»   » 'ಬಿಗ್ ಬಾಸ್' ಮನೆಯಲ್ಲಿರುವುದು ಸುಲಭದ ಮಾತೇ ಅಲ್ಲ.! ಯಾಕೆ ಅಂದ್ರೆ...

'ಬಿಗ್ ಬಾಸ್' ಮನೆಯಲ್ಲಿರುವುದು ಸುಲಭದ ಮಾತೇ ಅಲ್ಲ.! ಯಾಕೆ ಅಂದ್ರೆ...

Posted By:
Subscribe to Filmibeat Kannada

ಹೇಳಿ ಕೇಳಿ 'ಬಿಗ್ ಬಾಸ್' ಮನೆ ದೊಡ್ಮನೆ. ಹೀಗಾಗಿ ಸಕಲ ಸೌಲಭ್ಯಗಳೂ ಅಲ್ಲಿ ದೊರೆಯುತ್ತವೆ. ಅಲ್ಲಿ ನೂರು ದಿನ ಕಳೆಯುವುದು ಕಷ್ಟ ಅಲ್ಲವೇ ಅಲ್ಲ.! ಅಂತ ಅನೇಕರು ವಾದ ಮಾಡಬಹುದು.

ಆದ್ರೆ, 'ಬಿಗ್ ಬಾಸ್' ಮನೆಯಲ್ಲಿ ನೂರು ದಿನಗಳ ಜರ್ನಿ ಸುಲಭದ ಮಾತೇ ಅಲ್ಲ. ಹೀಗಂತ ಹೇಳುತ್ತಿರುವವರು ಬೇರೆ ಯಾರೂ ಅಲ್ಲ. ಸ್ವತಃ ಕಾರ್ಯಕ್ರಮದ ಹೋಸ್ಟ್ ಕಿಚ್ಚ ಸುದೀಪ್.!['ಬಿಗ್ ಬಾಸ್' ಕಾರ್ಯಕ್ರಮದ ತಂತ್ರಜ್ಞರು ಕಣ್ಣೀರಿಟ್ಟಿದ್ದು ಯಾಕೆ?]

'ಬಿಗ್ ಬಾಸ್' ಮನೆಯಲ್ಲಿ ಕಾಲ ಕಳೆಯುವುದು ಕಷ್ಟ ಯಾಕೆ ಅಂತ 'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ದಿನ ಸುದೀಪ್ ವಿವರಿಸಿದ್ದಾರೆ. ಅವರು ಏನಂದರು ಅಂತ ಅವರ ಮಾತುಗಳಲ್ಲೇ ಓದಿರಿ...

ನೀವೆಲ್ಲ ಅಂದುಕೊಳ್ಳುವುದು ಹೇಗೆ ಅಂದ್ರೆ....

''113 ದಿನ...ಎ.ಸಿ ಇದೆ, ಮನೆ ಚೆನ್ನಾಗಿದೆ, ಊಟ ಸಿಗುತ್ತೆ, ಸ್ನಾನ ಮಾಡುವುದಕ್ಕೆ ಬಾತ್ ರೂಮ್ ಇದೆ, ಓಡಾಡಲು ಗಾರ್ಡನ್ ಇದೆ, ಮಾತಾಡಲು ಜನ ಇದ್ದಾರೆ... ಹೀಗಂತ ನೀವು ಅಂದುಕೊಳ್ಳಬಹುದು'' - ಕಿಚ್ಚ ಸುದೀಪ್

ಖಂಡಿತ ಸುಲಭ ಅಲ್ಲ

''ರೈತ ಪಡುವ ಕಷ್ಟಕ್ಕಿಂತ, ಗಡಿಯಲ್ಲಿ ಯೋಧ ಕೆಡುವ ನಿದ್ದೆಗಿಂತ ಇದ್ಯಾವುದೂ ದೊಡ್ಡದಲ್ಲ ನಿಜ. ಆದರೂ 113 ದಿನಗಳ ಈ ಪ್ರಯಾಣ ಸುಲಭ ಅಂತ ಹೇಳುವುದು ನಿಜವಾಗಲೂ ಕಷ್ಟ'' - ಕಿಚ್ಚ ಸುದೀಪ್

ಸುಲಭ ಅಲ್ಲವೇ ಅಲ್ಲ.!

''ಕನ್ನಡದ 'ಬಿಗ್ ಬಾಸ್' ಇತಿಹಾಸದಲ್ಲಿ ಇಷ್ಟು ಲಾಂಗ್ ಜರ್ನಿ ಯಾವತ್ತೂ ಆಗಿಲ್ಲ. ನೋಡಿದ ಮುಖಗಳನ್ನೇ ನೋಡುತ್ತಾ, ಮನೆ ಸಂಪರ್ಕ ಇಲ್ಲದೇ, ಮಕ್ಕಳ ಮುಖ ನೋಡದೆ, ಒಂದೇ ಮನೆಯಲ್ಲಿ ಇರುತ್ತಾ, ಬೆಳಗ್ಗೆ, ಸಂಜೆ, ರಾತ್ರಿ ಅಂತ ಲೆಕ್ಕ ಹಾಕುತ್ತಾ, ಊಟ ಬಡಿಸಿಕೊಂಡು ನಗುತ್ತಾ, ಕೆಲವೊಂದು ಬಾರಿ ಜಗಳ ಮಾಡುತ್ತಾ, 'ಬಿಗ್ ಬಾಸ್' ಏಳು ಅಂದಾಗ ಎದ್ದು, ಮಲಗು ಅಂದಾಗ ಮಲಗಿಕೊಂಡು, 113 ದಿನ ಕಳೆಯೋದು, ನಾನೇ ಹೇಳುತ್ತಿದ್ದೇನೆ ಸುಲಭ ಅಲ್ಲ'' - ಕಿಚ್ಚ ಸುದೀಪ್

ಕಷ್ಟಗಳು ಎಂಥದ್ದು.?

''ಬಿಗ್ ಬಾಸ್ ಕೊಟ್ರೆ ಬಿಸಿ ನೀರು ಬರುತ್ತೆ, ಇಲ್ಲ ಅಂದ್ರೆ ಇಲ್ಲ. ಬಿಗ್ ಬಾಸ್ ಕೊಟ್ರೆ ಊಟ ಬರುತ್ತೆ, ಇಲ್ಲ ಅಂದ್ರೆ ಇಲ್ಲ. ತಾವಂದುಕೊಂಡ ಹಾಗೆ ನೀವು ಮಲಗುವ ಹಾಗೆ ಬಿಗ್ ಬಾಸ್ ಮನೆಯಲ್ಲಿ ಬೇಕಾದಾಗ ಮಲಗುವ ಹಾಗಿಲ್ಲ. ಮೈಕ್ ಬಿಚ್ಚಿಡುವ ಹಾಗಿಲ್ಲ. ಇಂತಹ ಕಷ್ಟಗಳನ್ನ ಐದು ಜನ ಕೊನೆ ವಾರದ ತನಕ ಗೆದ್ದು ಬಂದಿದ್ದಾರೆ'' - ಕಿಚ್ಚ ಸುದೀಪ್

English summary
Bigg Boss Kannada 4: Sudeep Explains as to Why it is hard to stay in Bigg Boss house?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada