For Quick Alerts
  ALLOW NOTIFICATIONS  
  For Daily Alerts

  ಆರ್‌ಸಿಬಿಗೆ ಹುರುಪು ತುಂಬಲು ಬರುತ್ತಿದ್ದಾರೆ ಕಿಚ್ಚ ಸುದೀಪ್

  |

  ನಟ ಸುದೀಪ್‌ಗೆ ಕ್ರಿಕೆಟ್‌ ಮೇಲಿರುವ ಉತ್ಕಟ ಪ್ರೇಮದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ನಟನೆ ಜೊತೆಗೆ ಕ್ರಿಕೆಟ್‌ ಅನ್ನೂ ಸಹ ಅತಿಯಾಗಿ ಪ್ರೀತಿಸುತ್ತಾರೆ ಸುದೀಪ್.

  ಇಂದು ಐಪಿಎಲ್‌ 14ನೇ ಸೀಸನ್‌ ಆರಂಭವಾಗುತ್ತಿದೆ. ಇಂದು ಸಂಜೆ ಸುದೀಪ್ ಅವರು ಆರ್‌ಸಿಬಿಗೆ ಹುರುಪು ತುಂಬಲು, ಜೊತೆಗೆ ಇಂದಿನ ಪಂದ್ಯದ ಬಗ್ಗೆ ತಮ್ಮ ಅಭಿಪ್ರಾಯ ನೀಡಲು ಬರುತ್ತಿದ್ದಾರೆ.

  ಐಪಿಎಲ್‌ 14ನೇ ಸೀಸನ್‌ನ ಮೊದಲ ಪಂದ್ಯ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳ ನಡುವೆ ಸಂಜೆ 7:30 ಕ್ಕೆ ಆರಂಭವಾಗಲಿದೆ. ಪಂದ್ಯ ಆರಂಭವಾಗುವ ಒಂದು ಗಂಟೆ ಮುಂಚೆ ಟಿವಿಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಕಿಚ್ಚ ಸುದೀಪ್ ಇಂದಿನ ಪಂದ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

  ಪಂದ್ಯ ಆರಂಭಕ್ಕೂ ಮುನ್ನಾ ಬರಲಿದ್ದಾರೆ ಸುದೀಪ್

  ಪಂದ್ಯ ಆರಂಭಕ್ಕೂ ಮುನ್ನಾ ಬರಲಿದ್ದಾರೆ ಸುದೀಪ್

  ಇಂದು ಸಂಜೆ 6 ಗಂಟೆಗೆ ಸ್ಟಾರ್ ಸ್ಟೋರ್ಟ್ಸ್ ಕನ್ನಡದ ಕಾರ್ಯಕ್ರಮದಲ್ಲಿ ಸುದೀಪ್ ಭಾಗಿಯಾಗಲಿದ್ದು, ಆರ್‌ಸಿಬಿ-ಮುಂಬೈ ಇಂಡಿಯನ್ಸ್‌ ಪಂದ್ಯದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಸುದೀಪ್ ಅವರು ಹೀಗೆ ಸ್ಟಾರ್ ಸ್ಪೋರ್ಟ್ಸ್‌ಗೆ ಬರುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಕೆಲವು ಬಾರಿ ಐಪಿಎಲ್‌ ಪಂದ್ಯದ ಬಗ್ಗೆ ಟಿವಿ ವಿಶ್ಲೇಷಣೆಯಲ್ಲಿ ಭಾಗಿಯಾಗಿದ್ದಾರೆ.

  ಸಿಸಿಎಲ್‌ನಲ್ಲಿ ಕರ್ನಾಟಕ ತಂಡ ಮುನ್ನಡೆಸುತ್ತಿರುವ ಸುದೀಪ್

  ಸಿಸಿಎಲ್‌ನಲ್ಲಿ ಕರ್ನಾಟಕ ತಂಡ ಮುನ್ನಡೆಸುತ್ತಿರುವ ಸುದೀಪ್

  ಸುದೀಪ್ ಅವರು ಸಿಸಿಎಲ್‌ ಟೂರ್ನಿಯಲ್ಲಿ ಹಲವಾರು ವರ್ಷಗಳಿಂದ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸೆಹ್ವಾಗ್ ಸೇರಿದಂತೆ ಹಲವು ದಿಗ್ಗಜರ ಜೊತೆ ಕ್ರಿಕೆಟ್ ಆಡಿರುವ ಸುದೀಪ್, ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿಯೂ ಕ್ರಿಕೆಟ್ ಆಡಿರುವ ಗೌರವ ಹೊಂದಿದ್ದಾರೆ.

  'ಕೋಟಿಗೊಬ್ಬ 3' ಬಿಡುಗಡೆ ಮುಂದಕ್ಕೆ?

  'ಕೋಟಿಗೊಬ್ಬ 3' ಬಿಡುಗಡೆ ಮುಂದಕ್ಕೆ?

  ನಟ ಸುದೀಪ್‌ ಇದೀಗ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾ ಹಂತಿಮ ಹಂತದಲ್ಲಿದೆ. ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಪ್ರಕರಣಗಳ ಹೆಚ್ಚಳದಿಂದಾಗಿ ಚಿತ್ರಮಂದಿರಗಳ ಮೇಲೆ ಸರ್ಕಾರ ನಿರ್ಬಂಧ ಹೇರಿರುವ ಕಾರಣ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

  ಆಡಬೇಕಿರುವ ಹನ್ನೊಂದು ಆಟಗಾರರ ಪಟ್ಟಿ ಪ್ರಕಟಿಸಿದ ಸಿಂಪಲ್ ಸುನಿ

  ಆಡಬೇಕಿರುವ ಹನ್ನೊಂದು ಆಟಗಾರರ ಪಟ್ಟಿ ಪ್ರಕಟಿಸಿದ ಸಿಂಪಲ್ ಸುನಿ

  ಕನ್ನಡದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಸಿಂಪಲ್ ಸುನಿ ಅವರಿಗೂ ಅತೀವ ಕ್ರಿಕೆಟ್ ಪ್ರೀತಿ. ಆರ್‌ಸಿಬಿ ಸಿಂಪಲ್ ಸುನಿಯ ಮೆಚ್ಚಿನ ತಂಡ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಪರವಾಗಿ ಆಡುವ ಹನ್ನೊಂದು ಜನ ಯಾರಾರ್ಯಾಗಿದ್ದರೆ ಉತ್ತಮ ಎಂಬ ಪಟ್ಟಿಯನ್ನು ಸುನಿ ಪ್ರಕಟಿಸಿದ್ದಾರೆ.

  English summary
  IPL 14: Actor Sudeep coming live on star sports Kannada to talk about first match of the tournament which is between rcb and MI.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X