»   » 'ಬಿಗ್ ಬಾಸ್' ವೀಕ್ಷಕರು v/s ಸುದೀಪ್ : ಟ್ವಿಟ್ಟರ್ ರಣರಂಗ ಪಾರ್ಟ್-2

'ಬಿಗ್ ಬಾಸ್' ವೀಕ್ಷಕರು v/s ಸುದೀಪ್ : ಟ್ವಿಟ್ಟರ್ ರಣರಂಗ ಪಾರ್ಟ್-2

Posted By:
Subscribe to Filmibeat Kannada

ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ವಿರುದ್ಧ 'ಬಿಗ್ ಬಾಸ್' ವೀಕ್ಷಕರ ಮುಷ್ಟಿಯುದ್ಧ ಮುಂದುವರೆದಿದೆ. ನಿನ್ನೆ ಟ್ವಿಟ್ಟರ್ ನಲ್ಲಿ ಶುರುವಾದ ಸುದೀಪ್ v/s ವೀಕ್ಷಕರ ಕದನಕ್ಕೆ ಸದ್ಯ ವಿರಾಮ ದೊರಕುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ.

''ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರಥಮ್ ಇಮೇಜ್ ಡ್ಯಾಮೇಜ್ ಮಾಡಲಾಗಿದೆ'' ಎಂಬ ಕಾರಣಕ್ಕೆ ಕಿಚ್ಚ ಸುದೀಪ್ ವಿರುದ್ಧ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ವೀಕ್ಷಕರು ತಿರುಗಿಬಿದ್ದಿದ್ದಾರೆ.[ಪಕ್ಷಪಾತ ಮಾಡಿದ್ರು ಅಂತ ಸುದೀಪ್ ಮೇಲೆ ಉರಿದುಬಿದ್ದ ವೀಕ್ಷಕರು!]

ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ರನ್ನ ವೀಕ್ಷಕರು ಲೆಫ್ಟ್ ಅಂಡ್ ರೈಟ್ ಕ್ಲಾಸ್ ತೆಗೆದುಕೊಳ್ಳುತ್ತಿರುವ ಬಗ್ಗೆ ನಿನ್ನೆಯಷ್ಟೇ ನಾವು ವರದಿ ಮಾಡಿದ್ವಿ. ಅದರ ಮುಂದುವರಿದ ಭಾಗ (ಪಾರ್ಟ್-2) ಇಲ್ಲಿದೆ ನೋಡಿ....

ಕಿಚ್ಚ ಸುದೀಪ್ ಬಗ್ಗೆ ಬೇಸರ

''ಬಿಗ್ ಬಾಸ್ ಫಿಕ್ಸ್ ಆಗಿದೆ'' ಅಂತ ವೀಕ್ಷಕರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಕಿಚ್ಚ ಸುದೀಪ್, ''ಹಾಗಾದ್ರೆ ಯಾಕೆ ನೋಡ್ತೀರಾ'' ಎಂದಿದ್ದರು. ಇದರಿಂದ ಕುಪಿತರಾದ ಮತ್ತೊಬ್ಬ ವೀಕ್ಷಕರು ಕಿಚ್ಚ ಸುದೀಪ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. [ಕಿಚ್ಚ ಸುದೀಪ್ ವಿರುದ್ಧ 'ಬಿಗ್ ಬಾಸ್' ವೀಕ್ಷಕರ ಟ್ವಿಟ್ಟರ್ ಸಮರ.!]

ನಿಮ್ಮಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ.!

''ಯಾಕೆ ನೋಡ್ತೀರಾ'... ಸುದೀಪ್ ಸರ್, ನಿಮ್ಮಿಂದ ಇಂತಹ ಮಾತುಗಳನ್ನ ನಿರೀಕ್ಷೆ ಮಾಡಿರಲಿಲ್ಲ'' ಅಂತ ಅರುಣ್ ಕುಮಾರ್ ಎಂಬುವರು ಟ್ವಿಟ್ಟರ್ ನಲ್ಲಿ ಅಸಮಾಧಾನಗೊಂಡರು. ಅದಕ್ಕೆ ಸುದೀಪ್ ಮಾಡಿದ ಟ್ವೀಟ್ ಏನು ಗೊತ್ತಾ.?

ಇದೇ ಸರಿಯಾದ ಉತ್ತರ.!

''ನನ್ನ ಪ್ರಕಾರ 'ಬಿಗ್ ಬಾಸ್' ಫೇಕ್ ಅಂತ ಭಾವಿಸುವವರಿಗೆ ಇದೇ ಸರಿಯಾದ ಉತ್ತರ. ಆ ಕನ್ಕ್ಲೂಷನ್ ಗೆ ಬಂದಿದ್ದರೆ, ಶೋ ನೋಡಿ ಟೈಮ್ ಯಾಕೆ ವೇಸ್ಟ್ ಮಾಡಿಕೊಳ್ಳಬೇಕು ಅಂತ ನಿಮಗೂ ಅನಿಸಲ್ವಾ?'' ಅಂತ ಸುದೀಪ್ ಉತ್ತರ ಕೊಟ್ಟಿದ್ದಾರೆ.

ಸಲ್ಮಾನ್ ಖಾನ್ ಆಗಲು ಸಾಧ್ಯವೇ ಇಲ್ಲ.!

''ನಾನು ಸಲ್ಮಾನ್ ಖಾನ್ ಅಲ್ಲ'' ಅಂತ ಸುದೀಪ್ ನಿನ್ನೆ ಟ್ವೀಟ್ ಮಾಡಿದ್ದರು. ಅದನ್ನಿಟ್ಟುಕೊಂಡು ಲೋಕೇಶ್ ಪೂಜಾರಿ ಎಂಬುವರು ''ನೀವು ಸಲ್ಮಾನ್ ಆಗುವುದಕ್ಕೆ ಸಾಧ್ಯ ಇಲ್ಲ'' ಅಂತ ಖಾರವಾಗಿ ನುಡಿದರು. ಅದಕ್ಕೆ ಸುದೀಪ್ ಕೊಟ್ಟ ರಿಯಾಕ್ಷನ್ ಇದು....

ನನಗೆ ಖುಷಿ ಇದೆ

''ಇತರರ ಕಾಪಿ ಆಗುವ ಬದಲು ನಾವು ನಾವಾಗಿರುವುದು ಮುಖ್ಯ. ನಾನು ನಾನಾಗಿರುವುದು ನನಗೆ ಖುಷಿ ಇದೆ'' ಅಂತ ಸುದೀಪ್ ಟ್ವೀಟ್ ಮಾಡಿದ್ದಾರೆ.

ಸುದೀಪ್ 'ಪರ್ಫೆಕ್ಟ್'

ಕಿಚ್ಚ ಸುದೀಪ್ ವಿರುದ್ಧ ಕೆಲವರು ಕೆಂಡ ಕಾರುತ್ತಿದ್ದರೂ, ಸುದೀಪ್ 'ಪರ್ಫೆಕ್ಟ್ ಹೋಸ್ಟ್' ಎನ್ನುವವರೂ ಇದ್ದಾರೆ. ಅವರಿಗೆಲ್ಲ ಸುದೀಪ್ ಧನ್ಯವಾದ ಕೂಡ ಸಲ್ಲಿಸಿದ್ದಾರೆ.

ಸಿಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕಾ.?

''ಇಂತಹ ಸಿಲ್ಲಿ ಪ್ರಶ್ನೆಗಳಿಗೆಲ್ಲ ಉತ್ತರಿಸಿ ಸಮಯ ಯಾಕೆ ಹಾಳು ಮಾಡಿಕೊಳ್ಳುತ್ತೀರಾ'' ಅಂತ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ, ''ಎಲ್ಲರಲ್ಲೂ ಅಷ್ಟೊಂದು ದ್ವೇಷ ಇರುವುದರಿಂದ ನಾನು ಉತ್ತರ ನೀಡುವುದು ಮುಖ್ಯ'' ಅಂತ ಸುದೀಪ್ ಸಮರ್ಥಿಸಿಕೊಂಡಿದ್ದಾರೆ.

'ಬಿಗ್ ಬಾಸ್' ಫೇಕ್ ಅಲ್ವಾ.?

''ಒಂದು ಮಾತನ್ನ ಕ್ಲಿಯರ್ ಮಾಡಿ.. ಬಿಗ್ ಬಾಸ್ ಫೇಕ್ ಹೌದೋ, ಅಲ್ವೋ..'' ಅಂತ ಅಭಿಮಾನಿಯೊಬ್ಬರು ಕೇಳಿದರು.

ಸುದೀಪ್ ಕೊಟ್ಟ ಸ್ಪಷ್ಟನೆ

''ನಿಮ್ಮನ್ನ ಚೀಟ್ ಮಾಡುವ ಅಥವಾ ಫೇಕ್ ಮತ್ತು ಸ್ಕ್ರಿಪ್ಟೆಡ್ ಶೋ ನಲ್ಲಿ ನಾನೊಂದು ಭಾಗಿಯಾಗಲ್ಲ'' ಅಂತ ಸುದೀಪ್ ಸ್ಟಷ್ಟನೆ ನೀಡಿದ್ದಾರೆ.

ಅನ್ಯಾಯ ಆಗ್ತಿದೆ

''ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಪ್ರಥಮ್ ಗೆ ಅನ್ಯಾಯ ಆಗ್ತಾ ಇದೆ'' ಅಂತ ಮಹೇಶ್ ಎಂಬುವರು ಸುದೀಪ್ ಗೆ ನೇರವಾಗಿ ಪ್ರಶ್ನೆ ಕೇಳಿದ್ದಾರೆ.

ಸುದೀಪ್ ಏನಂದರು.?

''ಎಲ್ಲರೂ ರಿಲ್ಯಾಕ್ಸ್ ಆಗಿ. ಏನೂ ಆಗಲ್ಲ. ಇದು ಶೋ ಅಷ್ಟೆ. ಶೋನ ಶೋ ರೀತಿ ನೋಡಿ. ಇದರಿಂದಲೇ ಎಂತಹ ಸನ್ನಿವೇಶ ಬಂದರೂ ಎದುರಿಸಲು ಸಮರ್ಥರಾಗುತ್ತಾರೆ'' ಅಂತ ಸುದೀಪ್ ಟ್ವೀಟ್ ಮಾಡಿದ್ದಾರೆ.

ಪರ-ವಿರೋಧ ಯುದ್ಧ

ಟ್ವಿಟ್ಟರ್ ನಲ್ಲಿ ಸುದೀಪ್ ಅಭಿಮಾನಿಗಳು ಹಾಗೂ ಪ್ರಥಮ್ ಪರ ಬ್ಯಾಟಿಂಗ್ ಮಾಡುತ್ತಿರುವವರ ಮಧ್ಯೆ ದೊಡ್ಡ ಯುದ್ಧವೇ ನಡೆಯುತ್ತಿದೆ. ಇದಕ್ಕೆಲ್ಲ ಅಂತ್ಯ ಹಾಡಬೇಕಾಗಿರುವುದು ಸ್ವತಃ ಸುದೀಪ್ ರವರೇ.

English summary
Bigg Boss Kannada 4 Viewers have taken their twitter account to express their displeasure against Kiccha Sudeep. Read the article to know more.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada