For Quick Alerts
  ALLOW NOTIFICATIONS  
  For Daily Alerts

  ಅಪ್ಪಾ ಲೂಸ.. ಅಮ್ಮಾ ಲೂಸಾ..ನೀನು ಲೂಸಾ..

  |

  ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ ನಿನಗೆಂದೇ ಬರೆದ ಪ್ರೇಮದ ಓಲೆ.. ಒಲವೇ ಜೀವನ ಸಾಕ್ಷಾತ್ಕಾರ ಒಲವೇ ಮರೆಯದ ಮಮಕಾರ.. ಇದು ಅಂದಕಾಲತ್ತಿಲ್ ಸಾಹಿತ್ಯ. ಅಪ್ಪಾ ಲೂಸ.. ಅಮ್ಮಾ ಲೂಸಾ..ನೀನು ಲೂಸಾ..ನಾನು ಲೂಸಾ., ಅದು ಸರಿ.. ಅದು ಸರಿ..ಇದು ಈಗಿನ ಚಿತ್ರಗಳ ಸಾಹಿತ್ಯ.

  ಅಪ್ಪಾ ಲೂಸ.. ಅಮ್ಮಾ ಲೂಸಾ ಹಾಡು ಎಷ್ಟರ ಮಟ್ಟಿಗೆ ಯಶಸ್ಸು ಕಂಡಿತ್ತು ಅಂದರೆ ಅಪ್ಪ ಅಮ್ಮಾ ಮಕ್ಕಳನ್ನು ಗದರಿಸಿದರೆ, ಮಕ್ಕಳು ಹೆತ್ತವರನ್ನು ದುರುಗುಟ್ಟಿಕೊಂಡು ಈ ಹಾಡನ್ನು ಗುಣುಗುತ್ತಿದ್ದವು. ಲೂಸ್ ಮಾದಾ ಯಾನೆ ಯೋಗೀಶ್ ಅಭಿನಯದ ಧೂಳ್ ಚಿತ್ರ ಇದೇ ಮೊದಲಬಾರಿಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  ಭಾನುವಾರ (ನ 13) ದಂದು ಸಂಜೆ 6ಕ್ಕೆ ಈ ಚಿತ್ರ ಪ್ರಸಾರವಾಗಲಿದೆ. ಖ್ಯಾತ ನಿರ್ದೇಶಕ ಎಮ್.ಎಸ್.ರಾಜಶೇಖರ್ ಅವರ ಪುತ್ರ ಧರಣಿ ಈ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರದ ತಾರಾಬಳಗದಲ್ಲಿ ಯೋಗೀಶ್, ಅಂದ್ರಿತಾ ರೇ, ಪ್ರಕಾಶ್ ರೈ, ಓಂಪ್ರಕಾಶ್‌ರಾವ್ ಮುಂತಾದವರಿದ್ದಾರೆ. ಸರಿಸುಮಾರು ನಾಲ್ಕು ಸುದೀರ್ಘ ವರ್ಷಗಳ ಬಳಿಕ ಪ್ರಕಾಶ್ ರೈ (ಪ್ರಕಾಶ್ ರಾಜ್) ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೆ ಪಾದಾರ್ಪಣೆ ಮಾಡಿದ್ದರು.

  ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ, ಕೆ.ದತ್ತು ಛಾಯಾಗ್ರಹಣ, ಕೆ.ರಾಮ್‌ನಾರಾಯಣ್ ಸಂಭಾಷಣೆ, ಮೋಹನ್ ಪಂಡಿತ್ ಕಲೆ ಹಾಗೂ ರವಿವರ್ಮ ಅವರ ಸಾಹಸವಿದೆ. ತಮಿಳಿನ ತಿರುವಿಲೆಯಾದಲ್ ಆರಂಭಂ ಚಿತ್ರದ ರಿಮೇಕ್ ಚಿತ್ರ ಇದಾಗಿದ್ದು ಬಾಕ್ಷ್ ಆಫಿಸ್ ನಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ.

  English summary
  Kannada movie Dhool telecasting first time in Udaya TV on Sunday 13th Nov, 2011.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X