾಜಿಕ್

ಮಾರ್ಚ್ 25ರಿಂದ ಆರಂಭವಾದ ಈ ರಿಯಾಲಿ ಶೋ ಆರಂಭವಾದಾಗ ನರೇಂದ್ರಬಾಬು ಶರ್ಮಾ, ವಿಜಯ್ ರಾಘವೇಂದ್ರ, ಅಪರ್ಣಾ, ಚಂದ್ರಿಕಾ, ನರ್ಸ್ ಜಯಲಕ್ಷ್ಮಿ, ಅರುಣ್ ಸಾಗರ್, ಸಂಜನಾ, ನಿಖಿತಾ ತುಕ್ರಾಲ್, ವಿನಾಯಕ್ ಜೋಷಿ, ತಿಲಕ್, ಅನುಶ್ರೀ, ಶ್ವೇತಾ ಪಂಡಿತ್ ಸ್ಪರ್ಧಿಗಳಾಗಿದ್ದರು.

ಕಿಚ್ಚ ಇನ್ ಬಿಗ್ ಬಾಸ್

ನಂತರ ಈ ಕಾರ್ಯಕ್ರಮಕ್ಕೆ ರಿಷಿಕುಮಾರ ಸ್ವಾಮಿ, ರೋಹನ್ ಗೌಡ ಮತ್ತು ಯೋಗೀಶ್ ಪಾಲ್ಗೊಂಡರು. ಎಲ್ಲರೂ ಎಲಿಮಿನೇಟ್ ಆದ ನಂತರ, ಈ ಜನಪ್ರಿಯ ರಿಯಾಲಿಟಿ ಶೋನಲ್ಲಿ ನರೇಂದ್ರ ಬಾಬು ಶರ್ಮಾ, ವಿಜಯ್ ರಾಘವೇಂದ್ರ, ಅರುಣ್ ಸಾಗರ್, ನಿಖಿತಾ ಮತ್ತು ಚಂದ್ರಿಕಾ ಮಾತ್ರ ಸ್ಪರ್ಧೆಯಲ್ಲಿದ್ದಾರೆ. ಕಾರ್ಯಕ್ರಮದ ಫೈನಲ್ ಇದೇ ತಿಂಗಳು 29ರಂದು ನಡೆಯಲಿದೆ.

English summary
Kiccha Sudeep hosted reality show Bigg Boss Kannada has garnered a huge viewership and has also beaten Puneet Rajkumar's popular show Kannadada Kotyadhipati, the Sandalwood version of Kaun Banega Crorepati, in the TRP battle.
Please Wait while comments are loading...