»   » ಡುಬಾಕ್ ಶೋ 'ಬಿಗ್ ಬಾಸ್'! ದೇವ್ರಾಣೆ ನೋಡಲ್ಲ ಅಂತಾವ್ರೆ ವೀಕ್ಷಕರು!

ಡುಬಾಕ್ ಶೋ 'ಬಿಗ್ ಬಾಸ್'! ದೇವ್ರಾಣೆ ನೋಡಲ್ಲ ಅಂತಾವ್ರೆ ವೀಕ್ಷಕರು!

Posted By:
Subscribe to Filmibeat Kannada

'ಬಿಗ್ ಬಾಸ್' ವಿರುದ್ಧ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿರುವುದು ಇದೇ ಮೊದಲೇನಲ್ಲ. ಹುಚ್ಚ ವೆಂಕಟ್ ವಿಚಾರದಲ್ಲಿ, ಡ್ರಾಮಾ ಕ್ವೀನ್ ಕೃತಿಕಾ ಔಟ್ ಆಗದೆ ಸೇಫ್ ಆಗಿದ್ದಾಗ, ಕಾಮಿಡಿ ನಟ ಮಿತ್ರ ಹೊರಬಿದ್ದಾಗ ವೀಕ್ಷಕರು ಕಲರ್ಸ್ ಕನ್ನಡ ವಾಹಿನಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದಂಗೆ ಎದ್ದಿದ್ರು.

ಈಗ ಅದು ಮತ್ತೆ ರಿಪೀಟ್ ಆಗಿದೆ. ಅದಕ್ಕೆ ಕಾರಣ ಹಳ್ಳಿ ಹೈದ ಸುನಾಮಿ ಕಿಟ್ಟಿ!

ಹೌದು, 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಸುನಾಮಿ ಕಿಟ್ಟಿ ಮತ್ತು ಗೌತಮಿ ಗೌಡ ಔಟ್ ಆಗಿದ್ದಾರೆ. ಗೌತಮಿ ಹೊರಬಿದ್ದಿರುವ ಬಗ್ಗೆ ವೀಕ್ಷಕರಿಗೆ ಸಂತಸ ಇದೆ. ಆದ್ರೆ, ಅದೇ ಸಂತಸ ಸುನಾಮಿ ಕಿಟ್ಟಿ ವಿಷಯದಲ್ಲಿಲ್ಲ.! ['ಬಿಗ್ ಬಾಸ್'ಗೆ ಸುನಾಮಿ ಕಿಟ್ಟಿ ಇಟ್ಟ ಬೇಡಿಕೆ ಏನು?]

'ಬಿಗ್ ಬಾಸ್' ಮನೆಯಲ್ಲಿ ಏಳು ಬಾರಿ ಎಲಿಮಿನೇಷನ್ ನಿಂದ ಬಚಾವ್ ಆಗಿದ್ದ ಕಿಟ್ಟಿ ಫಿನಾಲೆ ತಲುಪುವುದು ಗ್ಯಾರೆಂಟಿ ಅಂತ ಅನೇಕರು ಲೆಕ್ಕಾಚಾರ ಹಾಕಿದ್ದರು. ಎಲ್ಲರ ಲೆಕ್ಕಾಚಾರ ತಲೆಕೆಳಗೆ ಆಗಿದ್ದು ಮೊನ್ನೆ ಪ್ರಸಾರವಾದ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ.

ಮೊದಲೇ ಮನೆಯ ಎಲ್ಲಾ ಸದಸ್ಯರನ್ನ ನೇರವಾಗಿ ನಾಮಿನೇಟ್ ಮಾಡಿ 'ಬಿಗ್ ಬಾಸ್' ಶಾಕ್ ನೀಡಿದ್ರು. ಅದರೊಂದಿಗೆ ಎರಡು ಎಲಿಮಿನೇಷನ್ ಅಂತ ಸುದೀಪ್ ಬ್ರೇಕಿಂಗ್ ನ್ಯೂಸ್ ಕೊಟ್ಟು ಗೌತಮಿ ಜೊತೆಗೆ ಕಿಟ್ಟಿಯನ್ನೂ 'ಬಿಗ್ ಬಾಸ್' ಮನೆಯಿಂದ ಹೊರಗೆ ಕರೆದದ್ದು 'ಬಿಗ್ ಬಾಸ್' ವೀಕ್ಷಕರಿಗೆ ಬೇಸರವಾಗಿದೆ. ['ಬಿಗ್ ಬಾಸ್' ನಿರ್ಣಯದಿಂದ ಮತ್ತೆ ವೀಕ್ಷಕರು ಬೇಸರ]

''ದೇವ್ರಾಣೆ ಇನ್ಮುಂದೆ ಡುಬಾಕ್ ಶೋ 'ಬಿಗ್ ಬಾಸ್' ನೋಡಲ್ಲ'' ಅಂತ ವೀಕ್ಷಕರು ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಓದಿ....

ಫೇಕ್ ಶೋ..!

'ಬಿಗ್ ಬಾಸ್-3' ಕಾರ್ಯಕ್ರಮದ ವಿರುದ್ಧ ವೀಕ್ಷಕರಿಗೆ ಎಷ್ಟರಮಟ್ಟಿಗೆ ಸಿಟ್ಟು ಇದೆ ಅನ್ನೋದಕ್ಕೆ ಈ ಕಾಮೆಂಟ್ ಗಳೇ ಸಾಕ್ಷಿ. ['ಬಿಗ್ ಬಾಸ್ ಅಲ್ಲ ಫ್ಲಾಪ್ ಬಾಸ್ ಡೌನ್ ಡೌನ್' ಅಂತಾವ್ರೆ ವೀಕ್ಷಕರು!]

ಮಾನ ಮರ್ಯಾದೆ ಇದ್ಯಾ?

ಜನ ನೀಡಿದ ತೀರ್ಪು ಅಂತ್ಹೇಳಿ ಸುನಾಮಿ ಕಿಟ್ಟಿಯನ್ನ ಹೊರಗೆ ಕಳುಹಿಸಿರುವುದು ವೀಕ್ಷಕರಿಗೆ ಬೇಸರವಾಗಿದೆ. [ಗೌತಮಿ ಔಟ್ ಆಗಿದ್ದು ಓಕೆ! ಸುನಾಮಿ ಕಿಟ್ಟಿ ಯಾಕೆ?]

ಅಯ್ಯಪ್ಪಗೆ ಫ್ಯಾನ್ಸ್ ಇದ್ದಾರಾ?

ಕಿಟ್ಟಿಗಿಂತ ಅಯ್ಯಪ್ಪಗೆ ಫ್ಯಾನ್ಸ್ ಹೆಚ್ಚಾಗಿ ಇದ್ದಾರಾ ಅಂತ ವೀಕ್ಷಕರು ಪ್ರಶ್ನೆ ಮಾಡ್ತಿದ್ದಾರೆ.

ಉತ್ತಮ ಯಾರು?

ಕಿಟ್ಟಿಗಿಂತ ಅಯ್ಯಪ್ಪ ಉತ್ತಮ ಸ್ಪರ್ಧಿ ಅಲ್ಲವೇ ಅಲ್ಲ ಅನ್ನೋದು ವೀಕ್ಷಕರ ಅಭಿಪ್ರಾಯ.

ಇನ್ಮುಂದೆ 'ಬಿಗ್ ಬಾಸ್' ನೋಡಲ್ಲ!

ಸುನಾಮಿ ಕಿಟ್ಟಿ ಔಟ್ ಆಗಿರುವುದರಿಂದ ಬೇಸರ ವ್ಯಕ್ತಪಡಿಸಿರುವ ವೀಕ್ಷಕರು ಇನ್ಮುಂದೆ 'ಬಿಗ್ ಬಾಸ್' ಕಾರ್ಯಕ್ರಮ ನೋಡಲ್ಲ ಅಂತ ಹೇಳ್ತಿದ್ದಾರೆ.

ಎಲ್ಲರದ್ದು ಒಂದೇ ಮಾತು!

'ಕಿಟ್ಟಿ ಔಟ್ ಆಗಿದ್ದಾರೆ ಅಂದ್ರೆ ನಂಬೋಕೆ ಅಸಾಧ್ಯ' - ಇಂತಹ ಕಾಮೆಂಟ್ ಗಳೇ ಹೆಚ್ಚಾಗಿವೆ.

ಮಜಾ ಟಾಕೀಸ್ ಉತ್ತಮ!

'ಬಿಗ್ ಬಾಸ್'ಗೆ ಹೋಲಿಸಿದರೆ 'ಮಜಾ ಟಾಕೀಸ್' ಉತ್ತಮ ಶೋ ಅಂತ ಹೇಳುವವರೂ ಇದ್ದಾರೆ.

ನಿರ್ಧಾರ ತಪ್ಪು!

'ಬಿಗ್ ಬಾಸ್' ತೆಗೆದುಕೊಂಡಿರುವ ನಿರ್ಧಾರ ತಪ್ಪು ಎನ್ನುವವರೇ ಹೆಚ್ಚಿನ ಮಂದಿ.

ಕಿಟ್ಟಿನ ವಾಪಸ್ ಕರ್ಸಿ!

ಸುನಾಮಿ ಕಿಟ್ಟಿನ ವಾಪಸ್ ಕರ್ಸಿ ಅಂತ ಕೆಲವರು ಪಟ್ಟು ಹಿಡಿದಿದ್ದಾರೆ.

ವೀಕ್ಷಕರು ಮೂರ್ಖರಲ್ಲ!

''ಏಳು ಬಾರಿ ಸುನಾಮಿ ಕಿಟ್ಟಿಗೆ ವೋಟ್ ಮಾಡಿರುವ ಕನ್ನಡಿಗರು ಈ ಬಾರಿ ಸೇಫ್ ಮಾಡಿಲ್ಲ ಅಂದ್ರೆ ನಂಬೋಕೆ ಆಗಲ್ಲ. ವೀಕ್ಷಕರು ಮೂರ್ಖರಲ್ಲ ಸ್ವಾಮಿ!''

ರೆಹಮಾನ್ ಸೇಫ್ ಆಗಿದ್ದು ಖುಷಿ!

ಟಿವಿ 9 ಆಂಕರ್ ರೆಹಮಾನ್ ಸೇಫ್ ಆಗಿರುವುದು ಕೆಲವರು ಖುಷಿ ಕೊಟ್ಟಿದೆ. [ರೆಹಮಾನ್ ಗೆ ಸುದೀಪ್ ಕೊಟ್ಟ ಶಾಕ್ ಮತ್ತು ಸರ್ ಪ್ರೈಸ್!]

ಎಲ್ಲಾ ಟಿ.ಆರ್.ಪಿಗಾಗಿ

'ಟಿ.ಆರ್.ಪಿ ಗಾಗಿ ಕಿಟ್ಟಿಗೆ ಮೋಸ ಮಾಡಲಾಗಿದೆ' ಅಂತಾವ್ರೆ ವೀಕ್ಷಕರು.

ಫೈನಲ್ ನಲ್ಲಿ ರೆಹಮಾನ್ ಇರ್ಬೇಕು!

ಕಿಟ್ಟಿಯನ್ನ ಹೊರಗಟ್ಟಿದ್ದಾಯ್ತು, ಇನ್ನೂ ಫೈನಲ್ ನಲ್ಲಿ ರೆಹಮಾನ್ ಆದ್ರೂ ಇರ್ಲಿ ಅನ್ನೋದು ಕೆಲವರ ಆಸೆ.

ನಿಮ್ಮ ಅಭಿಪ್ರಾಯ ಏನು?

'ಬಿಗ್ ಬಾಸ್' ಕಾರ್ಯಕ್ರಮದಿಂದ ಸುನಾಮಿ ಕಿಟ್ಟಿ ಔಟ್ ಆಗಿರುವುದು ನಿಮಗೆ ಸರಿ ಅನ್ಸಿದ್ಯಾ? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.....

English summary
Bigg Boss Kannada 3 Viewers are unhappy over the eviction of Tsunami Kitty. Check out the viewers reaction here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada