»   » ಕಿರುತೆರೆಯಲ್ಲಿ ಪ್ರಸಾರವಾಗಲಿದೆ 'ತಾರಕೋತ್ಸವ' ಸಂಭ್ರಮ

ಕಿರುತೆರೆಯಲ್ಲಿ ಪ್ರಸಾರವಾಗಲಿದೆ 'ತಾರಕೋತ್ಸವ' ಸಂಭ್ರಮ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ದಸರಾ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ಬರ್ತಿದೆ. ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 'ತಾರಕ್' ಚಿತ್ರದ ಉತ್ಸವ ನಡೆದಿತ್ತು.

'ತಾರಕೋತ್ಸವ' ಎಂಬ ಹೆಸರಿನಲ್ಲಿ ಕಲರ್ ಫುಲ್ ಕಾರ್ಯಕ್ರಮ ನಡೆದಿದ್ದು, ಹಲವು ಅಭಿಮಾನಿಗಳು ಈ ಕಾರ್ಯಕ್ರಮವನ್ನ ಹತ್ತಿರದಿಂದ ನೋಡಿ ಖುಷಿ ಪಟ್ಟಿದ್ದರು. ಈ ಪ್ರೋಗ್ರಾಮ್ ನೋಡದೆ ಬೇಸರ ಗೊಂಡಿದ್ದ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ತಾರೋತ್ಸವ' ಪ್ರಸಾರವಾಗುತ್ತಿದೆ.

ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಬರ್ತಿದ್ದಾನೆ 'ತಾರಕ್'

Tarakotsava Event to be aired on Star Suvarna

ಸೆಪ್ಟಂಬರ್ 9 ರಂದು 'ಮಾನಸ ಗಂಗೋತ್ರಿ'ಯ ಬಯಲು ರಂಗಮಂದಿರದಲ್ಲಿ 'ತಾರಕೋತ್ಸವ' ಕಾರ್ಯಕ್ರಮ ಜರುಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ಕೆ.ಎಸ್.ದುಶ್ಯಂತ್, ನಿರ್ದೇಶಕ ಮಿಲನ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ ಚಿತ್ರತಂಡದ ಕಲಾವಿದರು ಭಾಗವಹಿಸಿದ್ದರು.

ಗೆಳೆಯ ವಿನೋದ್ ಪ್ರಭಾಕರ್ ಬೆಂಬಲಕ್ಕೆ ನಿಂತ 'ದಾಸ' ದರ್ಶನ್

ಈ ಕಾರ್ಯಕ್ರಮದಲ್ಲಿ ನಾಯಕಿಯರಾದ ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವಾತ್ಸವ್ ಚಿತ್ರದ ಹಾಡಿಗೆ ಹೆಜ್ಜೆಹಾಕಿದ್ದರು. ಇದರ ಜೊತೆಗೆ 'ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್' ಕಾರ್ಯಕ್ರಮದ ಸ್ಪರ್ಧಿಗಳು ಕೂಡ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಈಗ ಟಿವಿಯಲ್ಲಿ 'ತಾರಕೋತ್ಸವ' ಪ್ರಸಾರವಾಗುತ್ತಿದ್ದು, ಅತಿ ಶೀಘ್ರದಲ್ಲಿ ನಿರೀಕ್ಷಿಸಬಹುದು.

English summary
Tarakotsava Event will be aired on Star Suvarna for television viewers soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada