»   » 'ಸೂಪರ್' ಆಗೊಂದು 'ಟಾಕ್ ಶೋ', ಮೊದಲ ವಾರ ರಕ್ಷಿತಾ-ರಾಗಿಣಿ ಅತಿಥಿ

'ಸೂಪರ್' ಆಗೊಂದು 'ಟಾಕ್ ಶೋ', ಮೊದಲ ವಾರ ರಕ್ಷಿತಾ-ರಾಗಿಣಿ ಅತಿಥಿ

Posted By:
Subscribe to Filmibeat Kannada

ಸೆಲೆಬ್ರೀಟಿಗಳ ಟಾಕ್ ಶೋ ಈಗಾಗಲೇ ಹಲವು ವಾಹಿನಿಗಳಲ್ಲಿ ಬಂದು ಹೋಗಿದೆ. ಆದ್ರೀಗ, ಕಲರ್ಸ್ ಸೂಪರ್ ವಾಹಿನಿ ಹೊಸದೊಂದು ಶೈಲಿಯಲ್ಲಿ ಹೊಸದೊಂದು ಉತ್ಸಾಹದೊಂದಿಗೆ ಹೊಸ ಟಾಕ್ ಶೋ ಶುರು ಮಾಡುತ್ತಿದೆ.

ಈ ಕಾರ್ಯಕ್ರಮದ ಹೆಸರು 'ಸೂಪರ್ ಟಾಕ್ ಟೈಮ್'. ಹಾಗಂತ ತುಂಬಾ ಸೀರಿಯಸ್ ಕಾರ್ಯಕ್ರಮವಲ್ಲ. ಇಲ್ಲಿ ತರ್ಲೆ ಮಾತುಗಳು, ತರ್ಲೆ ಆಟ ಗಳು ಇರುತ್ತೆ. ಜೊತೆಗೆ ಕಾಲೆಳೆಯುವುದು, ಕಾಲೆಳಿಸಿಕೊಳ್ಳುವುದು ಎಲ್ಲವೂ ಇರುತ್ತೆ ಈ ಟಾಕ್ ಶೋ ನಲ್ಲಿ ಇರಲಿದೆ.[ಮೇ 27 ರಿಂದ ಕಲರ್ಸ್ ಕನ್ನಡದಲ್ಲಿ 'ಬಿಗ್ ಬಾಸ್ ಲವ್ ಸ್ಟೋರಿ' ಶುರು]

ಇನ್ನು ಈ ಕಾರ್ಯಕ್ರಮವನ್ನ ಅಕುಲ್ ಬಾಲಾಜಿ ನಿರೂಪಣೆ ಮಾಡುತ್ತಿದ್ದು, ಮೊದಲನೇ ವಾರದಲ್ಲಿ ಸ್ಯಾಂಡಲ್ ವುಡ್ ನ ಇಬ್ಬರು ಕ್ರೇಜಿ ಕ್ವೀನ್ ಗಳು ಅತಿಥಿಗಳಾಗಿ ಆಗಮಿಸಿದ್ದಾರೆ. ಮುಂದೆ ಓದಿ...........

ಸೂಪರ್ ಟಾಕ್ ಶೋ

'ಕಲರ್ಸ್ ಸೂಪರ್' ವಾಹಿನಿಯಲ್ಲಿ ''ಸೂಪರ್ ಟಾಕ್ ಟೈಮ್'' ಎಂಬ ಹೊಸ ಟಾಕ್ ಶೋ ಆರಂಭವಾಗುತ್ತಿದೆ. ಇದು ಸ್ವಲ್ಪ ಮಾತು, ಜಾಸ್ತಿ ತರ್ಲೆ, ಜಾಸ್ತಿ ಆಟದಿಂದ ಕೂಡಿರುತ್ತೆ. ಒಂದು ಗಂಟೆಗಳ ಕಾಲ ಪ್ರಸಾರವಾಗುತ್ತೆ. ಪ್ರತಿವಾರ ಇಬ್ಬರು ಅಥವಾ ಮೂವರು ಅತಿಥಿಗಳು ಭಾಗವಹಿಸುತ್ತಾರೆ.['ಸೂಪರ್ ಮಿನಿಟ್'ನಲ್ಲಿ ವೀಕ್ಷಕರಿಗೆ ಸರ್ಪ್ರೈಸ್ ನೀಡಿದ ಗಣೇಶ್: ಏನದು?]

ಅಕುಲ್ ಬಾಲಾಜಿ ನಿರೂಪಣೆ

ಟಿವಿ ಕಾರ್ಯಕ್ರಮಗಳ ಖ್ಯಾತ ನಿರೂಪಕ ಹಾಗೂ ಮಾತಿನ ಮಲ್ಲ ಅಕುಲ್ ಬಾಲಾಜಿ, 'ಸೂಪರ್ ಟಾಕ್ ಟೈಮ್' ನಡೆಸಿಕೊಡುತ್ತಿದ್ದಾರೆ. ಅಕುಲ್ ಬಾಲಾಜಿ ಆಂಕರ್ ಅಂದ್ಮೇಲೆ ಕೇಳ್ಬೇಕಾ...! ಮಾತಿಗೆ ಬರ ಇರಲ್ಲ, ಮನರಂಜನೆಗೆ ಕೊರತೆ ಇರಲ್ಲ.

ಕ್ರೇಜಿ ಕ್ವೀನ್ಸ್ ಅತಿಥಿ

ಟಾಕ್ ಶೋಗೆ ಮೊದಲ ವಾರದ ಅತಿಥಿಯಾಗಿ ಸ್ಯಾಂಡಲ್ ವಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಹಾಗೂ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಆಗಮಿಸಿದ್ದಾರೆ. ಈಗಾಗಲೇ ಇವರಿಬ್ಬರ ಅತಿಥಿಯಾಗಿರುವ ಪ್ರೋಮೋ ಬಿಡುಗಡೆಯಾಗಿದ್ದು, ಸಖತ್ ಎಂಟರ್ ಟೈನಿಂಗ್ ಆಗಿದೆ.

ನಟಿಯರು ಆಟ

'ಸೂಪರ್ ಟಾಕ್ ಟೈಮ್'ನ ಮೊದಲ ಎಪಿಸೋಡ್ ನಲ್ಲಿ ಗ್ಲಾಮರ್ ನಟಿಯರನ್ನ ಕರೆಸಿರುವ 'ಸೂಪರ್ ಟಾಕ್ ಟೈಮ್', ಇಬ್ಬರಿಂದಲೂ ಭರ್ಜರಿ ಆಟಗಳನ್ನ ಆಡಿಸಿದೆ. ರಕ್ಷಿತಾ ಹಾಗೂ ರಾಗಿಣಿ ಇಬ್ಬರು ಚೆಂಡಾಟ ಆಡುವ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ. ನಟ ವಸಿಷ್ಠ ಸಿಂಹ ಕೂಡ ಮೊದಲ ವಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಜೂನ್ 1 ರಿಂದ ಶುರು

ಅಂದ್ಹಾಗೆ, 'ಸೂಪರ್ ಟಾಕ್ ಟೈಮ್' ಶೋ ಜೂನ್ 1 ರಿಂದ ಶುರುವಾಗಲಿದ್ದು, ಪ್ರತಿ ಗುರುವಾರ ಮತ್ತು ಶುಕ್ರವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

'ಪಿಕ್ಸಲ್ ಪಿಕ್ಚರ್ಸ್' ನಿರ್ಮಾಣ

ದಕ್ಷಿಣ ಭಾರತದ ಖ್ಯಾತ ಟಿವಿ ನಿರ್ಮಾಣ ಸಂಸ್ಥೆ 'ಪಿಕ್ಸಲ್ ಪಿಕ್ಚರ್ಸ್' ಈ ಟಾಕ್ ಶೋವನ್ನ ನಿರ್ಮಿಸಿದೆ. ಈ ಹಿಂದೆ ಕಲರ್ಸ್ ವಾಹಿನಿಯಲ್ಲಿ 'ಡ್ಯಾನ್ಸಿಂಗ್ ಸ್ಟಾರ್', 'ಸೂಪರ್ ಮಿನಿಟ್' ಅಂತಹ ಯಶಸ್ವಿ ಕಾರ್ಯಕ್ರಮಗಳನ್ನ ಪಿಕ್ಸಲ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ.

ಕಾರ್ಯಮ್ರಮದ ಬಗ್ಗೆ ಅಯೋಜರು ಅಭಿಪ್ರಾಯ

''ಕನ್ನಡದಲ್ಲಿ ಹೊಸತನ ತುಂಬಿರುವ ಟಾಕ್ ಶೋ ಆರಂಭಿಸಬೇಕು ಎಂಬ ಆಶಯವಿತ್ತು. ಅದರ ಪ್ರತಿರೂಪವೇ ಸೂಪರ್ ಟಾಕ್ ಟೈಮ್. ಒಳ್ಳೆ ಹಾಸ್ಯವನ್ನ ಒಳಗೊಂಡಿರುತ್ತೆ. ಸೆಲೆಬ್ರೀಟಗಳ ಜೊತೆ ಆಟ, ತರ್ಲೆ, ಚರ್ಚೆ ಹಾಗೂ ಅವರ ಬಗೆಗಿನ ಗಾಸಿಪ್ ಹೀಗೆ ಎಲ್ಲವೂ ಕೂಡಿರುತ್ತೆ. ವಾರದ ದಿನಗಳಲ್ಲಿ ನೋಡಲು ಇದು ಉತ್ತಮ ಕಾರ್ಯಕ್ರಮ. ಆಡಿಯೆನ್ಸ್ ಕೂಡ ಈ ಆಟಗಳಲ್ಲಿ ಭಾಗಿಯಾಗಬಹುದು''- ಮಿಸ್. ಪ್ರಶಾಂತಿ ಮಾಲಿಸೆಟ್ಟಿ, ಸಿಇಓ, ಪಿಕ್ಸಲ್ ಪಿಕ್ಚರ್ಸ್

English summary
Colors Super Channel Presenting New Talk Show in The Name Of 'Super Talk Time', which will have Akul Balaji as its host. A Programme Starts From June 1st And Actress Rakshitha and Ragini Dwivedi Guest For First Week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada