For Quick Alerts
  ALLOW NOTIFICATIONS  
  For Daily Alerts

  ಶೀಘ್ರದಲ್ಲೇ ಟೆಲಿವಿಷನ್ ಕ್ರಿಕೆಟ್ ಲೀಗ್ ಆರಂಭ: ತಂಡಗಳ ವಿವರ ಇಲ್ಲಿದೆ

  |

  ಟೆಲಿವಿಷನ್ ಕ್ರಿಕೆಟ್ ಲೀಗ್ ಮತ್ತೆ ಆರಂಭ ಆಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಾಲ್ಕನೇ ಆವೃತ್ತಿಗೆ ಚಾಲನೆ ಸಿಗಲಿದೆ. ಅದರಕ್ಕೂ ಮುನ್ನ ಟಿಸಿಎಲ್‌ (ಟೆಲಿವಿಷನ್ ಕ್ರಿಕೆಟ್ ಲೀಗ್) ತಂಡಗಳು, ಅವುಗಳ ಜರ್ಸಿ ಹಾಗೂ ಟ್ರೋಫಿಯನ್ನು ಅನಾವರಣ ಮಾಡಲಾಗಿದೆ.

  ಟಿಸಿಎಲ್ 2019ರಲ್ಲಿ ಆರಂಭವಾಗಿತ್ತು. ಸತತವಾಗಿ 3 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿ ಈಗ ನಾಲ್ಕನೇ ಸೀಸನ್‌ಗೆ ಅಣಿಯಾಗುತ್ತಿದ್ದಾರೆ. 'ಟೆಲಿವಿಷನ್ ಕ್ರಿಕೆಟ್ ಲೀಗ್'ನ 4 ನೇ ಆವೃತ್ತಿ ಸದ್ಯದಲ್ಲೇ ಆರಂಭವಾಗಲಿದೆ. ಇದೇ ಕ್ರಿಕೆಟ್ ಪಂದ್ಯಾವಳಿಯ ಜರ್ಸಿ ಹಾಗೂ ಟ್ರೋಫಿ ಹಾಗೂ ತಂಡಗಳ ಅನಾವರಣವನ್ನು ನಟ ನೀನಾಸಂ ಸತೀಶ್ ಮಾಡಿದ್ದಾರೆ.

  ಇದೇ ವೇಳೆ ಟಿಸಿಎಲ್‌ಗೆ ಬೆಂಬಲ ನೀಡಲು ಹೊಂಬಾಳೆ ಸಂಸ್ಥೆಯ ಶೈಲಜಾ ವಿಜಯ್ ಕಿರಗಂದೂರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಖ್ಯ ಅತಿಥಿಗಳಾಗಿ ಬಂದು ಟ್ರೋಫಿ ಹಾಗೂ ಜರ್ಸಿ ಅನಾವರಣ ಮಾಡಿದ್ದಾರೆ.

  'ಟೆಲಿವಿಷನ್ ಕ್ರಿಕೆಟ್ ಲೀಗ್'ನ ಫೌಂಡರ್ ದೀಪಕ್ ಹಾಗೂ ಕೋ ಫೌಂಡರ್‌ಗಳಾಗಿರೋ ಮಂಜೇಶ್ ಮತ್ತು ದಿವ್ಯ ಪ್ರಸಾದ್ ಈ ಬಾರಿ ಪಂದ್ಯಾವಳಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಟೆಲಿವಿಷನ್ ಕ್ರಿಕೆಟ್ ಲೀಗ್‌ನ 4 ಸೀಸನ್‌ನಲ್ಲಿ 6 ತಂಡಗಳು ಭಾಗಿಯಾಗಲಿವೆ. ಆ 6 ತಂಡಗಳ ವಿವರ ಇಲ್ಲಿದೆ.

  ಪ್ರೊವಿಟೇಲ್ ಹೆಲ್ತ್‌ನ ಡಾ||ಶಿಲ್ಪ 'ರೋರಿಂಗ್ ಲಯನ್ಸ್' ತಂಡ ಮಾಲೀಕರು. ಈ ತಂಡಕ್ಕೆ ನಾಯಕರಾಗಿ ಕಿರಿಕ್ ಕೀರ್ತಿ ಹಾಗೂ ಉಪನಾಯಕ ಕಾರ್ತಿಕ್ ಮಹೇಶ್. ಇನ್ನು ಈ ತಂಡದ ರಾಯಬಾರಿಯಾಗಿ ಶ್ರುತಿ ರಮೇಶ್, ಶುಭಾ ರಕ್ಷ ಹಾಗೂ ಸುಶ್ಮಿತ.

  ಡಾ||ಚೇತನ ಮಾಲೀಕತ್ವದ ತಂಡ 'ಜಟಾಯು'. ಈ ತಂಡದ ನಾಯಕನಾಗಿ ಹರ್ಷ ಸಿ.ಹೆಚ್ ಗೌಡ ಹಾಗೂ ಉಪನಾಯಕನಾಗಿ ಹರೀಶ್ ಇದ್ದಾರೆ. ಸಾಕ್ಷಿ ಮೇಘನಾ ಹಾಗೂ ಪೂಜಾ ರಾಯಬಾರಿಗಳಾಗಿದ್ದಾರೆ.

  ಸುಲ್ತಾನ್ ಹಾಗೂ ಎಂ.ಆರ್ ಸ್ವಾಮಿ ಮಾಲೀಕತ್ವದ ತಂಡ 'ಕ್ರೇಜಿ ಕಿಲ್ಲರ್'. ಈ ತಂಡದ ನಾಯಕ ಅರ್ಜುನ್ ಯೋಗಿ ಹಾಗೂ ಉಪನಾಯಕ ಚೇತನ್ ವಿಕಾಸ್. ಮೇಘನಾ ಹಾಗೂ ಆವಂತಿಕ ರಾಯಭಾರಿಗಳಾಗಿದ್ದಾರೆ.

  Television Cricket League Jersey Trophy Unveiling By Ninasam Sathish

  'ಅಮ್ಮಾಸ್ ಫುಡ್'ನ ಶ್ರೀನಿಧಿ ಮಾಲೀಕರಾಗಿರೋ ತಂಡದ ಹೆಸರು 'ಗ್ಯಾಂಗ್ ಗರುಡಾಸ್'. ಈ ತಂಡದ ನಾಯಕನಾಗಿ ಮಾಸ್ಟರ್ ಆನಂದ್. ಹಾಗೇ ಉಪನಾಯಕನಾಗಿ ಕರಿಬಸವ. ರಾಯಬಾರಿಗಳೂ ತನಿಶಾ, ಪಲ್ಲವಿ ಗೌಡ ಹಾಗೂ ದ್ರವ್ಯಾ ಶೆಟ್ಟಿ.

  ಪ್ರಧಾನ್ ಟಿವಿಯ ಪ್ರಶಾಂತ್ ಹಾಗೂ ನಾಗಶ್ರೀ ಮಾಲೀಕತ್ವದ ತಂಡ 'ಚಾಂಪಿಯನ್ ಚೀತಸ್'. ಈ ತಂಡದ ನಾಯಕ ಹೇಮಂತ್. ಹಾಗೇ ಉಪನಾಯಕ ಮಂಜು ಪಾವಗಡ. 'ಚಾಂಪಿಯನ್ ಚೀತಸ್' ತಂಡಕ್ಕೆ ವಿಜಯಲಕ್ಷ್ಮಿ ಹಾಗೂ ಯಶಸ್ವಿನಿ ಮತ್ತು ಜಾಹ್ನವಿ ರಾಯಭಾರಿಗಳಾಗಿದ್ದಾರೆ.

  ಕಿರೀಟಿ ವೆಂಚರ್‌ನ ಕುಶಾಲ್ ಗೌಡ 'ಗಜಪಡೆ ವಾರಿಯರ್ಸ್'ಗೆ ಓವರ್. ಈ ತಂಡದ ನಾಯಕ ವಿವಾನ್ ಹಾಗೂ ಉಪನಾಯಕನಾಗಿ ಶ್ರೀರಾಮ್. ಇನ್ನು 'ಗಜಪಡೆ ವಾರಿಯರ್ಸ್' ತಂಡಕ್ಕೆ ವರ್ಷಿತಾ, ಅಮೂಲ್ಯ ಹಾಗೂ ಅನಿಕಾ ಈ ತಂಡದ ರಾಯಭಾರಿಗಳಾಗಿದ್ದಾರೆ. ಎರಡು ದಿನಗಳ ಕಾಲ 'ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4'ನ ಪಂದ್ಯಗಳು ನಡೆಯಲಿವೆ.

  English summary
  Television Association Cricket League Jersey Trophy Unveiling By Ninasam Sathish, Know More.
  Sunday, December 4, 2022, 23:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X