For Quick Alerts
  ALLOW NOTIFICATIONS  
  For Daily Alerts

  ಯಾರು ಈ ಉಜ್ವಲ ಶೇಖರ್? ಚಿರಂತನ್ ಮುಚ್ಚಿಟ್ಟಿದ್ದ ಸತ್ಯ ಬಹಿರಂಗ!

  |

  ಅಂತು ಜಾನಕಿಯ ಸಹೋದರಿ ಚಂಚಲ ನಿಶ್ಚಿತಾರ್ಥ ಕಾರ್ಯಕ್ರಮ ಯಶಸ್ವಿಯಾಗಿ ಮುಗಿದಿದೆ. ಜಾನಕಿ ಮತ್ತು ನಿರಂಜನ್ ಅವರನ್ನು ಅವಮಾನಿಸುತ್ತಲೆ, ಭಾರ್ಗಿ ಎರಡನೆ ಮಗಳ ಎಂಗೇಜ್ ಮೆಂಟ್ ಸಂಮಾರಂಭವನ್ನು ಮುಗಿಸಿದ್ದಾರೆ.

  ಚಿರಂತನ್ ಮನೆಯವರನ್ನು ದೂರ ಇಟ್ಟು ಭಾರ್ಗಿ ತನ್ನ ಮಗಳ ಜೊತೆ ಚಿರಂತನ್ ನಿಶ್ಚಿತಾರ್ಥ ಮಾಡಿದ್ದಾರೆ. ಚಿರಂತನ್ ಕೂಡ ಮನೆಯವರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕ್ರಿಮಿನಲ್ ಚಿರಂತನ್ ಮತ್ತು ಭಾರ್ಗಿ ಇಬ್ಬರು ಚಂಚಲಳನ್ನು ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

  ನಿರಂಜನ್ ಪತ್ನಿ ಜಾನಕಿ ಎನ್ನುವ ವಿಚಾರ ಮನೆಯವರಿಗೆ ಗೊತ್ತಾಗಿಬಿಡುತ್ತಾ?

  ಜಾನಕಿಗೆ ಭಾರ್ಗಿಯಿಂದ ಅವಮಾನ ಆಗುತ್ತಿದ್ದರು ಕ್ರಿಮಿನಲ್ ಚಿರಂತನ್ ಜೊತೆ ತಂಗಿಯ ನಿಶ್ಚಿತಾರ್ಥ ನಡೆಯುತ್ತಿದೆ ಎನ್ನುವ ಬೇಸರ ಕೂಡ ಕಾಡುತ್ತಿದೆ. ಯಾರಿಗೂ ಅನುಮಾನ ಬರದಂತೆ ನಿಶ್ಚಿತಾರ್ಥ ಮಾಡುತ್ತಿದ್ದ ಭಾರ್ಗಿಗೆ ಪತ್ರಕರ್ತರಿಂದ ಪ್ರಶ್ನೆಗಳ ಸುರಿಮಳೆ ಎದುರಾಗುತ್ತಿದೆ. ಜೊತೆಗೆ ಚಿರಂತನ್ ಪಾತ್ರದ ಜೊತೆ ಮತ್ತೊಂದು ಪಾತ್ರದ ಎಂಟ್ರಿ ಕೂಡ ಆಗಿದೆ.

  ಮಾಧ್ಯಮದರ ಪ್ರಶ್ನೆಗೆ ಬಾರ್ಗಿ ಉತ್ತರ

  ಮಾಧ್ಯಮದರ ಪ್ರಶ್ನೆಗೆ ಬಾರ್ಗಿ ಉತ್ತರ

  ಮಾಧ್ಯಮದವರ ಮುಂದೆ ಚಿರಂತನ್ ಅವರನ್ನು ಪರಿಚಯಿಸಿಕೊಂಡ ಭಾರ್ಗಿಗೆ ರಾಜು ಚೌಧರಿ ಬಗ್ಗೆ ಪ್ರಶ್ನೆಗಳ ಸುರಿಮಳೆ ಎದುರಾಗುತ್ತಿದೆ. ಒಮ್ಮೆ ಶಾಕ್ ಆದ ಭಾರ್ಗಿ, ನಂತರ ಉತ್ತರಿಸಿದ್ದಾರೆ. ರಾಜು ಚೌಧರಿಗೆ ಮತ್ತು ನನಗೆ ಯಾವುದೆ ದ್ವೇಷ ಇಲ್ಲ. ರಾಜಕೀಯ ಬೇರೆ ಸಂಬಂಧ ಬೇರೆ. ರಾಜು ಚೌಧರಿ ಅವರ ಪತ್ನಿಗೆ ಆರೋಗ್ಯ ಸರಿ ಇಲ್ಲದ ಕಾರಣ ರಾಜು ಚೌಧರಿ ಬಂದಿಲ್ಲ ಎಂದು ಹೇಳಿ ಅನುಮಾನಕ್ಕೆ ತೆರೆ ಎಳೆದು ಹೊರಟಿದ್ದಾರೆ.

  ಅಂತೂ ನಿರಂಜನ್ ಕೋಟಿನ ಸಮಸ್ಯೆ ಬಗೆ ಹರಿಯಿತು

  ಆತಂಕದಲ್ಲಿ ಚಿರಂತನ್

  ಆತಂಕದಲ್ಲಿ ಚಿರಂತನ್

  ಚಿರಂತನ್ ಅನ್ನು ಭೇಟಿಯಾಗಲು ಉಜ್ವಲ ಶೇಖರ್ ಬಂದಿರುವ ವಿಚಾರವನ್ನು ಸ್ನೇಹಿತ ಚಿರಂತನ್ ಬಳಿ ಬಂದು ಹೇಳಿದ್ದಾರೆ. ಸ್ನೇಹಿತನ ಮಾತು ಕೇಳಿ ಗಾಬರಿಯಲ್ಲಿದ್ದಾರೆ ಚಿರಂತನ್. ಆದ್ರೆ ಆಕೆ ಯಾಕೆ ಬಂದಿದ್ದಳು, ಚಿರಂತನ್ ಗೂ ಮತ್ತು ಆಕೆಗು ಏನು ಸಂಬಂಧ ಎನ್ನುವುದು ಇನ್ನು ರಿವೀಲ್ ಆಗಿಲ್ಲ. ನಿಶ್ಚಿತಾರ್ಥ ನಡೆಯುತ್ತಿದ್ದ ಸ್ಥಳಕ್ಕೆ ಉಜ್ವಲ ಬಂದಿರುವುದರಿಂದ ಚಿರಂತನ್ ಗೆ ಆತಂಕ ಹೆಚ್ಚಾಗಿದೆ. ಆದ್ರೆ ಸ್ನೇಹಿತರೆಲ್ಲ ಆಕೆಯನ್ನು ವಾಪಾಸ್ ಕಳುಹಿಸಿದ್ದರಂತೆ.

  ಉಂಗುರ ಬದಲಾಯಿಸಿಕೊಂಡ ಚಂಚಲ-ಚಿರಂತನ್

  ಉಂಗುರ ಬದಲಾಯಿಸಿಕೊಂಡ ಚಂಚಲ-ಚಿರಂತನ್

  ನೀಲಿ ಬಣ್ಣದ ಸೀರೆಯಲ್ಲಿ ಚಂಚಲ ಮಿಂಚುತ್ತಿದ್ದಾರೆ. ಬಿಳಿ ಬಣ್ಣದ ಕಾಸ್ಟ್ಯೂಮ್ ನಲ್ಲಿ ಚಿರಂತನ್ ಕಂಗೊಳಿಸುತ್ತಿದ್ದಾರೆ. ಚಂಚಲ ನಿಶ್ಚಿತಾರ್ಥದಲ್ಲಿ ಇಡೀ ಕುಟುಂಬ ಮುಳುಗಿಹೋಗಿದೆ. ಚಂಚಲ ಮದುವೆಯನ್ನು ಟಿವಿಯಲ್ಲಿ ನೇರಪ್ರಸಾರ ನೋಡುತ್ತಿದ್ದ ಶಾಮಲಾ ಮತ್ತು ಸುಂದರ್ ಮೂರ್ತಿ ಸಿ ಎಸ್ ಪಿಗೆ ಭಯಪಟ್ಟು ಟಿವಿ ಆಫ್ ಮಾಡಿದ್ದಾರೆ.

  ಮಧುಕರ ವಿಚಾರ ಬಹಿರಂಗ

  ಮಧುಕರ ವಿಚಾರ ಬಹಿರಂಗ

  ಚಂಚಲ ನಿಶ್ಚಿತಾರ್ಥಕ್ಕೆ ಮಧುಕರ ಹೋಗಿರುವ ವಿಚಾರ ಸಿ ಎಸ್ ಪಿ ಅವರಿಗೆ ಗೊತ್ತಾಯಿತು. ಟಿವಿಯಲ್ಲಿ ನೇರಪ್ರಸಾರ ನೋಡುತ್ತಿದ್ದ ಸುಂದರ್ ಮೂರ್ತಿ ಸಿ ಎಸ್ ಪಿ ಬಳಿ ಎಲ್ಲ ವಿಚಾರವನ್ನು ಹೇಳಿದ್ದಾರೆ. ಭಾರ್ಗಿ ಅವರು ಮಧುಕರನ ಬಳಿ ಮಾತನಾಡುತ್ತಿರುವ ವಿಚಾರವನ್ನು ಹೇಳಿ ಸಿ ಎಸ್ ಪಿ ಮನಸಿಗೆ ನೋವುಂಟುಮಾಡಿದ್ದಾರೆ. ನಿಶ್ಚಿತಾರ್ಥ ನಿಲ್ಲಿಸುವಂತೆ ಶಾಮಲಾ ಸಿ ಎಸ್ ಪಿ ಕೇಳಿಕೊಂಡಿದ್ದಾರೆ.

  ನಿರಂಜನ್ ಕೋಟಿನ ಬಟನ್ ಕಿತ್ತಿರುವ ಸನ್ನಿವೇಶ ಅಸಹಜವಾಗಿದೆ : ಪ್ರೇಕ್ಷಕರ ಅಸಮಾಧಾನ

  ಮನೆಯಿಂದ ಹೊರಟ ಜಾನಕಿ

  ಮನೆಯಿಂದ ಹೊರಟ ಜಾನಕಿ

  ತಂಗಿಯ ನಿಶ್ಚಿತಾರ್ಥ ಮುಗಿಸಿ ಜಾನಕಿ ಮನೆಯಿಂದ ಹೊರಟಿದ್ದಾರೆ. ಅಪ್ಪನ ಬಗ್ಗೆ ಬೇಸರ ಮಾಡಿಕೊಂಡಿರುವ ಜಾನಕಿ ತಾಯಿ ರಶ್ಮಿ ಬಳಿ ಎಲ್ಲವನ್ನು ಹೇಳಿಕೊಂಡ ಕಣ್ಣೀರಾಕಿದ್ದಾರೆ. ರಶ್ಮಿಯನ್ನು ಸಮಾಧಾನ ಮಾಡಿ ಜಾನಕಿ ನೋವಿನಿಂದ ಹೊರಟಿದ್ದಾರೆ. ನಿರಂಜನ್ ಅನ್ನು ಸಮಾಧಾನ ಮಾಡುವಂತೆ ರಶ್ಮಿ ಹೇಳಿದ್ದಾರೆ. ಅಲ್ಲದೆ ಚಂಚಲ ಮದುವೆಗೆ ಬರುವುದು ಅನುಮಾನ ಎಂದು ಹೇಳಿ ಹೊರಟಿದ್ದಾರೆ ಜಾನಕಿ.

  English summary
  The reporters request Chandu for a press meet in Chanchala engagement ceremony. They are questioned him about Raju Chowdary's absence from his son's engagement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X