For Quick Alerts
  ALLOW NOTIFICATIONS  
  For Daily Alerts

  ಸುವರ್ಣ ಸೂಪರ್ ಜೋಡಿಯ ಸೆಲೆಬ್ರಿಟಿ ಜಡ್ಜ್ ರಮ್ಯಾ

  By Rajendra
  |

  ನಟಿ ರಮ್ಯಾಗೆ ಯಾವುದೇ ಒಂದು ವಿಷಯ ಅಥವಾ ವ್ಯಕ್ತಿ ತುಂಬಾ ಇಷ್ಟವಾದರೆ ಅವರು ಅಲ್ಲಿ ತಮ್ಮನ್ನು ತಾವೇ ಮರೆತುಬಿಡುತ್ತಾರೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿಯಾಗಿತ್ತು ಸುವರ್ಣ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಸುವರ್ಣ ಸೂಪರ್ ಜೋಡಿ'!

  ಹೌದು, ನಟಿ ರಮ್ಯಾ ಕಿರುತೆರೆಯಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಬರುವುದೇ ಅಪರೂಪ. ಅದರಲ್ಲೂ ಗಂಟೆಗಟ್ಟಲೇ ಕೂತು ಆ ಕಾರ್ಯಕ್ರಮ ವೀಕ್ಷಿಸಿ, ಪ್ರತೀ ಕ್ಷಣವನ್ನೂ ಎಂಜಾಯ್ ಮಾಡಿದರು ಎಂದರೆ ನಂಬುತ್ತೀರಾ?

  ಅದು ನಿಜವಾಗಿದ್ದು ಇತ್ತೀಚೆಗೆ. ರಮ್ಯಾ ಎರಡು ತಾಸು ಸುವರ್ಣ ಸೂಪರ್ ಜೋಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುವರ್ಣ ವಾಹಿನಿಯಲ್ಲಿ ಬರುವ ಸೂಪರ್ ಹಿಟ್ ಧಾರಾವಾಹಿಗಳ ಸಖತ್ ಜೋಡಿಗಳೆಲ್ಲ ಸೇರಿ ಕೂಡಿ ಆಡುವ, ಆಡಿ ನಲಿಯುವ "ಸುವರ್ಣ ಸೂಪರ್ ಜೋಡಿ'ಗೆ ತೀರ್ಪುಗಾರರಾಗಿ ಬಂದಿದ್ದರು.

  ಇದೇ ಜೂನ್ 29ರಂದು ಶನಿವಾರ ಸಂಜೆ 8.30ಕ್ಕೆ ಪ್ರಸಾರವಾಗಲಿರುವ ಈ ಕಾರ್ಯಕ್ರಮದಲ್ಲಿ ನೀವು ರಮ್ಯಾರ ಸಂಚಿಕೆಯನ್ನು ವೀಕ್ಷಿಸಬಹುದಾಗಿದೆ. ಸುವರ್ಣ ಪರಿವಾರದ ಸದಸ್ಯರೆಲ್ಲಾ ಸೇರಿ ನಟಿ ರಮ್ಯಾರನ್ನು ಇಂಪ್ರೆಸ್ ಮಾಡುವ ಸಂದರ್ಭ ತುಂಬಾ ಮಜವಾಗಿದೆ.

  ಪಂಚರಂಗಿ ಪೋಂಪೋ ಧಾರಾವಾಹಿಯ ಮೀನನಾಥ, ಮೀನಾಕುಮಾರಿ, ಅಮೃತವರ್ಷಿಣಿ ಧಾರಾವಾಹಿಯ ವರ್ಷಾ ವಿನಯ್ ಸೇರಿದಂತೇ ನಾನಾ ಜೋಡಿಗಳು ರಮ್ಯಾರ ಎದುರು ನಿಂತು ಅವರ ಹಾಡುಗಳಿಗೆ ಪರಫಾರ್ಮ್ ಮಾಡುವ ಮೂಲಕ ಅಚ್ಚರಿ ಮೂಡಿಸಿದರು.

  ಜೊತೆಗೆ ಅವರೆಲ್ಲರೂ ಸೇರಿ ಆಡುವ ಆಟಕ್ಕೆ ರಮ್ಯಾ ಚೀಯರಪ್ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರಮ್ಯಾ, ಇಂಥದ್ದೊಂದು ಅಪರೂಪದ ಕಾರ್ಯಕ್ರಮದಲ್ಲಿ ನಾನು ಜಡ್ಜ್ ಆಗಿ ಬಂದಿರುವುದು ನಿಜಕ್ಕೂ ಖುಷಿ ಎನಿಸುತ್ತಿದೆ. ಇಂಥದ್ದೊಂದು ಸಾಮರಸ್ಯ, ಸಹಕಾರದಿಂದ ಕೂಡಿದ ಜೋಡಿಗಳನ್ನು ನಿಜಜೀವನದಲ್ಲೂ ನೋಡಿಲ್ಲ.

  ಎಲ್ಲರೂ ಸೇರಿ ಆಡುವ ಆಟದ ಪ್ರತೀ ಕ್ಷಣಗಳನ್ನೂ ಎಂಜಾಯ್ ಮಾಡಿದೆ. ಜೊತೆಗೆ ಅವೆಲ್ಲವನ್ನೂ, ಸಂಬಂಧಪಟ್ಟ ಫೋಟೋಗಳನ್ನು ಟ್ವೀಟರ್ ಹಾಗೂ ಫೇಸ್ ಬುಕ್ ನಲ್ಲಿ ಸ್ವತಃ ತಾವೇ ಹಾಕುವುದಾಗಿ ಹೇಳಿದರು ರಮ್ಯಾ.

  ರಮ್ಯಾ ಹಾಗೆಲ್ಲಾ ಎಲ್ಲವನ್ನೂ ಇಷ್ಟಪಡುವುದಿಲ್ಲ. ತಮ್ಮ ಫೋಟೋ ಪಬ್ಲಿಷ್ ಆಗುವ ಮುನ್ನ ಕೂಡ ತಮಗೆ ತೋರಿಸಿಯೇ ಮುಂದುವರಿಯಬೇಕು ಎನ್ನುವುದು ಅವರ ಪಾಲಸಿ. ಅಂಥದ್ದರಲ್ಲಿ ರಮ್ಯಾ ಸುವರ್ಣ ಸುಪರ್ ಜೋಡಿ ಶೋಗೆ ಬಂದು, ಅದರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ ತಾವೇ ಸ್ವತಃ ಆ ಕಾರ್ಯಕ್ರಮವನ್ನು ಪ್ರೊಮೋಟ್ ಮಾಡುತ್ತೇನೆ ಎಂದು ಮುಂದೆ ಬಂದಿದ್ದಾರೆ ಎಂದರೆ ಅವರು ಆ ಕಾರ್ಯಕ್ರಮವನ್ನು ಎಷ್ಟು ಇಷ್ಟಪಟ್ಟಿರಬೇಕು ನೀವೇ ಊಹಿಸಿ!

  ಕಾರ್ಯಕ್ರಮದ ನಿರೂಪಣಾ ಶೈಲಿ, ಬೇರೆ ಬೇರೆ ಮಜವಾದ ಟಾಸ್ಕ್ ಗಳನ್ನು ನೋಡಿ ತುಂಬಾ ಇಷ್ಟಪಟ್ಟ ರಮ್ಯಾ ಅದೇ ಸಮಾರಂಭದಲ್ಲಿ ಸುವರ್ಣ ಸೂಪರ್ ಜೋಡಿ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೇ ಕಾರ್ಯಕ್ರಮದಲ್ಲಿ ತಾವೂ ಬಂದು ಸೇರಿಕೊಳ್ಳುವುದಾಗಿ, ಆ ದಿನದಂದು ಸೆಲೆಬ್ರಿಟಿ ಜಡ್ಜ್ ಆಗಿ ಕಾಣಿಸಿಕೊಳ್ಳುವುದಾಗಿ ಹೇಳಿದರು ರಮ್ಯಾ.

  ಇದ್ದ ಎರಡೂ ತಾಸನ್ನು ಎಂಜಾಯ್ ಮಾಡಿದ ಅವರು ಕೊನೆಯಲ್ಲಿ ಸುವರ್ಣ ಪರಿವಾರದ ಜೊತೆ, ಕಾರ್ಯಕ್ರಮದ ಜಡ್ಜ್ ಗಳಾದ ಸಿಹಿಕಹಿ ಚಂದ್ರು-ಸಿಹಿಕಹಿ ಗೀತಾ ಎಲ್ಲರ ಜೊತೆ ಸೇರಿ ಅವರದೇ ಸಿನಿಮಾದ ಹಿಟ್ ಹಾಡಿಗೆ ಹೆಜ್ಜೆ ಹಾಕಿದರು. ಪ್ರತೀ ಕ್ಷಣವನ್ನೂ ಸಂಭ್ರಮಿಸಿದರು. (ಒನ್ಇಂಡಿಯಾ ಕನ್ನಡ)

  English summary
  Golden Girl Ramya appears as celebrity judge in Suvarna Channels Suvarna Super Jodi reality show. The show will be air on 29th June at 8.30 pm. This reality show invites like-minded couples, who go through the toughest challenges to test their strengths, weaknesses, and emotional bond.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X