»   » ಟ್ವಿಟ್ಟರ್ ನಲ್ಲಿ ಸೂಪರ್ ಸ್ಟಾರ್ ಆದ 'ಬಿಗ್ ಬಾಸ್' ವಿನ್ನರ್ ಪ್ರಥಮ್

ಟ್ವಿಟ್ಟರ್ ನಲ್ಲಿ ಸೂಪರ್ ಸ್ಟಾರ್ ಆದ 'ಬಿಗ್ ಬಾಸ್' ವಿನ್ನರ್ ಪ್ರಥಮ್

Posted By:
Subscribe to Filmibeat Kannada

ಕನ್ನಡದ ಕಿರುತೆರೆಯಲ್ಲಿನ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ-4' ಮುಕ್ತಾಯಗೊಂಡಿದೆ. ಕನ್ನಡಿಗರ ಆಶಯದಂತೆ 'ಒಳ್ಳೆ ಹುಡುಗ' ಪ್ರಥಮ್ ವಿಜೇತರಾಗಿ ಹೊರಹೊಮ್ಮಿದ್ದಾರೆ.['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

'ಬಿಗ್ ಬಾಸ್ ಕನ್ನಡ-4' ವಿನ್ನರ್ ಪ್ರಥಮ್'' ಎಂದು ಕಿಚ್ಚ ಸುದೀಪ್ ಅನೌನ್ಸ್ ಮಾಡ್ತಿದ್ದಂತೆ, ''ಇದು ನನ್ನ ಗೆಲುವಲ್ಲ, ಕನ್ನಡಿಗರ ಗೆಲುವು'' ಅಂತ ಸ್ಟೇಜ್ ತುಂಬಾ ಕುಣಿದಾಡಿ ಪ್ರಥಮ್ ಸಂಭ್ರಮಿಸಿದರು. ಹಾಗೆ ಆನ್‌ಲೈನ್‌ ನಲ್ಲಿ ನಡೆದ ''ಬಿಗ್ ಬಾಸ್ ಕನ್ನಡ-4' ವಿನ್ನರ್ ಯಾರಾಗಬೇಕು ಎಂಬ ಪೋಲ್‌ ಗೆ ಪ್ರಥಮ್ ಎಂದು ಪ್ರತಿಕ್ರಿಯಿಸಿದ ಪ್ರತಿಯೊಬ್ಬರೂ ಸಹ ಪ್ರಥಮ್‌ ನಷ್ಟೇ ಖುಷಿಪಟ್ಟರು.['ಬಿಗ್ ಬಾಸ್' ರನ್ನರ್ ಕೀರ್ತಿಗೆ 10ಲಕ್ಷ ಕೊಟ್ಟ ಕಿಚ್ಚ ಸುದೀಪ್!]

ಅಂದಹಾಗೆ 'ಬಿಗ್ ಬಾಸ್ ಕನ್ನಡ-4' ನ ವಿನ್ನರ್ ರೇಖಾ ಅವರು ಆಗಬೇಕಿತ್ತು, ಕೀರ್ತಿ ಅವರು ಆಗಬೇಕಿತ್ತು ಅಂತಲೂ ಎಷ್ಟೋ ಜನರು ಅಂದುಕೊಂಡಿದ್ದರು. ಅವರಿಗೆಲ್ಲಾ ನಿರಾಸೆ ಆಗಿರುವುದು ಖಂಡಿತ. ಈಗ 'ಒಳ್ಳೆ ಹುಡುಗ' ಪ್ರಥಮ್ 'ಬಿಗ್ ಬಾಸ್ ಕನ್ನಡ-4' ನ ವಿನ್ನರ್ ಆಗಿರುವುದಕ್ಕೆ ಟ್ವಿಟರ್ ನಲ್ಲಿ ಹಲವರು ಹಲವು ರೀತಿ ರೆಸ್ಪಾನ್ಸ್ ಮಾಡಿದ್ದಾರೆ. ಪ್ರಥಮ್ ಗೆಲುವಿಗೆ ಜನರು ಏನು ಹೇಳಿದ್ರು ನೋಡೋಣ ಬನ್ನಿ.

ಪ್ರಥಮ್ ಎಲ್ಲರಿಗಿಂತ ಹೆಚ್ಚು ಆಕ್ಟಿವ್ ಆಗಿದ್ರಾ?

' 'ಬಿಗ್ ಬಾಸ್ ಕನ್ನಡ-4' ವಿನ್ನರ್ ಪ್ರಥಮ್ ಅವರು ಉತ್ತಮ ಎಂಟರ್ ಟೈನರ್ ಆಗಿದ್ದರು ಎಂಬುದು ನನ್ನ ಅಭಿಪ್ರಾಯ. ಆದ್ರೆ ಅವರು ಎಲ್ಲಾ ಸದಸ್ಯರಿಗಿಂತ ಹೆಚ್ಚು ಆಕ್ಟಿವ್ ಆಗಿದ್ರಾ? ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ' ಎಂದು ನಟಿ ಸಂಜನಾ ಗಲ್ರಾನಿ ಟ್ವೀಟ್ ಮಾಡಿದ್ದಾರೆ.

ರಿಯಲ್ ಹ್ಯೂಮನ್ ಬೀಯಿಂಗ್

'ಅಭಿನಂದನೆಗಳು ಪ್ರಥಮ್, ಲವ್ ಯು, ನೀವು ರಿಯಲ್ ಹ್ಯೂಮನ್ ಬೀಯಿಂಗ್. ಕನ್ನಡಿಗರ ಆಶೀರ್ವಾದ, ಪ್ರೀತಿ, ಮತ್ತು ಸಹಕಾರ ನಿಮಗೆ ಇದ್ದೇ ಇರುತ್ತದೆ'.

ಪ್ರಥಮ್ ಎಲ್ಲರಿಗಿಂತ ವಿಭಿನ್ನ

'#Winner ಪ್ರಥಮ್, ನೀವು ಎಲ್ಲರಿಗಿಂತ ವಿಭಿನ್ನ. ಅದೇ ನಿಮಗೆ ಈಗ ಗೆಲುವನ್ನೂ ತಂದುಕೊಟ್ಟಿದೆ. ಆಲ್ ದ ಬೆಸ್ಟ್'.

ಪ್ರಥಮ್ ನಿಜವಾದ ವಿಜೇತ

ಪ್ರಥಮ್ ಅವರು ಟ್ವಿಟರ್ ಟ್ರೆಂಡಿಂಗ್ ನಲ್ಲಿ 9ನೇ ಸ್ಥಾನದಲ್ಲಿದ್ದು, ಹೃತಿಕ್ ರೋಷನ್ ಮತ್ತು ಸಲ್ಮಾನ್ ಖಾನ್ 5 ನೇ ಸ್ಥಾನದಲ್ಲಿದ್ದಾರೆ.

50 ಲಕ್ಷ ದಾನ ಮಾಡೋಕೆ ಯಾರಿಗೆ ಸಾಧ್ಯ?

'ಬಹುಮಾನವಾಗಿ ಬಂದ 50 ಲಕ್ಷ ದಾನ ಮಾಡೋಕೆ ಪ್ರಥಮ್ ಗೆ ಮಾತ್ರ ಸಾಧ್ಯ. ಹ್ಯಾಟ್ಸ್ ಆಫ್ ಡಿಯರ್'.

ನಿಜವಾಗಲು ಪ್ರಥಮ್ ಪ್ರಥಮ

ಪ್ರಥಮ್ ಬಗ್ಗೆ, ಪ್ರಥಮ್ ಗೆಲುವಿನ ಬಗ್ಗೆ, ಅವರ ಒಳ್ಳೆತನದ ಬಗ್ಗೆ ಶ್ರೀಧರ್ ಎಂಬುವವರು ಏನು ಹೇಳಿದ್ರು ಎಂಬುದನ್ನು ಫೋಟೋದಲ್ಲಿ ಓದಿಕೊಳ್ಳಿ.

ವಿನ್ನಿಂಗ್ ಅದ್ಭುತ

14 ವಾರಗಳ ನಾಮಿನೇಷನ್ ಮತ್ತು ಅಂತ್ಯದಲ್ಲಿ ಪ್ರಥಮ್ ವಿಜೇತ ಆಗಿರುವುದು ಅದ್ಭುತ.

ಲಾರ್ಡ್ ಪ್ರಥಮ್ ಸರ್

'ಬಿಗ್ ಬಾಸ್ ಕನ್ನಡ-4' ನ ಎಲ್ಲಾ ಸದಸ್ಯರು ಪ್ರಥಮ್ ಅನ್ನು ಹೊರಹಾಕಬೇಕು ಎಂದು ಬಯಸುತ್ತಿದ್ದರು, ಆದರೆ ಪ್ರಥಮ್ ಎಲ್ಲರನ್ನು ಹೊರಹಾಕಿದರು. ಅಭಿನಂದನೆಗಳು ಲಾರ್ಡ್ ಪ್ರಥಮ್ ಸರ್'.

ಮಿತಿ ಮೀರಿ ಸಂತೋಷ ಪಟ್ಟರು ರೇಖಾ

'ಪ್ರಥಮ್ ಗ್ರ್ಯಾಂಡ್ ಫಿನಾಲೆಯಲ್ಲೂ ಸೇವ್ ಆದ ನಂತರ ಬಿಗ್ ಬಾಸ್ ಸ್ಪರ್ಧಿ ರೇಖಾ ಅವರು ಹೆಚ್ಚು ಸಂತೋಷ ಪಟ್ಟರು. ನಮ್ಮ ಗೆಲುವನ್ನು ಆಚರಿಸುವ ಅಂತಹ ಜನರು ಜೀವನದಲ್ಲಿ ಇರಬೇಕು.

ಪ್ರಥಮ್ ಬಗ್ಗೆ ಹೆಮ್ಮೆ

'ಪ್ರಥಮ್ ಅಂದ್ರೆ ಹೆಮ್ಮೆ. BBK4 ಅದ್ಭುತ ಅಂತ್ಯ. ಪ್ರಥಮ್ ಅವರು ವಿಜಯದ ಹೆಸರನ್ನು ಮುಡಿಗೇರಿಸಿಕೊಂಡರು. ಕನ್ನಡಿಗರ ಮೆಸೇಜ್‌ ಗಳು ಕಡೆಗೂ ವೇಸ್ಟ್ ಆಗಲಿಲ್ಲ ಎಂಬುದು ಸಂತೋಷ.

English summary
Colors Kannada Channel's Popular Reality Show Bigg Boss Kannada Season Winner Director Pratham Donated His Entire Prize Money 50 Lakh Rupees to Noble cause. Here is twitter comments on Pratham, for his big boss kannada 4 victory.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada