For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ ಕಿಟ್‌'ನಿಂದ ಬಯಲಾಯ್ತು ಧನುಶ್ರೀ ಕ್ವಾರಂಟೈನ್ ರಹಸ್ಯ?

  |

  ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಆರಂಭಕ್ಕೆ ಕೆಲವು ದಿನಗಳು ಬಾಕಿಯಿದ್ದು, ಯಾರೆಲ್ಲ ದೊಡ್ಮನೆಗೆ ಪ್ರವೇಶ ಮಾಡಬಹುದು ಎಂಬ ಕುತೂಹಲ, ಚರ್ಚೆ ದೊಡ್ಡ ಮಟ್ಟದಲ್ಲಿದೆ. 'ಫಿಲ್ಮಿಬೀಟ್ ಕನ್ನಡ'ಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಈಗಾಗಲೇ ಎಲ್ಲ ಸ್ಪರ್ಧಿಗಳು ಹಾಗೂ ಶೋ ಸಿಬ್ಬಂದಿಗಳು ಬೆಂಗಳೂರಿನ ನಾನಾ ಪಂಚತಾರಾ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ. ಇವತ್ತು ಅವರುಗಳಿಗೆ ಎರಡನೇ ಬಾರಿ ಕೊರೊನಾ ಪರೀಕ್ಷೆ ನಡೆಯಲಿದೆ.

  ಕೊರೊನಾ ಪ್ರೋಟೋಕಾಲ್ ಪ್ರಕಾರ, ಬಿಗ್ ಬಾಸ್ ಮನೆ ಪ್ರವೇಶಕ್ಕೂ ಮುನ್ನ ಸ್ಪರ್ಧಿಗಳನ್ನು ಕ್ವಾರಂಟೈನ್ ಮಾಡುವುದು ಹಾಗೂ ಕೊರೊನಾ ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯವಾಗಿದೆ.

  ದೊಡ್ಮನೆ ಅಂಗಳದಲ್ಲಿ ಕೇಳುತ್ತಿದೆ 'ನೆನಪಿರಲಿ' ಪ್ರೇಮ್ ಹೆಸರು?

  ಸ್ಪರ್ಧಿಗಳು ಯಾರ್ ಯಾರು, ಯಾವ ಸ್ಥಳದಲ್ಲಿ ಕ್ವಾರಂಟೈನ್ ಆಗಿದ್ದಾರೆ ಎನ್ನುವುದು ಸದ್ಯಕ್ಕೆ ಗೌಪ್ಯವಾಗಿದೆ. ಆದರೆ, ಕ್ವಾರಂಟೈನ್‌ನಲ್ಲಿ ಇರುವವರು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಇದೇ ಕೆಲವರ ಇರುವಿಕೆ ಮತ್ತು ಬಿಗ್‌ ಬಾಸ್‌ ಮನೆಗೆ ಕಾಲಿಡುವ ಸಂಭಾವ್ಯತೆಗಳ ಕುರಿತಾದ ರಹಸ್ಯ ಹೊರಬೀಳಲು ಕಾರಣವಾಗಿದೆ.

  ವಾಹಿನಿ ಕಡೆಯಿಂದ ಸ್ಪರ್ಧಿಗಳಿಗೆ ನೀಡಲಾಗಿರುವ 'ಬಿಗ್ ಬಾಸ್ ಕಿಟ್' ಬಿಗ್‌ಬಾಸ್‌ ಮನೆಗೆ ಹೋಗಲಿರುವ ಸ್ಪರ್ಧಿಯೊಬ್ಬರ ಕುರಿತು ಮಾಹಿತಿ ನೀಡಿದೆ, ಅದನ್ನು ಹೇಳುವುದಕ್ಕಾಗಿ ಇಷ್ಟೆಲ್ಲಾ ಪೀಠಿಕೆ...ಮುಂದೆ ಓದಿ..

  ಫೆಬ್ರವರಿ 28ರಿಂದ ಬಿಗ್ ಬಾಸ್ ಕನ್ನಡ ಶುಭಾರಂಭ: ಈ ಸಲ ಎಷ್ಟು ದಿನ?

   ಬಿಗ್ ಬಾಸ್‌ಗೆ ಧನುಶ್ರೀ ಎಂಟ್ರಿ?

  ಬಿಗ್ ಬಾಸ್‌ಗೆ ಧನುಶ್ರೀ ಎಂಟ್ರಿ?

  ಟಿಕ್‌ಟಾಕ್ ಮೂಲಕ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಧನುಶ್ರೀ ಈ ಸಲ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರೆ ಎಂಬ ವಿಚಾರ ಬಯಲಾಗಿದೆ. ಧನುಶ್ರೀ ಈಗಾಗಲೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಕ್ವಾರಂಟೈನ್ ಸಮಯದಲ್ಲಿ ಧನುಶ್ರೀ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ 'ಬಿಗ್ ಬಾಸ್ ಕಿಟ್' ಕಣ್ಣಿಗೆ ಬಿದ್ದಿದೆ. ಅಲ್ಲಿಗೆ ಧನುಶ್ರೀ ಬಿಗ್‌ ಬಾಸ್‌ ಆಯೋಜಕರು ನೀಡಿರುವ ಹೋಟೆಲ್‌ ಕೋಣೆಯಲ್ಲಿ ಕ್ವಾರಂಟೈನ್‌ನಲ್ಲಿ ಇರುವುದು ಬಹುತೇಕ ಖಚಿತವಾಗಿದೆ.

   ಯಾರು ಈ ಗ್ಲಾಮರ್ ಬೊಂಬೆ?

  ಯಾರು ಈ ಗ್ಲಾಮರ್ ಬೊಂಬೆ?

  ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫೇಮಸ್ ಆಗಿರುವ ಧನುಶ್ರೀ ಟಿಕ್ ಟಾಕ್ ಫಾಲೋವರ್ಸ್ ಪಾಲಿಗೆ ದೇವತೆ, ಏಂಜಲ್ ಎನಿಸಿಕೊಂಡಿದ್ದಾರೆ. ಧನುಶ್ರೀ ಅವರ ಪ್ರತಿಯೊಂದು ಟಿಕ್ ಟಾಕ್ ವಿಡಿಯೋ ಸಹ ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿದೆ. ಬಿಗ್ ಬಾಸ್ ಮನೆಗೆ ಗ್ಲಾಮರ್ ಹೆಚ್ಚಿಸುವ ಉದ್ದೇಶದಿಂದಲೇ ಕೆಲವರನ್ನು ಆಯ್ಕೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಈ ಸಲ ಬಿಗ್ ಮನೆಗೆ ಧನುಶ್ರೀ 'ಗ್ಲಾಮರ್ ಕ್ವೀನ್' ಆದರೂ ಅಚ್ಚರಿ ಇಲ್ಲ.

   1.2 ಮಿಲಿಯನ್ ಫಾಲೋವರ್ಸ್

  1.2 ಮಿಲಿಯನ್ ಫಾಲೋವರ್ಸ್

  ಧನುಶ್ರೀ ಭಾರತೀಯ ಟಿಕ್‌ಟಾಕ್ ಸ್ಟಾರ್. ಡ್ಯಾನ್ಸರ್ ಸಹ ಹೌದು. ಸಣ್ಣ ಸಣ್ಣ ವಿಡಿಯೋ ತುಣುಕುಗಳು ಹಾಗೂ ಟಿಕ್‌ಟಾಕ್ ವಿಡಿಯೋ ಮೂಲಕ ಸಂಚಲನ ಸೃಷ್ಟಿಸಿರುವ ಪ್ರತಿಭೆ. ಟಿಕ್‌ಟಾಕ್‌ನಲ್ಲಿ 1.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ವಿಶೇಷ ಅಂದ್ರೆ ಟಿಕ್‌ಟಾಕ್‌ನಲ್ಲಿ 26.4 ಮಿಲಿಯನ್ ಲೈಕ್ಸ್ ಹೊಂದಿದ್ದರು.

   ಹಾಸನ ಮೂಲದ ಹುಡುಗಿ?

  ಹಾಸನ ಮೂಲದ ಹುಡುಗಿ?

  ಧನುಶ್ರೀ ಮೂಲತಃ ಹಾಸನ ಜಿಲ್ಲೆಯವರು ಎಂದು ಹೇಳಲಾಗಿದೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 20 ವರ್ಷದ ಧನುಶ್ರೀ ಮಂಗಳೂರಿನಲ್ಲಿ ಶಿಕ್ಷಣ ಪಡೆದುಕೊಂಡಿದ್ದರು. 5.4 ಅಡಿ ಎತ್ತರವಿದ್ದು, ಒಬ್ಬ ಸಹೋದರ ಇದ್ದಾರೆ.

   ಬಿಗ್‌ ಮನೆಯಲ್ಲಿ ಟಿಕ್‌ಟಾಕ್ ಸ್ಟಾರ್‌?

  ಬಿಗ್‌ ಮನೆಯಲ್ಲಿ ಟಿಕ್‌ಟಾಕ್ ಸ್ಟಾರ್‌?

  ಮೊದಲಿನಿಂದಲೂ ಟಿಕ್‌ಟಾಕ್ ಸ್ಟಾರ್‌ಗಳು ಬಿಗ್ ಬಾಸ್‌ಗೆ ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲು ರಘು, ಬಿಂದು ಗೌಡ, ಸೋನು ಗೌಡ ಅಂತಹ ಟಿಕ್‌ಟಾಕ್ ಪ್ರತಿಭೆಗಳ ಹೆಸರು ಚರ್ಚೆಯಲ್ಲಿತ್ತು. ಆದ್ರೀಗ, ಸರ್ಪ್ರೈಸ್ ಎಂಬಂತೆ ಧನುಶ್ರೀ ಪಾಲಿಗೆ ಅದೃಷ್ಟದ ಅರಸಿ ಬಂದಿದೆ. ಇನ್ನು ಭಾನುವಾರ ಸಂಜೆ 6 ಗಂಟೆಗೆ ಶೋ ಆರಂಭವಾಗಲಿದ್ದು, ಬಿಗ್ ಬಾಸ್ ಕಿಟ್ ಜೊತೆಗೆ ಧನುಶ್ರೀ ದೊಡ್ಮನೆಗೆ ಕಾಲಿಡಲಿದ್ದಾರೆ.

  English summary
  Tiktok star Dhanushree to enter Bigg Boss Kannada season 8, already quarantined in hotel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X