»   » ಮೊದಲ ವಾರವೇ 'ಬಿಗ್ ಬಾಸ್' ಮನೆಯಿಂದ ಹೊರಬಂದ ಸುಮಾ!

ಮೊದಲ ವಾರವೇ 'ಬಿಗ್ ಬಾಸ್' ಮನೆಯಿಂದ ಹೊರಬಂದ ಸುಮಾ!

Written By:
Subscribe to Filmibeat Kannada

ಕಾಮನ್ ಮ್ಯಾನ್ ಕೆಟಗರಿಯಲ್ಲಿ 'ಬಿಗ್ ಬಾಸ್' ಮನೆಗೆ ತೆರಳಿದ್ದ ಸುಮಾ ಮೊದಲ ವಾರವೇ ಕಾರ್ಯಕ್ರಮದಿಂದ ಔಟ್ ಆಗಿದ್ದಾರೆ. ಶನಿವಾರದ ಸಂಚಿಕೆಯಾದ 'ವಾರದ ಕಥೆ ಕಿಚ್ಚನ ಜೊತೆ' ಮೂಲಕ ಸುಮಾ ತಮ್ಮ ಆಟ ಮುಗಿಸಿದ್ದಾರೆ.

ಈ ಸೀಸನ್ ನಲ್ಲಿ ಮೊದಲ ವಾರ ಸ್ಪರ್ಧಿಗಳಾದ ದಿವಾಕರ್, ಕಾರ್ತಿಕ್ (ಜೆಕೆ), ನಿವೇದಿತಾ, ಸುಮಾ, ಜಗನ್ನಾಥ್, ಜಯ ಶ್ರೀನಿವಾಸನ್ ಮತ್ತು ಮೇಘ ನಾಮಿನೇಟ್ ಆಗಿದ್ದರು. ಕೊನೆಗೆ ಇವರ ಪೈಕಿ ಸುಮ ಎಲಿಮಿನೇಟ್ ಆಗಿದ್ದಾರೆ. ಸುಮಾ 'ಬಿಗ್ ಬಾಸ್ ಸೀಸನ್ 5' ಕಾರ್ಯಕ್ರಮದಲ್ಲಿ ಔಟ್ ಆದ ಮೊದಲ ಸ್ಪರ್ಧಿ ಆಗಿದ್ದಾರೆ.

Suma Rajkumar gets eliminated from 'Bigg Boss Kannada 5'

ಅಂದಹಾಗೆ, ಸುಮಾ ರಾಜ್ ಕುಮಾರ್ ಅಲಿಯಾಸ್ ಮಹಾರಾಣಿ ಸುಮಿತ್ರಾ ದೇವಿ ಮೈಸೂರು ಮೂಲದ ಗೃಹಿಣಿ. ಇವರ ಪತಿಯ ಹೆಸರು ರಾಜ್ ಕುಮಾರ್. ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗಳಿದ್ದಾರೆ. ಸುಮಾ ರಾಜ್ ಕುಮಾರ್ ಅವರು ಗೃಹಿಣಿಯಾಗಿದ್ದರೂ, ವೃತ್ತಿಯಲ್ಲಿ 'ಮ್ಯಾಜಿಕ್ ಶೋ' ಮತ್ತು 'ಗೊಂಬೆ ಶೋ' ಅಂತಹ ಕಾರ್ಯಕ್ರಮವನ್ನ ನಿರೂಪಣೆ ಮಾಡುತ್ತಾರೆ.

English summary
Suma Rajkumar gets eliminated from 'Bigg Boss Kannada 5'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X