»   » ಕಿಚ್ಚನ ಅರಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ನಟಿ ಸುಷ್ಮಾ

ಕಿಚ್ಚನ ಅರಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ನಟಿ ಸುಷ್ಮಾ

Posted By:
Subscribe to Filmibeat Kannada

ರಂಗಭೂಮಿಯ ಹಿರಿಯ ಕಲಾವಿದೆ, ಹಿರಿಯ ನಟಿ ಕಮ್ ಗಾಯಕಿ ಬಿ.ಜಯಶ್ರೀ ಅವರ ಮಗಳು ಸುಷ್ಮಾ ವೀರ್ ಅವರು ಕನ್ನಡದ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಿದ್ದಾರೆ.

ಇತ್ತೀಚೆಗಷ್ಟೆ ಕಾಮಿಡಿ ನಟ ಅ.ರಾ.ಮಿತ್ರ ಮತ್ತು ಕಿರುತೆರೆ ನಟಿ ಗೌತಮಿ ಗೌಡ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ಬೆನ್ನಲ್ಲೇ ಇದೀಗ ವೈಲ್ಡ್ ಕಾರ್ಡ್ ಮೂಲಕ ನಟಿ ಸುಷ್ಮಾ ವೀರ್ ಅವರು ಕಿಚ್ಚನ ಅರಮನೆಗೆ ಬಲಗಾಲಿಟ್ಟು ಒಳಗೆ ಬಂದಿದ್ದಾರೆ.

Sushma Veer Enters Sudeep's 'Bigg Boss 3' Through Wild Card Entry

ಅಂದಹಾಗೆ ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿರುವ ನಟಿ ಸುಷ್ಮಾ ವೀರ್ ಅವರಿಗೆ 'ಉಲ್ಟಾಪಲ್ಟಾ' ಚಿತ್ರ ಯಶಸ್ಸಿನ ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಹೆಸರನ್ನು ತಂದುಕೊಟ್ಟಿತ್ತು.['ಕಳ್ಳ-ಪೊಲೀಸ್' ಆಟ; 'ಬಿಗ್ ಬಾಸ್' ಮನೆಯಲ್ಲಿ ಗದ್ದಲ ನಿಲ್ಲಂಗಿಲ್ಲ!]

ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಜೊತೆ ಜೋಡಿಯಾಗಿ ನಟಿಸಿದ ನಟಿ ಸುಷ್ಮಾ ಅವರು 'ಉಲ್ಟಾಪಲ್ಟಾ' ಚಿತ್ರದ ಮೂಲಕ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿ ಎನಿಸಿಕೊಂಡರು.

ತದನಂತರ ಹಲವಾರು ಚಿತ್ರಗಳಲ್ಲಿ ಹಾಗೂ ಅನೇಕ ಚಿತ್ರಗಳಿಗೆ ಸಹನಿರ್ದೇಶನ ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ಸುಷ್ಮಾ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.[ಡವ್ ರಾಣಿ ಕೃತಿಕಾ-ಶ್ರುತಿಗೆ ವೋಟ್ ಮಾಡ್ಬೇಡಿ ಪ್ಲೀಸ್!]

Sushma Veer Enters Sudeep's 'Bigg Boss 3' Through Wild Card Entry

ಇದೀಗ ಬಿಗ್ ಹೌಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಮನೆಮಂದಿಗೆ ಶಾಕ್ ಕೊಟ್ಟಿದ್ದಾರೆ. ಜೊತೆಗೆ ಎಂಟ್ರಿ ಕೊಟ್ಟಿದ್ದು ಮಾತ್ರವಲ್ಲದೇ ಚಂದನ್ ಬುಡಕ್ಕೆ ಬತ್ತಿ ಇಟ್ಟು ಮತ್ತೆ ಮನೆ ಮಂದಿಗೆ ಶಾಕ್ ಟ್ರೀಟ್ ಮೆಂಟ್ ಕೊಟ್ಟಿದ್ದಾರೆ.

ನೋಡೋಣ ಬಿಗ್ ಹೌಸ್ ನಲ್ಲಿ ನಟಿ ಸುಷ್ಮಾ ಅವರ ಅಡ್ಡಾದಲ್ಲಿ ಅದ್ಯಾರ್ಯಾರು ನಾಟ್ಕ ಮಾಡ್ತಾರೆ, ಯಾರು ಡೀಸೆಂಟ್ ಆಗಿರ್ತಾರೆ. ಇನ್ನು ಅದೇನೆನೂ ಆಟಗಳು ನಡೆಯುತ್ತವೆ ಅಂತ ನಾವು ಕಾದು ನೋಡೋಣ.

English summary
Bigg Boss Kannada 3: Veteran actress B Jayashree daughter will enter to Bigg Boss house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada