Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೋಗಿ ಬಾ ಜಾನಕಿ: 'ಮಗಳು ಜಾನಕಿ'ಗೆ ಭಾವುಕ ವಿದಾಯ ಹೇಳಿದ ಟಿಎನ್ ಸೀತಾರಾಮ್
ಕಿರುತೆರೆ ಪ್ರಿಯರ ನೆಚ್ಚಿನ ಧಾರಾವಾಹಿ 'ಮಗಳು ಜಾನಕಿ'ಯ ಪ್ರಸಾರ ಶುಕ್ರವಾರ (ಜೂನ್ 12) ಕೊನೆಯಾಗುತ್ತಿದೆ. ಟಿ.ಎನ್. ಸೀತಾರಾಮ್ ನಿರ್ದೇಶನದ ಈ ಧಾರಾವಾಹಿಯನ್ನು ವೀಕ್ಷಕರು ತಮ್ಮದೇ ಮನೆಯ ಕಥೆಯೆಂಬಂತೆ ನೋಡಿದ್ದರು. ಕೌಟುಂಬಿಕ ಕಲಹದ ಧಾರಾವಾಹಿಗಳ ನಡುವೆ ಮಧ್ಯಮ ವರ್ಗದ ಕುಟುಂಬದ ಕಥೆಯುಳ್ಳ 'ಮಗಳು ಜಾನಕಿ' ಜನರಿಗೆ ಹೆಚ್ಚು ಆಪ್ತವಾಗಿತ್ತು.
Recommended Video
'ಮಗಳು ಜಾನಕಿ' ಪ್ರಸಾರವಾಗುತ್ತಿರುವ ಖಾಸಗಿ ವಾಹಿನಿ ನಷ್ಟದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ. ಇಲ್ಲಿ ಹೊಸ ಕಾರ್ಯಕ್ರಮಗಳು ಕೂಡ ಪ್ರಸಾರವಾಗುತ್ತಿರಲಿಲ್ಲ. ಲಾಕ್ ಡೌನ್ ಅವಧಿ ಮುಗಿಯುವ ಮೊದಲೇ 'ಮಗಳು ಜಾನಕಿ'ಯ ಅಂತ್ಯ ಬಹಿರಂಗವಾಗಿತ್ತು. ಮೊದಲೇ ಚಿತ್ರೀಕರಣ ನಡೆಸಿದ್ದ ಕಂತುಗಳ ಪ್ರಸಾರ ಪೂರ್ಣಗೊಂಡಿದ್ದು, ಮಗಳು ಜಾನಕಿ ಅಕಾಲಿಕ ಅಂತ್ಯಗೊಳ್ಳುತ್ತಿದೆ. ಮುಂದೆ ಓದಿ...

ಕೊನೆಯ ಕಂತು ಪ್ರಸಾರ
'ಮಗಳು ಜಾನಕಿ'ಯ ಕೊನೆಯ ಕಂತು ಶುಕ್ರವಾರ ಪ್ರಸಾರವಾಗಲಿದ್ದು, ಅದನ್ನು ನಿರ್ದೇಶಕ ಟಿಎನ್ ಸೀತಾರಾಮ್ ಅತ್ಯಂತ ಭಾವುಕರಾಗಿ ಒಂದೇ ಸಾಲಿನಲ್ಲಿ ತಿಳಿಸಿದ್ದಾರೆ. ಅವರ ಪದಗಳೇ ಅದರ ಹಿಂದಿನ ನೋವನ್ನು ಹೇಳುತ್ತಿರುವಂತಿದೆ.
'ಮಗಳು
ಜಾನಕಿ'
ಧಾರಾವಾಹಿ
ಅಂತ್ಯಕ್ಕೆ
ಕಾರಣವೇನು?:
ಟಿಎನ್
ಸೀತಾರಾಮ್
ನೀಡಿದ
ಸ್ಪಷ್ಟನೆ

ಹೋಗಿ ಬಾ ಜಾನಕಿ
ತಮ್ಮ ಆಪ್ತರಾದವರಿಗೆ ಅಂತಿಮ ವಿದಾಯ ಹೇಳುವಂತೆ ಸೀತಾರಾಮ್ 'ಮಗಳು ಜಾನಕಿ'ಗೂ ಹೇಳಿದ್ದಾರೆ. 'ಹೋಗಿ ಬಾ ಜಾನಕಿ' ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅವರ ಪೋಸ್ಟ್‌ಗೆ ಕೆಲವೇ ನಿಮಿಷಗಳಲ್ಲಿ ನೂರಾರು ಮಂದಿ ಕಾಮೆಂಟ್ ಮಾಡಿದ್ದು, ತಮ್ಮ ಬೇಸರ ಹಂಚಿಕೊಂಡಿದ್ದಾರೆ.

ಬರಹ ರೂಪದಲ್ಲಿ ಕಥೆ ನೀಡಿ
ಖಾಸಗಿ ವಾಹಿನಿಯ ಇನ್ನೊಂದು ಚಾನೆಲ್‌ನಲ್ಲಿ ಧಾರಾವಾಹಿ ಪ್ರಸಾರ ಮಾಡುತ್ತಾರೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ ವಿವಿಧ ಕಾರಣಗಳಿಂದ ಧಾರಾವಾಹಿಯನ್ನು ಇನ್ನೊಂದು ಚಾನೆಲ್‌ಗೆ ಶಿಫ್ಟ್ ಮಾಡುವಂತಿಲ್ಲ. ಚಾನೆಲ್ ಸ್ಥಗಿತಗೊಳ್ಳುತ್ತಿರುವುದರಿಂದ ಮಗಳು ಧಾರಾವಾಹಿಯನ್ನು ಅರ್ಧದಲ್ಲಿಯೇ ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಹೊಸ ಧಾರಾವಾಹಿ ಪ್ರಾರಂಭಿಸಿ ಈ ಕಥೆಯನ್ನು ಮುಂದುವರಿಸಿ ಎಂದು ಅನೇಕರು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಉಳಿದ ಕಥೆಯನ್ನು ಬರಹದ ರೂಪದಲ್ಲಿಯಾದರೂ ನೀಡಿ ಎಂದು ಮನವಿ ಮಾಡಿದ್ದಾರೆ.
'ಮಗಳು
ಜಾನಕಿ'
ಧಾರಾವಾಹಿ
ಅಕಾಲಿಕ
ಅಂತ್ಯ:
ಸೀತಾರಾಮ್
ಹೇಳುವುದೇನು?

ಹೊಸ ಧಾರಾವಾಹಿ ಮಾಡುತ್ತಾರಾ?
'ಮಗಳು ಜಾನಕಿ'ಯ ಬಗ್ಗೆ ಅಭಿಮಾನ ಹೊಂದಿದ್ದ ಅನೇಕರು ಸೀತಾರಾಮ್ ಅವರಿಗೆ ಮತ್ತೊಂದು ಧಾರಾವಾಹಿ ಆರಂಭಿಸುವಂತೆ ಮನವಿ ಮಾಡುತ್ತಿದ್ದಾರೆ. ಸೀತಾರಾಮ್ ಕೂಡ ಹೊಸ ಧಾರಾವಾಹಿಯ ಬಗ್ಗೆ ಗಮನ ಹರಿಸುವ ಸುಳಿವು ನೀಡಿದ್ದಾರೆ.