For Quick Alerts
  ALLOW NOTIFICATIONS  
  For Daily Alerts

  ತೀವ್ರ ಅನಾರೋಗ್ಯ, ಬಿಗ್‌ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ

  |

  ತೆಲುಗು ಬಿಗ್‌ಬಾಸ್ 4 ನೇ ಸೀಸನ್‌ ಪ್ರೇಕ್ಷಕರ ಮನ ಗೆದ್ದಿದೆ. ಒಳ್ಳೆಯ ಟಿಆರ್‌ಪಿ ಯನ್ನೂ ಬಾಚಿಕೊಂಡಿದೆ.

  ಚೆನ್ನಾಗಿಯೇ ನಡೆಯುತ್ತಿದ್ದ ಶೋ ನಿಂದ ಮೊದಲಿಗೆ ನಿರೂಪಕ ನಾಗಾರ್ಜುನ ದೂರ ಉಳಿಯಬೇಕಾಗಿ ಬಂತು, ಚಿತ್ರೀಕರಣಕ್ಕೆಂದು ಅವರು ಮೂರು ವಾರಗಳ ಕಾಲ ಬಿಗ್‌ಬಾಸ್ ನಿಂದ ದೂರ ಉಳಿಯಲಿದ್ದಾರೆ.

  ಮೊದಲ ಬಾರಿಗೆ 'ಬಿಗ್ ಬಾಸ್' ನಡೆಸಿಕೊಟ್ಟ ಅನುಭವ ಬಿಚ್ಚಿಟ್ಟ ನಟಿ ಸಮಂತಾಮೊದಲ ಬಾರಿಗೆ 'ಬಿಗ್ ಬಾಸ್' ನಡೆಸಿಕೊಟ್ಟ ಅನುಭವ ಬಿಚ್ಚಿಟ್ಟ ನಟಿ ಸಮಂತಾ

  ಈಗ ಬಿಗ್‌ಬಾಸ್ ಸ್ಪರ್ಧಿಯೊಬ್ಬರು, ಆರೋಗ್ಯದ ಕಾರಣದಿಂದ ಬಿಗ್‌ಬಾಸ್ ಮನೆಯಿಂದ ಹೊರಗೆ ಉಳಿಯಬೇಕಾದ ಪ್ರಸಂಗ ಬಂದಿದೆ. ಅನಾರೋಗ್ಯದ ಕಾರಣದಿಂದ ಚೆನ್ನಾಗಿ ಆಡುತ್ತಿದ್ದ ಸ್ಪರ್ಧಿಯೊಬ್ಬರು ಅನಿವಾರ್ಯವಾಗಿ ಮನೆಯ ಉಳಿದ ಸದಸ್ಯರಿಗೆ ಬಾಯ್ ಹೇಳಿ ಹೊರಬಂದಿದ್ದಾರೆ.

  ಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತ

  ನೊಯಿಲ್ ಸೀನ್ ಬಿಗ್‌ಬಾಸ್ ಮನೆ ತೊರೆದಿದ್ದಾರೆ

  ನೊಯಿಲ್ ಸೀನ್ ಬಿಗ್‌ಬಾಸ್ ಮನೆ ತೊರೆದಿದ್ದಾರೆ

  ಹೌದು, ರ್ಯಾಪರ್ ಹಾಗೂ ನಟನಾಗಿ ಹೆಸರು ಮಾಡಿದ್ದ ನೊಯಿಲ್ ಸೀನ್ ಅವರು ಬಿಗ್‌ಬಾಸ್ ಮನೆ ತೊರೆದಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನೊಯಿಲ್ ಸೀನ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.

  ಮೈ-ಕೈ ನೋವು ಉಲ್ಬಣ

  ಮೈ-ಕೈ ನೋವು ಉಲ್ಬಣ

  ನೊಯಿಲ್ ಸೀನ್ ಅವರಿಗೆ ಕೆಲವು ದಿನದಿಂದ ಮೈ-ಕೈ ನೋವು ಕಾಣಿಸಿಕೊಳ್ಳುತ್ತಿತ್ತಂತೆ. ಬರು-ಬರುತ್ತಾ ಮೈ-ಕೈ ನೋವು ಹೆಚ್ಚಾಗುತ್ತಲೇ ಹೋದ ಕಾರಣ ಅನಿವಾರ್ಯವಾಗಿ ಅವರು ಶೋ ನಿಂದ ಹೊರಗೆ ಹೋಗಬೇಕಾಗಿ ಬಂದಿದೆ.

  ಕುಟುಂಬ ವೈದ್ಯರ ಸಲಹೆಯಂತೆ ಹೊರಕ್ಕೆ

  ಕುಟುಂಬ ವೈದ್ಯರ ಸಲಹೆಯಂತೆ ಹೊರಕ್ಕೆ

  ಆರಂಭದಲ್ಲಿ ಅವರು ಬಿಗ್‌ಬಾಸ್ ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಂಡರು, ಆದರೆ ಮೈ-ಕೈ ನೋವು ಉಲ್ಬಣವಾದ ಕಾರಣ ತಮ್ಮ ಖಾಸಗಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದಿದ್ದಾರೆ. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ.

  ನೊಯಿಲ್ ಸೀನ್ ಒಳ್ಳೆಯ ಸ್ಪರ್ಧಿಯಾಗಿದ್ದರು

  ನೊಯಿಲ್ ಸೀನ್ ಒಳ್ಳೆಯ ಸ್ಪರ್ಧಿಯಾಗಿದ್ದರು

  ಬಿಗ್‌ಬಾಸ್ ಮನೆಯಲ್ಲಿ ನೊಯಿಲ್ ಸೀನ್ ಅವರು ಒಳ್ಳೆಯ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಯಾವುದಕ್ಕೂ ಸಿಟ್ಟು ಮಾಡಿಕೊಳ್ಳದೆ, ನ್ಯಾಯವಾಗಿ ಆಟವಾಡುವ, ಟಾಸ್ಕ್‌ಗಳನ್ನು ಪೂರೈಸುವ, ಮತ್ತೊಬ್ಬರಿಗೆ ಸಹಾಯ ಮಾಡುವ ವ್ಯಕ್ತಿ ಎಂದು ನೊಯಿಲ್ ಸೀನ್ ಅವರನ್ನು ಗುರುತಿಸಲಾಗಿತ್ತು.

  English summary
  Telugu Bigg Boss 4 contestant Noel Sean exists from Bigg Boss show for medical emergency.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X