For Quick Alerts
  ALLOW NOTIFICATIONS  
  For Daily Alerts

  Breaking: ಕಿರುತೆರೆ ನಿರ್ಮಾಪಕರ ಒಕ್ಕೊರಲ ನಿರ್ಧಾರ: ಅನಿರುದ್ಧ್ 2 ವರ್ಷ ಬ್ಯಾನ್!

  |

  ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರೋ 'ಜೊತೆ ಜೊತೆಯಲಿ' ಧಾರಾವಾಹಿಯ ತಂಡದೊಂದಿಗೆ ಅನಿರುದ್ಧ್ ಕಿರಿಕ್ ಮಾಡಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಈ ಬಗ್ಗೆನೇ ವಿವಾದ ಆರಂಭ ಆಗಿತ್ತು. 'ಜೊತೆ ಜೊತೆಯಲಿ' ಧಾರಾವಾಹಿ ಚಿತ್ರೀಕರಣದ ವೇಳೆ ಸ್ಕ್ರಿಪ್ಟ್ ಸರಿಯಿಲ್ಲ ಎನ್ನುವ ಕಾರಣಕ್ಕೆ ಕಿರಿಕ್ ಮಾಡಿಕೊಂಡು ಪೇಚಿಗೆ ಸಿಲುಕಿದ್ದಾರೆ.

  'ಜೊತೆ ಜೊತೆಯಲಿ' ಧಾರಾವಾಹಿ ಚಿತ್ರೀಕರಣವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದ ಅನಿರುದ್ಧ್ ಅವರ ವಿರುದ್ಧ ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ನೀಡಲಾಗಿತ್ತು. ನಿನ್ನೆ( ಆಗಸ್ಟ್ 18)ಯಿಂದ ಇದೇ ವಿಚಾರವಾಗಿ ಕಿರುತೆರೆ ನಿರ್ಮಾಪಕರ ಸಂಘದಲ್ಲಿ ಚರ್ಚೆ ನಡೆಯುತ್ತಲೇ ಇತ್ತು. ಇಂದು (ಆಗಸ್ಟ್ 19) ಮುಂದುವರೆದಿದ್ದ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

  ಧಾರಾವಾಹಿಯ ನಿರ್ಮಾಪಕ ಅರೂರು ಜಗದೀಶ್ ದೂರಿನ ಮೇರೆಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಧಾರಾವಾಹಿ ನಿರ್ಮಾಪಕರೆಲ್ಲರೂ ಒಕ್ಕೊರಲಿನಿಂದ ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಧಾರಾವಾಹಿ ಹಾಗೂ ರಿಯಾಲಿಟಿ ಶೋನಿಂದ ಬ್ಯಾನ್ ಮಾಡುವಂತಹ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಫಿಲ್ಮಿಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

  ಅಸಲಿಗೆ ಆಗಿದ್ದೇನು?

  ಅಸಲಿಗೆ ಆಗಿದ್ದೇನು?

  ನಿನ್ನೆ(ಆಗಸ್ಟ್ 18) ಮಧ್ಯಾಹ್ನ 'ಜೊತೆಜೊತೆಯಲಿ' ಶೂಟಿಂಗ್ ಸೆಟ್‌ನಲ್ಲಿ ಅನಿರುದ್ಧ್ ಕಿರಿಕ್ ಮಾಡಿದ್ದಾರೆ. ಧಾರಾವಾಹಿಯ ಡೈಲಾಗ್ ಬದಲಿಸುವಂತೆ ನಿರ್ದೇಶಕ ಮಧು ಉತ್ತಮ್ ಬಳಿ ಖ್ಯಾತೆ ತೆಗೆದಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು ಈ ಧಾರಾವಾಹಿಯಲ್ಲಿ ನಟಿಸಲ್ಲ ಎಂದು ಹೊರನಡೆದಿದ್ದಾರೆ ಅನ್ನೋದು ಅನಿರುದ್ದ್ ಮೇಲಿರುವ ಆರೋಪ. ಈ ಕಾರಣಕ್ಕೆ ಧಾರಾವಾಹಿ ನಿರ್ಮಾಪಕ ಅರೂರು ಜಗದೀಶ್ ಕಿರುತೆರೆ ನಿರ್ಮಾಪಕರ ಸಂಘಕ್ಕೆ ಹಾಗೂ ಜೀ ವಾಹಿನಿಗೆ ದೂರು ನೀಡಿದ್ದರು. ಆ ಬಳಿಕವೇ ಕಿರುತೆರೆ ನಿರ್ಮಾಪಕರ ಸಂಘದಲ್ಲಿ ಸಭೆ ಸೇರಿ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರಲಾಗಿದೆ.

  ನಿರ್ಮಾಪಕರ ಸಂಘದ ನಿರ್ಧಾರವೇನು

  ನಿರ್ಮಾಪಕರ ಸಂಘದ ನಿರ್ಧಾರವೇನು

  ಕಿರುತೆರೆಯ ಪ್ರಡ್ಯೂಸರ್ ಅಸೋಸಿಯೇಷನ್ ಅಧ್ಯಕ್ಷರಾದ ಭಾಸ್ಕರ್ ಮಂಗಾಡಹಳ್ಳಿ ನೇತೃತ್ವದಲ್ಲಿ ಸಭೆ ನಡೆದಿತ್ತು. ಅನಿರುದ್ಧ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಫಿಲ್ಮಿಬೀಟ್‌ಗೆ ಭಾಸ್ಕರ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ. " ಅನಿರುದ್ಧ್ ಅವರ ವರ್ತನೆಯನ್ನು ಪರಿಗಣಿಸಿ ಎರಡು ದಿನ ಚರ್ಚೆ ಮಾಡಿದ್ದೇವೆ. ಕಿರುತೆರೆಯ ಎಲ್ಲಾ ನಿರ್ಮಾಪಕರ ಒಕ್ಕೊರಲಿನ ನಿರ್ಧಾರದಂತೆ. ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಯಾವುದೇ ಧಾರಾವಾಹಿ ಹಾಗೂ ರಿಯಾಲಿಟಿ ಶೋನಲ್ಲಿ ಹಾಕಿಕೊಳ್ಳುವಂತಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ." ಎಂದು ಮಾಹಿತಿ ನೀಡಿದ್ದಾರೆ.

  ಮನರಂಜನಾ ವಾಹಿನಿಗಳಿಗೆ ಪತ್ರ

  ಮನರಂಜನಾ ವಾಹಿನಿಗಳಿಗೆ ಪತ್ರ

  " ಈಗಾಗಲೇ ನಿರ್ಮಾಪಕರಿಗಷ್ಟೇ ಅಲ್ಲ. ಪ್ರಮುಖ ಮನರಂಜನಾ ವಾಹಿನಿಗಳಿಗೂ ಈ ಮೇಲ್ ಮೂಲಕ ಮಾಹಿತಿಯನ್ನು ಕಳುಹಿಸಿದ್ದೇವೆ. ಅವರಿಗೆ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಆದರೆ, ಅವರೆಲ್ಲರೂ ಇದೂವರೆಗೂ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ." ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಭಾಸ್ಕರ್ ಅವರು ಮಾಹಿತಿ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ನಟ ಅನಿರುದ್ಧ್ ಅವರಿಗೆ ಈ ವಿಚಾರದಲ್ಲಿ ಹಿನ್ನೆಡೆಯಾಗಿದೆ.

  Recommended Video

  Aniruddha Jatkar | ನನ್ನಲ್ಲಿ ದುರಹಂಕಾರ ಇಲ್ಲ ಬ್ಯಾನ್ ಆಗಲು ಕಾರಣ ಏನು | Filmibeat Kannada
  ಮುಂದಿನ ನಡೆಯೇನು?

  ಮುಂದಿನ ನಡೆಯೇನು?

  ಇಷ್ಟೆಲ್ಲಾ ಆದ ಬಳಿಕ ಅನಿರುದ್ಧ್ ಮತ್ತೆ 'ಜೊತೆ ಜೊತೆಯಲಿ' ಧಾರಾವಾಹಿಗೆ ಮರಳುವುದು ಬಹುತೇಕ ಅಸಾಧ್ಯ. ಅಲ್ಲದೆ ಅವರಿಗೆ ಬೇರೆ ಮನರಂಜನ ವಾಹಿನಿಯ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಗುವುದು ಅನುಮಾನವೇ. ಇತ್ತ ಆರ್ಯವರ್ಧನ್ ಆಗಿ ಗುರುತಿಸಿಕೊಂಡಿರೋ ಅನಿರುದ್ಧ್ ಜಾಗಕ್ಕೆ ಬೇರೆ ಯಾರು ಬರುತ್ತಾರೆ? ಅವರು ಆರ್ಯವರ್ಧನ್ ಜಾಗವನ್ನು ತುಂಬುತ್ತಾರಾ? ಜನ ಅವರನ್ನು ಸ್ವೀಕರಿಸುತ್ತಾರಾ? ಅನ್ನೋ ಅನುಮಾನ ಎದುರಾಗಿದೆ.

  English summary
  Television Producer Association Banned Aniruddha From Serial And Reality Show, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X