Don't Miss!
- News
ಭಾರತಕ್ಕೆ ಮತ್ತೆ ಬರಲಿವೆ 12 ಚೀತಾಗಳು; ದಕ್ಷಿಣ ಆಫ್ರಿಕಾದೊಂದಿಗೆ ಒಪ್ಪಂದ
- Technology
ಒನ್ಪ್ಲಸ್ ನಾರ್ಡ್ ಸ್ಮಾರ್ಟ್ವಾಚ್ ಬೆಲೆ ಇಳಿಕೆ; ಅಗ್ಗದ ದರದಲ್ಲಿ ನಿಮ್ಮ 'ಕೈ'ಗೆ!
- Lifestyle
Shani Asta 2023 : ಶನಿ ಅಸ್ತ 2023: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹಾಗೂ ಪರಿಹಾರ
- Sports
Axar Patel Marriage: ಚಿತ್ರಗಳು: ಮೇಹಾ ಪಟೇಲ್ ಕೈಹಿಡಿದ ಭಾರತೀಯ ಕ್ರಿಕೆಟಿಗ ಅಕ್ಷರ್ ಪಟೇಲ್
- Finance
ಹಿಂಡೆನ್ಬರ್ಗ್ ವರದಿ ಎಫೆಕ್ಟ್: ಅದಾನಿ ಸ್ಟಾಕ್ ಶೇ.20ರಷ್ಟು ಕುಸಿತ!
- Automobiles
ಭಾರತದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಲು ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಾತಕ ಹಿಡ್ಕೊಂಡು ಆರ್ಯವರ್ಧನ್ ಬಳಿ ಹೋಗಿದ್ರಂತೆ ಸುದೀಪ್ ಪತ್ನಿ ಪ್ರಿಯಾ: ಗುರೂಜಿ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 9 ಇಂದು (ಡಿಸೆಂಬರ್ 31) ಮುಕ್ತಾಯಗೊಳ್ಳಲಿದೆ. ಗ್ರ್ಯಾಂಡ್ ಫಿನಾಲೆ ಕೂಡ ಅದ್ಧೂರಿಯಾಗಿಯೇ ನಡೆಯುತ್ತಿದೆ. ಬಿಗ್ ಬಾಸ್ ಮನೆಯಿಂದ ಕೊನೆಯ ಐದು ಮಂದಿ ಕಂಟೆಸ್ಟೆಂಟ್‌ಗಳಲ್ಲಿ ದಿವ್ಯಾ ಉರುಡುಗ ಈಗಾಗಲೇ ಹೊರಬಂದಿದ್ದಾರೆ. ಹೀಗಾಗಿ ಇನ್ನುಳಿದ ನಾಲ್ಕು ಮಂದಿಯಲ್ಲಿ ವಿನ್ನರ್ ಯಾರು? ಅನ್ನೋದು ಕುತೂಹಲಕ್ಕೆ ತೆರೆಬೀಳಲಿದೆ.
ಬಿಗ್ ಬಾಸ್ ಓಟಿಟಿ ಹಾಗೂ ಬಿಗ್ ಬಾಸ್ ಸೀಸನ್ 9 ಎರಡಲ್ಲೂ ಸಖತ್ ಮನರಂಜನೆ ನೀಡಿದ್ದು ಆರ್ಯವರ್ಧನ್. ಇವರಿಗೆ ಎಲಿಮಿನೇಷನ್ ಆಗಿದ್ದಕ್ಕೆ ಸಿಕ್ಕಾಪಟ್ಟೆ ಬೇಜಾರಾದಂತೆ ಇದೆ. ಮನೆಯೊಂದ ಹೊರ ಬಂದ ಮೇಲೆ ಆರ್ಯವರ್ಧನ್ ಗುರೂಜಿ ಸಾಕಷ್ಟು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಕೆಲವು ಸೀಕ್ರೆಟ್‌ಗಳನ್ನು ಬಿಟ್ಟುಕೊಡುತ್ತಿದ್ದಾರೆ.
ಆರ್ಯವರ್ಧನ್ ಫಿಲ್ಟರ್ ಇಲ್ಲದೆ ಮಾತಾಡುತ್ತಾರೆ. ಅದರಿಂದಲೇ ಕೆಲವೊಮ್ಮೆ ಪೇಚಿಗೆ ಸಿಕ್ಕಿಕೊಳ್ಳುತ್ತಾರೆ ಅನ್ನೋ ಮಾತು ಬಿಗ್ ಬಾಸ್ ಮನೆಯೊಳಗೆ ಅದೆಷ್ಟೋ ಬಾರಿ ಬಂದಿದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೂ ಆರ್ಯವರ್ಧನ್ ಫಿಲ್ಟರ್ ಇಲ್ಲದೆ ನೇರವಾಗಿಯೇ ಮಾತಾಡುತ್ತಿದ್ದಾರೆ. ಕಿಚ್ಚ ಸುದೀಪ್ ಪತ್ನಿ ತಮ್ಮನ್ನು ಭೇಟಿ ಮಾಡುವ ವಿಷಯವನ್ನು ಈ ಸಂಜೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಬಾಯಿಬಿಟ್ಟಿದ್ದಾರೆ.

'ಎಲ್ಲಾ ಸರಿ ಹೋಗುತ್ತೆ ಎಂದು ಹೇಳಿದ್ದೆ'
ಕೆಲವು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ನಡುವೆ ಭಿನ್ನಾಭಿಪ್ರಾಯವಿದೆ ಅನ್ನೋ ಮಾತು ಹರಿದಾಡಿತ್ತು. ಆ ವೇಳೆ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಜಾತಕ ಹಿಡ್ಕೊಂಡು ಆರ್ಯವರ್ಧನ್ ಬಳಿ ಬಂದಿದ್ದರಂತೆ. ಅಂದು ಈ ಗುರೂಜಿ ಹೀಗೆ ಹೇಳಿದ್ರಂತೆ.. "ಸುದೀಪ್ ಸರ್ ವೈಫ್ ನಾನಿಲ್ಲಿ ಏನು ಕೂತ್ತಿದ್ದೀನಿ ಇದೇ ಆಫೀಸ್‌ನಲ್ಲಿ ಜಾತಕ ಕೇಳುತ್ತಾರೆ. ಸುದೀಪ್ ಸರ್ ಹಾಗೂ ಅವರದ್ದು ಡಿಸ್ಟರ್ಬ್ ಆದಾಗ ಜಾತಕ ಕೇಳುತ್ತಾರೆ. ಸರಿ ಹೋಗುತ್ತೆ ಹೋಗಿ ಮೇಡಂ ಅಂತ ಕೇಳುತ್ತೀನಿ. ಅದಾದ್ಮೇಲೆ ಸರಿ ಹೋಗುತ್ತಾರೆ. ಅದಕ್ಕೆ ಊಟಕ್ಕೆ ಕರೆಯುತ್ತೀನಿ. ಅಲ್ಲಿ ಸುದೀಪ್ ಸರ್‌ಗೆ ಶಾಕಿಂಗ್ ನ್ಯೂಸ್ ಕೊಡೋಣ ಅಂತ ಇದ್ದೆ." ಎಂದು ಆರ್ಯವರ್ಧನ್ ಹೇಳಿದ್ದಾರೆ.

ಸುದೀಪ್ ದಂಪತಿಯನ್ನು ಬಿಗ್ ಬಾಸ್ ಮನೆಗೆ ಕರೆದಿದ್ದೇಕೆ?
"ಅವರು ಮನೆಯೊಳಗೆ ಬಂದರೆ, ಸರ್ ನಿಮ್ಮದು ಹಾಗೂ ನಿಮ್ಮ ವೈಫ್ ನಡುವೆ ಡಿಸ್ಟರ್ಬ್ ಆದಾಗ ಸರಿ ಆಗುತ್ತೆ ಹೋಗಿ ಅಂತ ಹೇಳಿದ್ದೆ. ಇದನ್ನು ಅವರು ಮನೆಗೆಯೊಳಗೆ ಬಂದಾಗ ಹೇಳಬೇಕು ಅಂತ ಇದ್ದೆ. ಅವರು ಬರೋದಿಲ್ಲ ಅಂತ ಗೊತ್ತಿತ್ತು. ಯಾಕಂದ್ರೆ, ಎರಡನೇ ವಾರವೇ ನನಗೂ ಮತ್ತು ಅವರಿಗೂ ಮಾತಿನ ಚಕಮಕಿ ನಡೆದಿತ್ತು." ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.

ಟಾಸ್ಕ್‌ನಲ್ಲಿ ಆರ್ಯವರ್ಧನ್ ಮುಂದು?
ಆರ್ಯವರ್ಧನ್ ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಂತೆ ಫುಲ್ ಆಕ್ಟಿವ್ ಆಗಿದ್ದರು. ಬಿಗ್ ಬಾಸ್ ಯಾವುದೇ ಟಾಸ್ಕ್ ನೀಡಿದ್ದರೂ ಆರ್ಯವರ್ಧನ್ ಆಕ್ಟಿವ್ ಆಗಿ ಮುನ್ನುಗ್ಗುತ್ತಿದ್ದರು. ಕೆಲವು ಅವರಿಗೂ ಅವರ ದೇಹಕ್ಕೂ ಸಂಬಂಧವೇ ಇಲ್ಲದಂತೆ ಭಾಗವಹಿಸಿದ್ದಾರೆ. ಬಿಗ್ ಬಾಸ್ ಮನೆಗೆ ಹೋದ್ಮೇಲೆ ಆರ್ಯವರ್ಧನ್ ಇಮೇಜ್ ಅಂತೂ ಬದಲಾಗಿದೆ. ಆದರೆ, ಮಾತಿನಲ್ಲಿ ಹಿಡಿತ ಇಲ್ಲದೆ ಇರೋದು ಕೆಲವೊಮ್ಮೆ ಪೇಚಿಗೆ ಸಿಲುಕಿಸಿದ್ದೂ ಇದೆ.

ಮಿಡ್‌ನೈಟ್‌ನಲ್ಲಿ ಹೊರಬಿದ್ದ ಆರ್ಯವರ್ಧನ್
ಆರ್ಯುವರ್ಧನ್ ಓಟಿಟಿಯಿಂದಲೂ ಆಕ್ಟಿವ್ ಆಗಿಯೇ ಇದ್ದರು. ಅಲ್ಲಿಂದ ಬಿಗ್ ಬಾಸ್ ಸೀಸನ್ 9ಗೂ ಆಗಮಿಸಿದ್ದರು. ಎರಡೂ ಕಡೆನೂ ಆರ್ಯವರ್ಧನ್ ವೀಕ್ಷಕರ ಗಮನ ಸೆಳೆದಿದ್ದಾರೆ. ಆದರೆ, ಇನ್ನೇನು ಕೊನೆಯ ಹಂತದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಮಿಡ್ ಬೈಟ್ ಎಲಿಮಿನೇಷನ್‌ನಲ್ಲಿ ಗುರೂಜಿ ಹೊರಬಿದ್ದಿದ್ದು ಅವರಿಗೆ ಬೇಸರ ತರಿಸಿದೆ.