ಶಂಕರ ವಾಹಿನಿಯಲ್ಲಿ ಸ್ವಯಂವರ ರಿಯಾಲಿಟಿ ಶೋ

ಈಗಾಗಲೆ ವಾಹಿನಿಯಲ್ಲಿ 'ಕಲ್ಯಾಣಮಸ್ತು' ಎಂಬ ಕಾರ್ಯಕ್ರಮ ಮೂಡಿಬರುತ್ತಿದೆ. ಇದಕ್ಕೆ ವೀಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ 'ಸ್ವಯಂವರ' ಶೋ ಆರಂಭಿಸಲಾಗುತ್ತಿದೆ ಎಂದು ವಾಹಿನಿ ಹೇಳಿಕೊಂಡಿದೆ.
ಮೇ ತಿಂಗಳ 26ರಿಂದ ಸ್ವಯಂವರ ಆರಂಭವಾಗಲಿದೆ. ಈ ಶೋ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ವಾಹಿನಿ ಮೂಲಗಳು ತಿಳಿಸಿವೆ. ಇದು ಮನೆ-ಮನಗಳ ಮಿತ್ರ. ಇದು ಎಲ್ಲರ ಭಾವಗಳ ಚಿತ್ರ. ಜನ-ಜಾಗೃತಿಯೇ ನಮ್ಮ ಮಂತ್ರ. ಸನಾತನತೆಯೇ ನಮ್ಮ ಅಸ್ತ್ರ ಎಂಬುದು ಶ್ರೀಶಂಕರ ವಾಹಿನಿಯ ಧ್ಯೇಯವಾಕ್ಯ.
'ಕಲ್ಯಾಣಮಸ್ತು' ಕಾರ್ಯಕ್ರಮ ಪ್ರತಿ ಶನಿವಾರ ಹಾಗೂ ಭಾನುವಾರ ಬೆಳಗ್ಗೆ 10ರಿಂದ 11 ಗಂಟೆಗೆ ಮೂಡಿಬರುತ್ತಿದೆ. ಈ ಕಾರ್ಯಕ್ರಮ ಮದುವೆ ಮತ್ತು ಶುಭಕಾರ್ಯಗಳ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಬೆಳಕು ಚೆಲ್ಲುತ್ತಿದೆ.
ಈ ಹಿಂದೆ ರಾಖಿ ಕಾ ಸ್ವಯಂವರ್ ಎಂಬ ಕಾರ್ಯಕ್ರಮ ಎನ್ ಡಿಟಿವಿ ಇಮ್ಯಾಜಿನ್ ನಲ್ಲಿ ಪ್ರಸಾರವಾಗುತ್ತಿತ್ತು. ಆದರೆ ಅದೊಂದು ಪಕ್ಕಾ ಕಮರ್ಷಿಯಲ್ ಕಾರ್ಯಕ್ರಮವಾಗಿತ್ತು. ಆದರೆ ಶಂಕರ ವಾಹಿನಿಯ 'ಸ್ವಯಂವರ' ಕಾರ್ಯಕ್ರಮ ಭಾರತೀಯ ಸಂಸ್ಕೃತಿ, ಸಂಪ್ರದಾಯದಂತೆ ಮೂಡಿಬರಲಿದೆ. (ಏಜೆನ್ಸೀಸ್)


Click it and Unblock the Notifications











