For Quick Alerts
  ALLOW NOTIFICATIONS  
  For Daily Alerts

  ರಾಧಾ ಮಿಸ್ ಲವ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು.?

  |
  ರಾಧಾ ಮಿಸ್ ಲವ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು.? | Oneindia Kannada

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯನ್ನು ನೀವು ತಪ್ಪದೇ ನೋಡ್ತಿದ್ರೆ, ನಿಮಗೆ ಆರಾಧನಾ ಅಲಿಯಾಸ್ ರಾಧಾ ಮಿಸ್ ಗೊತ್ತೇ ಇರುತ್ತಾರೆ.

  'ರಾಧಾ ರಮಣ' ಧಾರಾವಾಹಿಯ ಹೀರೋಯಿನ್ ಕ್ಯಾರೆಕ್ಟರ್ ರಾಧಾಗೆ ಜೀವ ತುಂಬಿರುವ ನಟಿ ಶ್ವೇತಾ.ಆರ್.ಪ್ರಸಾದ್. ಧಾರಾವಾಹಿಯಲ್ಲಿ ರಮಣ್ ಮುದ್ದಿನ ಮಡದಿ ಆಗಿರುವ ಶ್ವೇತಾ, ನಿಜ ಜೀವನದಲ್ಲಿ ಆರ್.ಜೆ.ಪ್ರದೀಪನ ಪ್ರೀತಿಯ ಪತ್ನಿ.

  ಕಿರುತೆರೆ ಮೇಲೆ ರಾಧಾ-ರಮಣ್ ಲವ್ ಸ್ಟೋರಿ ನೋಡಿರುವ ನಿಮಗೆ ಶ್ವೇತಾ-ಪ್ರದೀಪ ಪ್ರೇಮ್ ಕಹಾನಿ ಗೊತ್ತಿದ್ಯಾ.? ಈ ಇಂಟ್ರೆಸ್ಟಿಂಗ್ ಸ್ಟೋರಿ ಉದಯ ಟಿವಿಯ 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಬಹಿರಂಗವಾಗಲಿದೆ. ಮುಂದೆ ಓದಿರಿ...

  ವಿಶೇಷ ಅತಿಥಿ

  ವಿಶೇಷ ಅತಿಥಿ

  ಉದಯ ಟಿವಿಯಲ್ಲಿ ಪ್ರಸಾರವಾಗುವ ಸೂಪರ್ ಹಿಟ್ ಶೋ 'ತುತ್ತಾ ಮುತ್ತಾ'ದ ಈ ವಾರದ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಕಿರುತೆರೆ ನಟಿ ಶ್ವೇತಾ ಪ್ರಸಾದ್, ಪತಿ ಆರ್.ಜೆ.ಪ್ರದೀಪ ಹಾಗೂ ತಾಯಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

  ಫೋಟೋ ಆಲ್ಬಂ: ಸೂಪರ್ ಸ್ಟೈಲಿಶ್ ಲುಕ್ ನಲ್ಲಿ 'ರಾಧಾ' ಮಿಸ್ಫೋಟೋ ಆಲ್ಬಂ: ಸೂಪರ್ ಸ್ಟೈಲಿಶ್ ಲುಕ್ ನಲ್ಲಿ 'ರಾಧಾ' ಮಿಸ್

  ತಾಯಿ ಮತ್ತು ಪತಿಯೊಂದಿಗೆ ಶ್ವೇತಾ

  ತಾಯಿ ಮತ್ತು ಪತಿಯೊಂದಿಗೆ ಶ್ವೇತಾ

  ಈ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಗಂಡಸರು ತಮಗೆ ತುತ್ತು ನೀಡಿದ ತಾಯಿ ಮತ್ತು ಮುತ್ತು ನೀಡಿದ ಹೆಂಡತಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದರು, ಆದರೆ ಈ ವಾರ ಶ್ವೇತಾ ರವರು ತಮ್ಮ ಪತಿ ಹಾಗು ತಾಯಿಯೊಂದಿಗೆ ಭಾಗವಹಿಸಿದ್ದಾರೆ.

  ಅಂತೂ ಇಂತೂ ರಾಧಾ ರಮಣ್ ಒಂದಾದರು: ಇನ್ಮೇಲಿದೆ ಹೊಸ ತಿರುವು.!ಅಂತೂ ಇಂತೂ ರಾಧಾ ರಮಣ್ ಒಂದಾದರು: ಇನ್ಮೇಲಿದೆ ಹೊಸ ತಿರುವು.!

  ಶ್ವೇತಾ-ಪ್ರದೀಪ ಲವ್ ಸ್ಟೋರಿ

  ಶ್ವೇತಾ-ಪ್ರದೀಪ ಲವ್ ಸ್ಟೋರಿ

  ಶ್ವೇತಾರವರು ಸಣ್ಣ ಪರದೆಯಲ್ಲಿ ಎಲ್ಲರ ಮನೆ ಮಾತಾಗಿದ್ದರೇ, ಪ್ರತಿ ಮನೆಯ ಮೂಲೆಗೂ ತಮ್ಮ ಧ್ವನಿಯಿಂದ ಜನಪ್ರಿಯತೆ ಪಡೆದವರು ಆರ್.ಜೆ.ಪ್ರದೀಪ. ಇವರಿಬ್ಬರ ಗೆಳೆತನ ಪ್ರೀತಿಗೆ ಹೇಗೆ ಬದಲಾಯಿತೆಂದು ಕಾರ್ಯಕ್ರಮದಲ್ಲಿ ಹೇಳಿಕೊಂಡರು.

  ಅಂತೂ ರಾಧಾ ಮಿಸ್ ಗೆ ಒಂದು ಸತ್ಯ ಗೊತ್ತಾಯಿತು.!ಅಂತೂ ರಾಧಾ ಮಿಸ್ ಗೆ ಒಂದು ಸತ್ಯ ಗೊತ್ತಾಯಿತು.!

  ಶ್ವೇತಾ ಹೇಳಿದ್ದೇನು.?

  ಶ್ವೇತಾ ಹೇಳಿದ್ದೇನು.?

  ''ಕಾಲೇಜಿನಲ್ಲಿ ಸ್ನೇಹಿತರಾಗಿದ್ದೇವು. ಅವನೇ ಮೊದಲು ನನ್ನ ಪ್ರೀತಿಸುವುದಾಗಿ ಹೇಳಿಕೊಂಡ. ಒಂದು ಸಂಜೆ ನಾವು ಮಳೆಯಲ್ಲಿ ನಡೆದ ಹೋಗುತ್ತಿದ್ದಾಗ ಆತ ರೇಡಿಯೋದಲ್ಲಿ ನನಗಾಗಿ ಒಂದು ಹಾಡನ್ನು ಅರ್ಪಿಸಿ ತನ್ನ ಭಾವನೆಗಳನ್ನು ಹಂಚಿಕೊಂಡ. ನಾನು ಅದಕ್ಕೆ ಗಮನ ನೀಡಲಿಲ್ಲ. ಯಾವಾಗ ಅವನು ನನಗೂ ತಿಳಿಸದೇ ನಮ್ಮ ಮನೆಗೆ ಹೋಗಿ, ನನ್ನ ತಾಯಿ ತಂದೆಗೆ ಕೇಳಿಕೊಂಡನೋ, ಅಂದೇ ಅವರ ಪ್ರೀತಿಯ ಅರಿವಾಗಿದ್ದು'' ಎಂದು ಶ್ವೇತಾ ಹಂಚಿಕೊಂಡರು.

  ಅರಿಶಿನ ಶಾಸ್ತ್ರ

  ಅರಿಶಿನ ಶಾಸ್ತ್ರ

  ಪ್ರದೀಪನ ಮನೆಯ ಸಂಪ್ರದಾಯದ ಪ್ರಕಾರ ಅರಿಶಿನ ಶಾಸ್ತ್ರವು ಇಲ್ಲದ ಕಾರಣ. ಅವರ ಮದುವೆಯಲ್ಲಿ ಆ ಶಾಸ್ತ್ರವು ನಡೆಯಲಿಲ್ಲ. ಇದು ಶ್ವೇತಾ ಹಾಗೂ ತನ್ನ ತಾಯಿಗೆ ಮನಸ್ಸಲ್ಲಿಯೇ ಕುಳಿತಿತ್ತು. ಅದನ್ನು 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಹೇಳಿಕೊಂಡರು. ಆಗ 'ತುತ್ತಾ ಮುತ್ತಾ' ತಂಡ ಈ ಸಂಚಿಕೆಯಲ್ಲಿ ಶ್ವೇತಾ ರವರಿಗೆ ಅರಿಶಿನದ ಶಾಸ್ತ್ರವನ್ನು ಏರ್ಪಡಿಸಿ ತಾಯಿ ಮಗಳಿಬ್ಬರನ್ನು ಸಂತೋಷ ಪಡಿಸಿದರು. ಇಂತಹ ಸುಂದರ ದಂಪತಿಯ ಬಗ್ಗೆ ಹೆಚ್ಚು ತಿಳಿಯಲು ಈ ವಾರದ 'ತುತ್ತಾ ಮುತ್ತಾ' ಸಂಚಿಕೆಯನ್ನು ಇದೇ ಶನಿವಾರ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ವೀಕ್ಷಿಸಿ.

  English summary
  TV Actress Shwetha Prasad and RJ Pradeepa have taken part in Tutta Mutta game show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X