»   » ಸುವರ್ಣ ಹೊಸ ರಿಯಾಲಿಟಿ ಶೋಗೆ ವಿಜಯ್ ಪ್ರಕಾಶ್

ಸುವರ್ಣ ಹೊಸ ರಿಯಾಲಿಟಿ ಶೋಗೆ ವಿಜಯ್ ಪ್ರಕಾಶ್

Posted By:
Subscribe to Filmibeat Kannada

ಸ್ಟಾರ್ ನೆಟ್ ವರ್ಕ್ಸ್ ನ ಕನ್ನಡ ಮನೋರಂಜನಾ ಸುವರ್ಣ ವಾಹಿನಿಯು ಸಂಗೀತ ಆಧಾರಿತವಾದ 'ಸ್ಟಾರ್ ಸಿಂಗರ್' ಎಂಬ ವಾರಾಂತ್ಯದ ನೂತನ ರಿಯಾಲಿಟಿ ಷೋವನ್ನು ಪ್ರಾರಂಭಿಸುತ್ತಿದೆ. ಅತ್ಯುತ್ತಮವಾದ ಗಾಯಕ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸುವ ಸ್ಪರ್ಧಾತ್ಮಕ ಕಾರ್ಯಕ್ರಮ 'ಸ್ಟಾರ್ ಸಿಂಗರ್' ಆಗಿದೆ.

ಈ ಕಾರ್ಯಕ್ರಮ ಜನವರಿ 5, 2014 ರಂದು ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಜನಪ್ರಿಯ ಹಿನ್ನೆಲೆ ಗಾಯಕೆ ವಿಜಯ್ ಪ್ರಕಾಶ್ ಈ ಕಾರ್ಯಕ್ರಮದ ಗುರು. ಅಮೃತವರ್ಷಿಣಿಯ ಮುಖ್ಯ ಪಾತ್ರಧಾರಿ ರಜನಿ (ಅಮೃತ) ಮತ್ತ ಮೀರಾ ಮಾಧವ ಧಾರಾವಾಹಿಯ ಮುಖ್ಯ ಪಾತ್ರಧಾರಿ ಶೈನ್ ಶೆಟ್ಟಿ ಕೂಡಾ ಈ ಕಾರ್ಯಕ್ರಮದ ಸ್ಪರ್ಧಾರ್ಥಿಗಳೆಂಬುದು ವಿಶೇಷ.

ಈಗಾಗಲೇ ವಾಹಿನಿಯು 16 ಜನ ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದು ಅತ್ಯುತ್ತಮ ಗಾಯಕ ಪ್ರಶಸ್ತಿಯನ್ನು ಪಡೆದುಕೊಳ್ಳಲು ಎಲ್ಲರೂ ಸೆಣಸಾಡುತ್ತಾರೆ. ಸ್ಡುಡಿಯೋದಲ್ಲಿರುವ ಪ್ರೇಕ್ಷಕರಿಂದ ನೇರವಾಗಿ ಸ್ಪರ್ಧಿಗಳನ್ನು ಜಡ್ಜ್ ಮಾಡಲಾಗುತ್ತದೆ ಹಾಗೂ ವಿಜಯ್ ಪ್ರಕಾಶ್ ಎಲ್ಲ ಗಾಯಕ ಸ್ಪಧಿಗಳಿಗೆ ಗುರುವಾಗಿ ಜೊತೆಯಾಗಿರುತ್ತಾರೆ.

ಕಾವ್ಯ ಶಾಸ್ತ್ರಿ, ನಿರಂಜನ್ ದೇಶಪಾಂಡೆ ನಿರೂಪಣೆ

ಪ್ರತಿ ಸಂಚಿಕೆಯಲ್ಲೂ ಒಂದು ಸ್ಪರ್ಧಿ ಕಾರ್ಯಕ್ರಮದಿಂದ ನಿರ್ಗಮಿಸುತ್ತಾರೆ. ಅಲ್ಲದೇ ಪ್ರತಿ ಸಂಚಿಕೆಯಲ್ಲೂ ಸ್ಪರ್ಧಿಗಳು ಪ್ರಶಸ್ತಿಯ ಮೊತ್ತವನ್ನು ಗೆಲ್ಲುವ ಅವಕಾಶವಿರುತ್ತದೆ. ಕಾವ್ಯ ಶಾಸ್ತ್ರೀ ಮತ್ತು ನಿರಂಜನ್ ದೇಶಪಾಂಡೆ ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಅನುಪ್ ಚಂದ್ರಶೇಖರನ್ ಏನಂತಾರೆ?

ವಾಹಿನಿಯ ಬಿಜಿನೆಸ್ ಹೆಡ್ ಆದ ಅನುಪ್ ಚಂದ್ರಶೇಖರನ್ ಹೇಳುವಂತೆ, 'ಸ್ಟಾರ್ ಸಿಂಗರ್' ಕಾರ್ಯಕ್ರಮವನ್ನು ಆರಂಭಿಸುತ್ತಿರುವುದರ ಬಗ್ಗೆ ತಿಳಿಸಲು ಸಂತಸವೆನ್ನಿಸುತ್ತದೆ. ಇತರೆ ಸಂಗೀತದ ಸ್ಪರ್ಧಾ ಕಾರ್ಯಕ್ರಮಗಳಿಗಿಂತ ಸ್ಟಾರ್ ಸಿಂಗರ್ ವಿಭಿನ್ನವಾಗಿದೆ ಏಕೆಂದರೆ ಸ್ಟುಡಿಯೋದಲ್ಲಿರೋ ಪ್ರೇಕ್ಷಕರೇ ಸ್ಪರ್ಧಿಗಳನ್ನು ಜಡ್ಜ್ ಮಾಡುತ್ತಾರೆ.

ಹೊಸ ಜವಾಬ್ದಾರಿ ಹೊತ್ತಿರುವ ವಿಜಯ್ ಪ್ರಕಾಶ್

ಈ ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ವಿಜಯ್ ಪ್ರಕಾಶ್ ಹೊತ್ತಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ನಮ್ಮ ವೀಕ್ಷಕರು ಖಂಡಿತ ಈ ಕಾರ್ಯಕ್ರಮವನ್ನು ನೋಡಿ ಆನಂದಿಸುತ್ತಾರೆಂಬ ನಂಬಿಕೆ ನನ್ನದು ಎಂದಿದ್ದಾರೆ.

ಹೊಸ ರಿಯಾಲಿಟಿ ಶೋ ಸೇರ್ಪಡೆ

'ಸ್ಟಾರ್ ಸಿಂಗರ್ಸ್ ಸುವರ್ಣವಾಹಿನಿಯು ಪ್ರಸಾರ ಮಾಡುತ್ತಿರುವ ಜನಪ್ರಿಯ ಕಾರ್ಯಕ್ರಮಗಳಾದ ಅಮೃತವರ್ಷಿಣಿ, ಮೀರಾ ಮಾಧವ, ಪಂಚರಂಗಿ ಪೋಂ ಪೋಂ, ಪಲ್ಲವಿ ಅನುಪಲ್ಲವಿ, ಆಕಾಶದೀಪ, ಸರಸ್ವತಿ, ಕರ್ಪೂರದ ಗೊಂಬೆ, ಪ್ರಿಯದರ್ಶಿನಿ, ಮಿಲನ ಮತ್ತು ಅರಗಿಣಿ ಮೊದಲಾದವುಗಳ ಸಾಲಿಗೆ ಈಗ ಹೊಸ ಸೇರ್ಪಡೆಯಾಗುತ್ತದೆ.

ವೈವಿಧ್ಯಮಯ ಕಾರ್ಯಕ್ರಮಗಳ ಸುವರ್ಣ ವಾಹಿನಿ

ಸುವರ್ಣವಾಹಿನಿಯು ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ವೈವಿಧ್ಯತೆಯನ್ನು ಸೃಷ್ಟಿಸಿ ಕನ್ನಡ ಕುಟುಂಗಳ ಮನೆಮಾತಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

English summary
Kannada general entertainment channel Suvarna is bringing a new reality show “Star Singer” on January 5 th 2014 Sunday 9:00Pm. Renowned playback singer Vijay Prakash is the Guru for the show. 
 
Please Wait while comments are loading...