»   » ಅರಮನೆಯನ್ನು ಹೋಲುವ 'ಬಿಗ್ ಬಾಸ್ 10' ಮನೆಯತ್ತ ಒಂದು ಸುತ್ತು

ಅರಮನೆಯನ್ನು ಹೋಲುವ 'ಬಿಗ್ ಬಾಸ್ 10' ಮನೆಯತ್ತ ಒಂದು ಸುತ್ತು

Posted By: ಸೋನು ಗೌಡ
Subscribe to Filmibeat Kannada

ಸಲ್ಮಾನ್ ಖಾನ್ ಸಾರಥ್ಯದ, ಬಹುನಿರೀಕ್ಷಿತ ಮತ್ತು ಅಷ್ಟೇ ವಿವಾದಾತ್ಮಕ ರಿಯಾಲಿಟಿ ಶೋ 'ಬಿಗ್ ಬಾಸ್ 10' ಆರಂಭವಾಗಿದೆ. ಈಗಾಗಲೇ 14 ಜನ ಸದಸ್ಯರು ಮನೆಯ ಒಳಗೆ ಕಾಲಿಟ್ಟಾಗಿದೆ.

ಎಲ್ಲರೂ ಮನೆಯ ಸುತ್ತಾ ಒಂದು ರೌಂಡ್ ಹೋಗಿ, ಮನೆಯ ಅಂದ-ಚೆಂದ ಮತ್ತು ಸೊಬಗನ್ನು ಸವಿದಿದ್ದಾರೆ. ಈ ಬಾರಿ ವಿಶೇಷವಾಗಿ 14 ಜನ ಸ್ಪರ್ಧಿಗಳಲ್ಲಿ 8 ಜನ ಜನ ಸಾಮಾನ್ಯರು ಅನ್ನೋದು ವಿಶೇಷ.[ಬಿಗ್ ಬಾಸ್ ನಲ್ಲಿ ಜನ ಸಾಮಾನ್ಯರು :13 ರಲ್ಲಿ 8 ಜನಕ್ಕೆ ಅವಕಾಶ!]

ಇನ್ನು ಎಂದಿನಂತೆ ಈ ಬಾರಿಯ ಬಿಗ್‌ ಬಾಸ್ 10ರ ಮನೆ ಕೂಡ ಬಹಳ ಅದ್ಧೂರಿಯಾಗಿಯೇ ಇದೆ. ಜೊತೆಗೆ ಈ ಬಾರಿ ವಿಶೇಷವಾಗಿ ಸೆಲೆಬ್ರಿಟಿ ಮತ್ತು (ಆಮ್ ಆದ್ಮಿ) ಜನ ಸಾಮಾನ್ಯರ ನಡುವೆ ಬಿಗ್ ಫೈಟ್ ನಡೆಯಲಿದೆ.

ಇದನ್ನೆಲ್ಲಾ ನೀವು ಮುಂದಿನ ದಿನಗಳಲ್ಲಿ, ಕಲರ್ಸ್ ವಾಹಿನಿಯಲ್ಲಿ, ಪ್ರತೀ ದಿನ ರಾತ್ರಿ 10.30ಕ್ಕೆ ವೀಕ್ಷಿಸಲಿದ್ದೀರಿ. ಇದೀಗ ಸದ್ಯಕ್ಕೆ ಬಹಳ ಅದ್ಧೂರಿಯಾಗಿರುವ ಮನೆಯತ್ತ ಒಂದು ರೌಂಡ್ ಹೋಗಿ ಬರೋಣ.

ವರಾಂಡ

ಮನೆಯ ಒಳಗೆ ಹೊಕ್ಕ ತಕ್ಷಣ ಸುಂದರವಾದ ಪ್ರಾಂಗಣ ಗೋಚರಿಸುತ್ತದೆ. ಬಹಳ ಕಲರ್ ಫುಲ್ ಆಗಿರುವ ಬಿಗ್ ಬಾಸ್ ಮನೆಯಲ್ಲಿ, ಕಲರ್ ಕಾಂಬಿನೇಷನ್ ಗೆ ತಕ್ಕಂತೆ ಗೋಡೆಯಲ್ಲಿ ವಿನ್ಯಾಸ ಮಾಡಲಾಗಿದೆ.[ಬಿಗ್ ಬಾಸ್ 10 ಚಾಲನೆ: ಬೆಂಗಳೂರು ಬೆಡಗಿ ಜತೆ ಸಲ್ಮಾನ್]

ಜಿಮ್ ಸೆಂಟರ್

ಸುಂದರವಾದ ಗಾರ್ಡನ್ ನಲ್ಲಿ ಸ್ಪರ್ಧಿಗಳಿಗಾಗಿ ಜಿಮ್ ಐಟಂಗಳನ್ನೂ ಇಡಲಾಗಿದೆ.['ಹಿಂದಿ ಬಿಗ್ ಬಾಸ್ 10'ಗೆ ಕರೆದರೂ ಬೇಡ ಅಂದ ನಟಿ ಮಣಿಯರು!]

ಸ್ವಿಮ್ಮಿಂಗ್ ಫೂಲ್

ಜಿಮ್ ಐಟಂಗಳನ್ನು ಆಕಡೆ ಮೂಲೆಯಲ್ಲಿ ಇಟ್ಟರೆ, ಈ ಮೂಲೆಯಲ್ಲಿ ಈಜುಕೊಳ ಇದೆ. ಅದರ ಪಕ್ಕದಲ್ಲೇ ವಿರಮಿಸಿಕೊಳ್ಳಲು ಮೆತ್ತನೆಯ ಸೋಫಾ.

ಒಳಗಡೆ ವಿಶಾಲವಾದ ಹಾಲ್

ಗಾರ್ಡನ್, ಜಿಮ್, ಈಜುಕೊಳ ನೋಡಿಕೊಂಡು ಬಂದ ಮೇಲೆ, ಒಳಗಡೆ ಬಂದರೆ ವಿಶಾಲವಾದ ಹಾಲ್ ಸಿಗುತ್ತದೆ. ಅರಮನೆಯನ್ನು ಹೋಲುವ ಈ ವಿಶಾಲವಾದ ಹಾಲ್ ನಲ್ಲಿ ಮನೆಯ ಸದಸ್ಯರು ಕುಳಿತುಕೊಳ್ಳಲು ಉದ್ದನೆಯ ಸೋಫಾ ಇಡಲಾಗಿದೆ. ಪ್ರತೀ ವಾರ ಸಲ್ಮಾನ್ ಖಾನ್ ಪಂಚಾಯತಿ ನಡೆಸುವಾಗ ಮನೆಯ ಎಲ್ಲಾ ಸದಸ್ಯರು ಇಲ್ಲಿ ಕುಳಿತುಕೊಳ್ಳುತ್ತಾರೆ.

ಊಟದ ಮನೆ

ಮನೆಯ ಎಲ್ಲಾ ಸದಸ್ಯರು ಕುಳಿತುಕೊಳ್ಳಲು ಅನುಕೂಲವಾಗುವಂತಹ ದೊಡ್ಡದಾದ ಊಟದ ಟೇಬಲ್ ಮತ್ತು ಅಷ್ಟೇ ಆಕರ್ಷಕವಾದ ಕುರ್ಚಿಗಳು. ಒಟ್ಟಿನಲ್ಲಿ ಎಲ್ಲರೂ ಆರಾಮಾಗಿ ಕುಳಿತು ತಿಂದುಣ್ಣುವ ವಿಶಾಲವಾದ ಊಟದ ಮನೆ.

ಬೆಡ್ ರೂಮ್

ಎಲ್ಲರೂ ಬೇರೆ-ಬೇರೆ ಮಲಗಲು, ಎಲ್ಲರಿಗೂ ಮೆತ್ತನೆಯ ಹಾಸಿಗೆಯುಳ್ಳ ಅತ್ಯಾಧುನಿಕ ಬೆಡ್ ರೂಮ್. ಜೊತೆಗೆ ಬೆಡ್ ರೂಮ್ ನಲ್ಲೇ ಕುಳಿತುಕೊಳ್ಳಲು ಅನುಕೂಲವಾಗುವಂತಹ ಸೋಫಾ ಕೂಡ ಇದೆ.

ಕನ್ ಫೆಶನ್ ರೂಮ್

ಒಳ್ಳೆ ಚಿನ್ನದಂತೆ ಫಳ-ಫಳ ಹೊಳೆಯುವ ಹಂಸತೂಲಿಕದಂತಿರುವ ಸಿಂಹಾಸನದಲ್ಲಿ ಕುಳಿತು ಸದಸ್ಯರು ಬಿಗ್ ಬಾಸ್ ಜೊತೆ ಮಾತನಾಡಬಹುದು. ಬಿಗ್ ಬಾಸ್ 10ರ ಕನ್ ಫೆಶನ್ ರೂಮ್ ನಲ್ಲಿ ಸ್ಪರ್ಧಿಗಳಿಗೆ ಕುಳಿತುಕೊಳ್ಳಲು ಇಟ್ಟಿರುವ ಆಸನ.

ಅಡುಗೆ ಮನೆ

ಎಲ್ಲಾ ಸೌಲಭ್ಯಗಳು ಇರುವ ಅಡುಗೆ ಮನೆ ಈ ಬಾರಿಯ ಬಿಗ್ ಬಾಸ್ 10ರ ಆಕರ್ಷಣೆ. ಇಡೀ ಅಡುಗೆ ಮನೆಗೆ ಹಳದಿ ಬಣ್ಣದ ಪೈಂಟ್ ಮಾಡಿದ್ದು, ಇನ್ನೂ ಆಕರ್ಷವಾಗಿ ಮಿನುಗುತ್ತಿದೆ.

ಬಾತ್ ರೂಮ್

ವೃತ್ತಾಕಾರದ ಬಾತ್ ಟಬ್. ಇಡೀ ಬಾತ್ ರೂಮ್ ಗೋಡೆಗಳಲ್ಲಿ ನವಿಲು ಗರಿಯ ಚಿತ್ತಾರ ಬಿಡಿಸಿದ್ದು, ಇನ್ನಷ್ಟು ಸುಂದರವಾಗಿ ಕಾಣಿಸುತ್ತಿದೆ.

ವಾಶ್ ರೂಮ್

ಕಣ್ಣು ಕೋರೈಸುವ ವಾಶ್ ರೂಮ್. ವಾಶ್ ರೂಮ್ ಒಳಗಡೆ ಸ್ಪರ್ಧಿಗಳಿಗೆ ಕುಳಿತು ಮಾತಾಡಲು ವಿಶೇಷ ಆಸನಗಳಿವು. ಗೋಡೆಯ ಮೇಲಿನ ಆಕರ್ಷಕ ಪೈಂಟಿಂಗ್ ಮತ್ತಷ್ಟು ಮನಸ್ಸಿಗೆ ಉಲ್ಲಾಸ ತರೋದು ಪಕ್ಕಾ.

ಬಿಗ್ ಬಾಸ್ ಮನೆಯಲ್ಲಿ ಜೈಲು

ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಜೈಲಿನ ಸೆಟ್ ಹಾಕಲಾಗಿದೆ. ಯಾರು ಸರಿಯಾಗಿ ಟಾಸ್ಕ್ ನಿಭಾಯಿಸೋದಿಲ್ವೋ ಅವರು ಜೈಲು ಪಾಲಾಗುತ್ತಾರೆ. ಅಲ್ಲಿ ಕೈಗೆ ಬೇಡಿ ಹಾಕಿಕೊಂಡು ಅಕ್ಷರಶಃ ಖೈದಿಯಂತೆ ಇರಬೇಕು.

ವಿಶೇಷ ಬೆಡ್

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಒಂದು ವಿಶೇಷ ಬೆಡ್ ಇರಿಸಲಾಗಿದೆ. ಯಾರು ಬಿಗ್ ಬಾಸ್ ಕೊಟ್ಟ ಟಾಸ್ಕ್ ಅನ್ನು ಸಂಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಿಭಾಯಿಸುತ್ತಾರೋ ಅವರಿಗೆ ಈ ವಿಶೇಷ ಬೆಡ್ ನಲ್ಲಿ ಮಲಗುವ ಅವಕಾಶ ಸಿಗುತ್ತದೆ.

English summary
Take a house tour of the most colorful and vibrant house of the nation. As the mansion awaits the contestsnts, you get aet to explore all the drama and fun in Bigg Boss Season 10.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada