»   » 'ಬಿಗ್ ಬಾಸ್ ಕನ್ನಡ-4' ಮುಗಿದ ಮೇಲೆ ಸುದೀಪ್ 'ಇವರನ್ನೆಲ್ಲ' ಮಿಸ್ ಮಾಡ್ಕೊಳ್ತಿದ್ದರಂತೆ!

'ಬಿಗ್ ಬಾಸ್ ಕನ್ನಡ-4' ಮುಗಿದ ಮೇಲೆ ಸುದೀಪ್ 'ಇವರನ್ನೆಲ್ಲ' ಮಿಸ್ ಮಾಡ್ಕೊಳ್ತಿದ್ದರಂತೆ!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ಅದ್ಧೂರಿಯಾಗಿ ಅಂತ್ಯವಾಗಿದೆ. ಇನ್ಮುಂದೆ ಪ್ರತಿ ದಿನ ರಾತ್ರಿ 9 ಗಂಟೆಗೆ 'ಬಿಗ್ ಬಾಸ್' ಕಾರ್ಯಕ್ರಮ ಪ್ರಸಾರವಾಗುವುದಿಲ್ಲ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರ ಪಂಚಾಯಿತಿ ಇರಲ್ಲ. ಪ್ರತಿ ಭಾನುವಾರ ಸೂಪರ್ ಸಂಡೆ ವಿತ್ ಸುದೀಪ್ ಅವರು ಕೂಡ ಬರಲ್ಲ.

ಈ ಎಲ್ಲವನ್ನೂ ವೀಕ್ಷಕರು ಮಿಸ್ ಮಾಡ್ಕೊಳ್ತಾರೆ. ಆದ್ರೆ, 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ನಿರೂಪಕರಾಗಿದ್ದ ಅಭಿನಯ ಚಕ್ರವರ್ತಿ ಸುದೀಪ್ ಅವರು ಕೂಡ ಸಾಕಷ್ಟು ವಿಷಯಗಳನ್ನ ಮಿಸ್ ಮಾಡ್ಕೊಳ್ತಿದ್ದಾರಂತೆ.['ಬಿಗ್ ಬಾಸ್' ರನ್ನರ್ ಕೀರ್ತಿಗೆ 10ಲಕ್ಷ ಕೊಟ್ಟ ಕಿಚ್ಚ ಸುದೀಪ್!]

'ಬಿಗ್ ಬಾಸ್ ಕನ್ನಡ 4' ಫಿನಾಲೆ ಮುಗಿದ ಮೇಲೆ ಕಿಚ್ಚ ಸುದೀಪ್ ಅವರು, ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ತಮ್ಮ ಮನದಾಳದ ಅನುಭವವನ್ನ ಹಂಚಿಕೊಂಡಿದ್ದಾರೆ. ಮುಂದೆ ಓದಿ....

'ಬಿಗ್ ಬಾಸ್ 4' ಅತ್ಯಧ್ಬುತ ಸೀಸನ್

''ಬಿಗ್ ಬಾಸ್ ಕನ್ನಡ 4' ಅತ್ಯಧ್ಬುತ ಸೀಸನ್. ಸಾಕಷ್ಟು ನೆನಪಾಗುವ ಘಟನೆಗಳನ್ನ ಕೊಟ್ಟಿದೆ. ಈ ಘಟನೆಗಳು ತುಂಬಾ ದಿನಗಳ ಕಾಲ ಕಾಡಲಿದೆ. ಇಡೀ ಕಾರ್ಯಕ್ರಮವನ್ನ ಅಮೋಘವಾಗಿ ಅಯೋಜಿಸಿದೆ ನಮ್ಮ ತಾಂತ್ರಿಕ ತಂಡ''['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

ಎಲ್ಲರಿಗೂ ಧನ್ಯವಾದಗಳು

''ಈ ಬಾರಿಯ ಸ್ವರ್ಧಿಗಳು ತುಂಬಾ ಮನರಂಜನೆ ನೀಡಿದ್ದಾರೆ. ಈ ಯಶಸ್ಸಿಗೆ ಕಾರಣವಾದ ಎಲ್ಲರಿಗೂ ಇದರ ಗೌರವ ಸಲ್ಲಬೇಕು. ಹಾಗೆ, ಈ ಕಾರ್ಯಕ್ರಮಕ್ಕೆ ಸಮನಾಗಿ ಪ್ರೋತ್ಸಾಹ ನೀಡಿದ ಮಾಧ್ಯಮಗಳಿಗೆ ನಮ್ಮ ಧನ್ಯವಾದಗಳು''['ಬಿಗ್ ಬಾಸ್' ತರ್ಲೆಗಳಿಗೆ 'ಸುದೀಪ್' ಕೊಟ್ರು 'ಛೋಟಾ ಬಾಸ್' ಪ್ರಶಸ್ತಿ!]

ವಿಕೇಂಡ್ ನಲ್ಲಿ ಮಿಸ್ ಮಾಡ್ಕೊಳ್ತಿನಿ!

''ಇನ್ಮುಂದೆ ನಿಮ್ಮನ್ನೆಲ್ಲ ವಿಕೇಂಡ್ ನಲ್ಲಿ ಮಿಸ್ ಮಾಡ್ಕೊಳ್ತಿನಿ. ಪ್ರತಿ ಬಾರಿಯೂ ನೀವು ಟ್ವಿಟ್ಟರ್ ನಲ್ಲಿ ನಿಮ್ಮ ಪ್ರೀತಿ, ವಿಶ್ವಾಸ ತೋರಿಸಿದ್ದೀರಾ. ಆದಷ್ಟೂ ಬೇಗ ಹೊಸ ಸೀಸನ್ ನಲ್ಲಿ, ಹೊಸ ಸ್ವರ್ಧಿಗಳ ಜೊತೆ ಮತ್ತೆ ಬರ್ತಿನಿ''['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ಲವ್ ಯೂ ಕಿಚ್ಚ ಸುದೀಪ್!

''ಆರೋಗ್ಯದಲ್ಲಿ ಏರೆಪೇರಾದರೂ, ಯಾವುದೇ ಸನ್ನಿವೇಶವಿದ್ದರೂ,ಕಷ್ಟದಲ್ಲಿ-ಸುಖದಲ್ಲಿ, ಎದ್ದಾಗ-ಬಿದ್ದಾಗ ನೀವು ತೋರಿದ ಪ್ರೀತಿಗೆ ಕೋಟಿ ನಮನಗಳು. 'ಲವ್ ಯೂ ಕಿಚ್ಚ ಸುದೀಪ್' ಎಂದು ಕಲರ್ಸ್ ಕನ್ನಡ ವಾಹಿನಿ ಕಿಚ್ಚನ ಯಶಸ್ವಿ ನಿರೂಪಣೆಗೆ ಎಂದು ಧನ್ಯವಾದಗಳನ್ನ ಹೇಳಿದೆ.['ಬಿಗ್ ಬಾಸ್' ಫಿನಾಲೆಯಲ್ಲಿ ಕನ್ನಡಿಗರ ಮನಗೆದ್ದ ತಂದೆ-ಮಗ!]

ಕಲರ್ಸ್ ಕನ್ನಡಕ್ಕೆ ಥ್ಯಾಂಕ್ಸ್!

ಕಲರ್ಸ್ ಕನ್ನಡ ವಾಹನಿಯ ಟ್ವೀಟ್ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದುದ್ದು, ''ನಾನು ಸದಾ ನಿಮ್ಮೊಂದಿಗೆ ಇರಲು ಬಯಸುತ್ತೇನೆ. ನನ್ನ ಈ ಜೋಶ್ ಗೆ ನೀವೆಲ್ಲಾ ಕಾರಣವಾಗಿದ್ದೀರಾ. ''ಥ್ಯಾಂಕ್ ಯೂ ಕಲರ್ಸ್ ಕನ್ನಡ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಡಿಸೈನರ್ಸ್ ಗೆ ಥ್ಯಾಂಕ್ಸ್

''ಥ್ಯಾಂಕ್ ಯೂ ಅರ್ಚನಾ ಮತ್ತು ಚೇತನ್. ನೀವಿಬ್ಬರೂ ಜವಾಬ್ದಾರಿಯುತ ಹಾಗೂ ಪ್ರಮಾಣಿಕರು. ನನ್ನನ್ನ ಇಷ್ಟು ಚೆನ್ನಾಗಿ ಕಾಣಿಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು''

English summary
Kannada Actor And Bigg Boss kannada Host Kiccha Sudeep Expressed His Feelings on Twitter After Finished Bigg Boss kannada 4 Grand Finale...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada