»   » ಪರಭಾಷಾ ಸೂಪರ್ ಸ್ಟಾರ್ ಗೆ ಜೂಲು ನಾಯಿ ಕಡಿತ!

ಪರಭಾಷಾ ಸೂಪರ್ ಸ್ಟಾರ್ ಗೆ ಜೂಲು ನಾಯಿ ಕಡಿತ!

Posted By: ಉದಯರವಿ
Subscribe to Filmibeat Kannada

ಇಂದಿನ ಫಾಸ್ಟ್ ಜಮಾನಾದಲ್ಲಿ ಯಾವುದು ಸುದ್ದಿ ಯಾವುದು ಸುದ್ದಿ ಅಲ್ಲ ಎಂಬುದನ್ನು ಊಹಿಸುವುದು ಕಷ್ಟ. ಈಗ ಎಲ್ಲವೂ ಬ್ರೇಕಿಂಗ್ ನ್ಯೂಸ್, ಎಲ್ಲ ಟಿವಿ ಚಾನಲ್ ಗಳಲ್ಲಿ ಎಕ್ಸ್ ಕ್ಲೂಸೀವ್ ಸುದ್ದಿಗಳದ್ದೇ ಕಾರುಬಾರು. ಇದನ್ನೇ ಆಧಾರವಾಗಿಟ್ಟುಕೊಂಡು ಸಾಫ್ಟ್ ವೇರ್ ಹುಡುಗರು ಒಂದು ಕಿರುಚಿತ್ರ ತಯಾರಿಸಿದ್ದಾರೆ.

ಇದನ್ನು ಯೂಟ್ಯೂಬ್ ನಲ್ಲೂ ಬಿಡುಗಡೆ ಮಾಡಿ ಎಲ್ಲರನ್ನೂ ನಕ್ಕು ನಲಿಸುತ್ತಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳಲ್ಲಿ ಇಂದು ಕನ್ನಡ ಚಲನಚಿತ್ರ ಸುದ್ದಿಗಳಿಗೆ ಅಷ್ಟಾಗಿ ಪ್ರಾಮುಖ್ಯತೆ ಸಿಗುತ್ತಿಲ್ಲ. ಇದನ್ನೇ ಅವರು ವ್ಯಂಗ್ಯವಾಗಿ ಚಿತ್ರೀಕರಿಸಿ ತಮ್ಮ ಕಿರುಚಿತ್ರದಲ್ಲಿ ಇಂದಿನ ಸುದ್ದಿ ವಾಹಿನಿಗಳನ್ನು ಅಣಕಿಸಿದ್ದಾರೆ. [ಯೂಟ್ಯೂಬಲ್ಲಿ ಹೊಸ ಅಲೆ ಎಬ್ಬಿಸಿದ ಇನ್ಫಿ ಹುಡುಗ್ರು]

TV69-Kannada News spoof -Kannada short Movie

'ಟಿವಿ 69' ಎಂಬ ಕಾಲ್ಪನಿಕ ವಾಹಿನಿಯೊಂದರ ಹೆಸರಿನಲ್ಲಿ ಇಂದಿನ ಸುದ್ದಿ ವಾಹಿನಿಗಳನ್ನು ಅಣಕಿಸುವ ಪ್ರಯತ್ನವನ್ನು ಈ ತಂಡ ಮಾಡಿದೆ. ಕಳಪೆ ಮಟ್ಟದ ಕಾರ್ಯಕ್ರಮ ನೀಡುವ ಕನ್ನಡ ನ್ಯೂಸ್ ಚಾನೆಲ್ ಗಳನ್ನು ಅಣಕಿಸಲಾಗಿದೆ.

ಕಿರುತೆರೆಯಲ್ಲಿ ಇಂದು ಮೂಡಿಬರುತ್ತಿರುವ ಚರ್ಚೆ, ವಾದ ವಿವಾದಗಳ ಹೂರಣವೇ ಈ ಕಿರುಚಿತ್ರ. ತಾರಾಗಣದಲ್ಲಿ ಶ್ರವಣ್ ,ಸಂದೀಪ್ ,ರಜಥ್ , ಓಂಕಾರ್ ಇದ್ದು ಜಗದೀಶ್ ಸಂಕಲನ ಜವಬ್ದಾರಿ ಹಾಗು ರಾಜಾರಾಮ್ ರಾಮಮೂರ್ತಿ ಸಂಗೀತ ದ ಜವಬ್ದಾರಿ ಹೊಂದಿದ್ದಾರೆ. ನೋಡಿ ನಕ್ಕು ಬಿಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

English summary
Presenting you the Tv69 Kannada news spoof.This video ridicules some Kannada news channel which are not giving importance to Kannada movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada