»   » ಗೌರಿಬಿದನೂರು ಸೀತಾರಾಮ್ ಹೊಸ ಧಾರಾವಾಹಿ

ಗೌರಿಬಿದನೂರು ಸೀತಾರಾಮ್ ಹೊಸ ಧಾರಾವಾಹಿ

Posted By:
Subscribe to Filmibeat Kannada
TN Seetharam
ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ ನಿರ್ದೇಶಕ ಗೌರಿಬಿದನೂರು ಸೀತಾರಾಮ್ (ಟಿ.ಎನ್.ಸೀತಾರಾಮ್), ಈಗವರು ಮತ್ತೊಂದು ಮೆಗಾ ಧಾರಾವಾಹಿ ಮೂಲಕ ವೀಕ್ಷಕರ ಮುಂದೆ ಬರುತ್ತಿದ್ದಾರೆ. ತಮ್ಮ ಹೊಸ ದೈನಂದಿನ ಧಾರಾವಾಹಿಗೆ 'ಮಹಾ ಪರ್ವ' ಎಂದು ಹೆಸರಿಟ್ಟಿದ್ದಾರೆ.

ಇದೇ ಜೂನ್ 4ನೇ ತಾರೀಖು ಬೆಳಗ್ಗೆ 10 ಗಂಟೆಗೆ ಹೊಸ ಧಾರಾವಾಹಿಯ ಚಿತ್ರೀಕರಣ ಆರಂಭವಾಗಲಿದೆ. ಈಟಿವಿ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಜೂನ್ ತಿಂಗಳಾಂತ್ಯಕ್ಕೆ ರಾತ್ರಿ 9.30ರ ಸ್ಲಾಟ್ ನಲ್ಲಿ ಪ್ರಸಾರವಾಗಲಿದೆ.

ಈ ಹಿಂದೆ ಸೀತಾರಾಮ್ ಅವರು ಮಾಯಾಮೃಗ, ಮನ್ವಂತರ, ಮುಕ್ತ ಹಾಗೂ ಮುಕ್ತ ಮುಕ್ತ ಧಾರಾವಾಹಿಗಳ ಮೂಲಕ ಮನೆಮಾತಾದವರು. ಮಧ್ಯಮವರ್ಗದವರ ನೋವು ನಲಿವುಗಳೇ ಅವರ ಧಾರಾವಾಹಿಗಳ ಕಥಾವಸ್ತು. ಮುಕ್ತ ಮುಕ್ತ ಧಾರಾವಾಹಿಯಂತೂ ನಾಲ್ಕು ವರ್ಷಗಳ ಕಾಲ ಪ್ರಸಾರವಾಗಿದ್ದು ದಾಖಲೆ ಎಂದೇ ಹೇಳಬೇಕು.

"ಇವರು ಲಾಯರ್ ಆಗಿ ಸಂಪಾದನೆ ಮಾಡುವುದಕ್ಕಿಂತಲೂ ಹೆಚ್ಚಾಗಿ ಕೋಟ್ ಹಾಕಿಕೊಂಡೇ ಹೆಸರು, ದುಡ್ಡು ಎರಡನ್ನೂ ಸಂಪಾದನೆ ಮಾಡಿದರು" ಎಂಬ ಡೈಲಾಗ್ ಇತ್ತೀಚೆಗೆ ತೆರೆಕಂಡ ಮಠ ಗುರುಪ್ರಸಾದ್ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಲ್ಲಿ ಬರುತ್ತದೆ. ಈ ಬಾರಿಯೂ ಲಾಯರ್ ಕೋಟ್ ಆಗುತ್ತಿದ್ದಾರಾ ಇಲ್ಲವೇ ಎಂಬ ಮಾಹಿತಿ ಸದ್ಯಕ್ಕಿಲ್ಲ.

ಈ ಧಾರಾವಾಹಿಯ ಮುಖ್ಯಪಾತ್ರದಲ್ಲಿ ಟಿ.ಎನ್.ಸೀತಾರಾಮ್, ಸುಂದರ್ ರಾಜ್, ಶ್ರೀನಿವಾಸ ಪ್ರಭು, ಸುಧಾ ಬೆಳವಾಡಿ, ಸುರೇಂದ್ರ ನಾಥ್, ಜಯಲಕ್ಷ್ಮಿ ಪಾಟೀಲ್, ನಾಗರಾಜ ಮೂರ್ತಿ, ರಶ್ಮಿ ಹರಿಪ್ರಸಾದ್, ಸುಷ್ಮಾ ಭಾರದ್ವಾಜ್, ನರೇಶ್, ಶಶಿಕುಮಾರ್, ಗೌರವ್, ದಿವ್ಯಾ, ಜಯದೇವ್, ವರ್ಷಾ, ಸುನಿಲ್, ರವಿಕಶ್ಯಪ್, ಸುರಭಿ ವಸಿಷ್ಠ, ಶಶಾಂಕ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
After a small break TN Seetharam (Gouribidanur Seetharam) back to small screen with new serial. His new serial titled as 'Maha Parva'. The shooting for the tele serial is slated to be launched on the 04th of June.
Please Wait while comments are loading...