twitter
    For Quick Alerts
    ALLOW NOTIFICATIONS  
    For Daily Alerts

    ನವೆಂಬರ್ ಒಂದರದು ಕೃಷ್ಣದೇವರಾಯ ನೋಡಲು ಮರೆಯದಿರಿ

    |

    Sri Krishna Devaraya
    ಈ ಚಿತ್ರವನ್ನು ನೀವು ನೋಡಿಲ್ಲಾಂದ್ರೆ, ಈ ರಾಜ್ಯೋತ್ಸವ ದಿನದಂದು ( ನ .1) ಒಂದು ಸಲ ನೋಡಿ ಎನ್ನುವುದು ನಮ್ಮದೊಂದು ಸಲಹೆ. ಡಾ.ರಾಜ್ ಅವರ 118 ನೆ ಚಿತ್ರ ಇದಾಗಿದ್ದು, 1970 ರಲ್ಲಿ ಬಿಡುಗಡೆಗೊಂಡ ಈ ಚಿತ್ರ ಯಾವ ರೀತಿ ಯಶಸ್ಸು ಕಂಡಿತ್ತು ಅಂದರೆ ಇಡೀ ದೇಶದ ಕಲಾಪ್ರೇಮಿಗಳು ಒಮ್ಮೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು.

    ಡಾ.ರಾಜ್, ಭಾರತಿ, ಜಯಂತಿ, ಪಂತುಲು, ನರಸಿಂಹರಾಜು ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ಬಿ.ಆರ್ ಪಂತುಲು ನಿರ್ದೇಶಿಸಿದ್ದರು. ಈ ಚಿತ್ರ ಕನ್ನಡಿಗರೆಲ್ಲರೂ ಒಮ್ಮೆ ನೋಡ ಬೇಕೆನ್ನುವ ನಮ್ಮ ಸಲಹೆ ಏನಕ್ಕೆ ಅಂದರೆ ಚಿತ್ರದ ಸಾಹಿತ್ಯ, ಚಿತ್ರಕಥೆ, ಹಾಡುಗಳು ಮತ್ತು ಎಲ್ಲಕ್ಕಿಂತಲೂ ಮಿಗಿಲಾದ ಪರಕಾಯ ಪ್ರವೇಶಿಸಿದ ಅಣ್ಣಾವ್ರ ಅಭಿನಯ.

    ಕ್ಲೈಮ್ಯಾಕ್ಷ್ ನಲ್ಲಿನ ಟ್ರಾಜಿಡಿ ದೃಶ್ಯಗಳು ಎಂಥವರ ಕಣ್ಣಲ್ಲೂ ನೀರುರಿಸುವುದಂತೂ ಖಂಡಿತ. ಕಣಗಾಲ್ ಪ್ರಭಾಕರ್ ಶಾಸ್ತ್ರಿ ಚಿತ್ರಕಥೆ, ಸಂಭಾಷಣೆ ಮತ್ತು ಟಿ ಜಿ ಲಿಂಗಪ್ಪ ಸಂಗೀತದ ಹಾಡುಗಳಾದ ತಿರುಪತಿ ಗಿರಿವಾಸ ಶ್ರೀವೆಂಕಟೇಶ, ಶರಣು ವಿರೂಪಾಕ್ಷ ಮುಂತಾದ ಹಾಡುಗಳು ಇಂದಿಗೂ ಜನಜನನಿತ.

    ಅಲ್ಲದೆ ಅಮೆರಿಕಾದಲ್ಲಿ ಬಿಡುಗಡೆಗೊಂಡ ಕನ್ನಡದ ಮೊದಲ ಚಿತ್ರವೆನ್ನುವ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಉದಯ ಟಿವಿಯಲ್ಲಿ ಬೆಳಗ್ಗೆ ಶ್ರೀಕೃಷ್ಣ ದೇವರಾಯ ಚಿತ್ರ ಮಂಗಳವಾರ (ನ 1) ಬೆಳಗ್ಗೆ 9.30 ಕ್ಕೆ ಪ್ರಸಾರವಾಗಲಿದೆ. ಅಂದು ಮಧ್ಯಾಹ್ನ 2.30ಕ್ಕೆ ಡಾ.ವಿಷ್ಣುವರ್ಧನ್ ಅವರ ಕದಂಬ ಚಿತ್ರ ಕೂಡ ಪ್ರಸಾರವಾಗಲಿದೆ.

    English summary
    Dr. Rajkumar's mighty historical movie Sri Krishna Devaraya telecasting on November 1st in Udaya TV.
    Monday, October 31, 2011, 10:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X