For Quick Alerts
  ALLOW NOTIFICATIONS  
  For Daily Alerts

  ಟಿ.ಎನ್.ಸೀತಾರಾಮ್ ರವರ 'ಮಗಳು ಜಾನಕಿ' ಇಂದಿನಿಂದ ಶುರು

  By Harshitha
  |

  'ಮಾಯಾಮೃಗ', 'ಮನ್ವಂತರ', 'ಮುಕ್ತ', 'ಮುಕ್ತ ಮುಕ್ತ', 'ಮಹಾ ಪರ್ವ'... ಧಾರಾವಾಹಿಗಳು ಯಾರಿಗ್ತಾನೆ ಗೊತ್ತಿಲ್ಲ ಹೇಳಿ.. ಕಿರುತೆರೆ ಲೋಕದಲ್ಲಿ ಬಹು ಜನಪ್ರಿಯ ಧಾರಾವಾಹಿಗಳನ್ನು ನೀಡಿ ತಮ್ಮದೇ ಆದ ವೀಕ್ಷಕರ ವರ್ಗ ಹೊಂದಿರುವ ಟಿ.ಎನ್.ಸೀತಾರಾಮ್ ಇಂದಿನಿಂದ ಮತ್ತೆ ನಿಮ್ಮನೆಗೆ ಬರ್ತಿದ್ದಾರೆ.

  ಹೌದು, ಐದು ವರ್ಷಗಳ ಬಳಿಕ ಕಿರುತೆರೆ ಕಡೆ ಮುಖ ಮಾಡಿದ್ದಾರೆ ಟಿ.ಎನ್.ಸೀತಾರಾಮ್. ಅದು 'ಮಗಳ ಜಾನಕಿ' ಮೂಲಕ.

  'ಕಾಫಿ ತೋಟ' ಸಿನಿಮಾ ಆದ್ಮೇಲೆ ಮತ್ತೆ ಸೀರಿಯಲ್ ಮಾಡಲು ಮುಂದಾದ ಟಿ.ಎನ್.ಸೀತಾರಾಮ್ ರವರಿಗೆ ಹೊಳೆದಿದ್ದು 'ಮಗಳು ಜಾನಕಿ'ಯ ಕಥೆ. 'ಮಗಳು ಜಾನಕಿ' ಧಾರಾವಾಹಿಯಲ್ಲಿಯೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕಾನೂನು ಹೋರಾಟ ನಡೆಸುವ ವಕೀಲನ ಪಾತ್ರಧಾರಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಟಿ.ಎನ್.ಸೀತಾರಾಮ್.

  ಮನ, ಮನೆ ಎಲ್ಲ ಕಡೆ 'ಮಗಳು ಜಾನಕಿ' ಹಾಡಿನ ಇಂಪುಮನ, ಮನೆ ಎಲ್ಲ ಕಡೆ 'ಮಗಳು ಜಾನಕಿ' ಹಾಡಿನ ಇಂಪು

  'ಮಗಳು ಜಾನಕಿ'... ಶೀರ್ಷಿಕೆಯೇ ಹೇಳುವಂತೆ ಇದು ಅಪ್ಪ-ಮಗಳ ಭಾವನಾತ್ಮಕ ಕಥೆ ಹೊಂದಿದೆ. ಅಪ್ಪನಾಗಿ ಟಿ.ಎನ್.ಸೀತಾರಾಮ್ ಕಾಣಿಸಿಕೊಂಡಿದ್ದರೆ, ಮಗಳಾಗಿ ಚಿಕ್ಕಮಗಳೂರಿನ ಹುಡುಗಿ ಗನವಿ ಅಭಿನಯಿಸಿದ್ದಾರೆ. ಉಳಿದಂತೆ ಸುಧಾ ಬೆಳವಾಡಿ, ಮಂಡ್ಯ ರವಿ, ಡಿ.ಸಿ.ಕಿಟ್ಟಿ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ.

  ಈಗಾಗಲೇ 'ಮಗಳು ಜಾನಕಿ' ಧಾರಾವಾಹಿಯ ಶೀರ್ಷಿಕೆ ಗೀತೆ ಜನಪ್ರಿಯವಾಗಿದೆ. ಎಚ್.ಎಸ್.ವೆಂಕಟೇಶ್ ಮೂರ್ತಿ ಬರೆದಿರುವ ಸಾಲುಗಳಿಗೆ ಪ್ರವೀಣ್.ಡಿ.ರಾವ್ ಸಂಗೀತ ಸಂಯೋಜಿಸಿದ್ದಾರೆ. ವಿಜಯಪ್ರಕಾಶ್ ಗಾಯನದಲ್ಲಿ ಮೂಡಿಬಂದಿರುವ 'ಗುರಿಯ ಸೇರಬಹುದೇ ನೀನು ದಾರಿ ಮುಗಿಯದೆ..' ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವ್ಯೂಸ್ ಗಿಟ್ಟಿಸಿದೆ.

  ಅಂದ್ಹಾಗೆ, 'ಮಗಳು ಜಾನಕಿ' ಧಾರಾವಾಹಿ ಇಂದಿನಿಂದ ಶುರುವಾಗಲಿದ್ದು, ಕಲರ್ಸ್ ಸೂಪರ್ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವೆರೆಗೆ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ.

  English summary
  TN Seetharam's 'Magalu Janaki' serial to telecast from Tonight 9.30 pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X