»   » ಆಗಸ್ಟ್ 15ರಂದು ಉದಯ ಟಿವಿ ನೋಡಲು ಮರೆಯದಿರಿ

ಆಗಸ್ಟ್ 15ರಂದು ಉದಯ ಟಿವಿ ನೋಡಲು ಮರೆಯದಿರಿ

Posted By:
Subscribe to Filmibeat Kannada

ಈ ಬಾರಿಯ ಸ್ವಾತಂತ್ರ್ಯೋತ್ಸವ (ಆಗಸ್ಟ್ 15) ನಿರ್ದೇಶಕ ಕಮ್ ನಟ ಉಪೇಂದ್ರ ಅವರಿಗೆ ವಿಶೇಷವಾದದ್ದು. ಅವರ ನಿರ್ದೇಶನದ ಮತ್ತು ಚೊಚ್ಚಲ ನಿರ್ಮಾಣದ ಉಪ್ಪಿ 2 ಚಿತ್ರ ಆಗಸ್ಟ್ ಹದಿನಾಲ್ಕರಂದು ಬಿಡುಗಡೆಯಾಗುತ್ತಿರುವುದು ಒಂದೆಡೆ.

ಇನ್ನೊಂದೆಡೆ ಅವರ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆಲ್ ಟೈಂ ಬ್ಲಾಕ್ ಬಸ್ಟರ್ ಚಿತ್ರ ಓಂ ಪ್ರಪ್ರಥಮ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

1995ರಲ್ಲಿ ತೆರೆಕಂಡ 'ಓಂ' ಚಿತ್ರದ ಟಿವಿ ರೈಟ್ಸನ್ನು ತಮ್ಮದಾಗಿಸಿಕೊಳ್ಳಲು ಹಲವು ವಾಹಿನಿಗಳು ಪ್ರಯತ್ನ ನಡೆಸುತ್ತಲೇ ಇದ್ದವು. ಕೊನೆಗೆ, ಹದಿನೇಳು ವರ್ಷಗಳ ನಂತರ ಚಿತ್ರದ ರೈಟ್ಸ್ ಉದಯ ವಾಹಿನಿಯ ಪಾಲಾಗಿತ್ತು, ಅದೂ ಭಾರೀ ಮೊತ್ತಕ್ಕೆ. (ಓಂ ಚಿತ್ರದ ಟಿವಿ ರೈಟ್ಸ್ ಉದಯ ಟಿವಿಗೆ)

Udaya TV telecasting Om movie on August 15

17 ವರ್ಷಗಳಲ್ಲಿ ಓಂ ಚಿತ್ರ 500ಕ್ಕೂ ಹೆಚ್ಚು ಬಾರಿ ರೀರಿಲೀಸಾಗಿತ್ತು. ಜೊತೆಗೆ, ಇತ್ತೀಚೆಗೆ ಡಿಜಿಟಲೀಕರಣ ಕೊಂಡು ಮತ್ತೆ ಬಿಡುಗಡೆಯಾಗಿತ್ತು. ರಾಜ್ ಹೋಂ ಬ್ಯಾನರಿನಲ್ಲಿ ಮೂಡಿ ಬಂದ ಈ ಚಿತ್ರ ರಿರಿಲೀಸ್ ಆದಾಗಲೆಲ್ಲಾ ಕೋಟಿಗಟ್ಟಲೆ ಹಣವನ್ನು ಬಾಚಿಕೊಳ್ಳುತ್ತಿತ್ತು.

ಹತ್ತು ಕೋಟಿ ಕೊಟ್ಟು ಖರೀದಿಸಲಾಗಿದೆ ಎನ್ನಲಾಗುತ್ತಿರುವ ಓಂ ಚಿತ್ರ ಇದೇ ಆಗಸ್ಟ್ 15ರಂದು ಉದಯ ವಾಹಿನಿಯಲ್ಲಿ ಸಂಜೆ ಏಳು ಗಂಟೆಗೆ ಪ್ರಸಾರವಾಗಲಿದೆ.

ಇದೇ ರೀತಿ 1972ರಲ್ಲಿ ತೆರೆಕಂಡಿದ್ದ ಡಾ. ರಾಜಕುಮಾರ್, ಭಾರತಿ, ವಜ್ರಮುನಿ, ಬಾಲಕೃಷ್ಣ ಮುಂತಾದವರು ಪ್ರಮುಖ ಭೂಮಿಕೆಯಲ್ಲಿದ್ದ ಬಂಗಾರದ ಮನುಷ್ಯ ಚಿತ್ರ ನಲವತ್ತು ವರ್ಷಗಳ ನಂತರ ಕಿರುತೆರೆಯಲ್ಲಿ ಪ್ರಸಾರವಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

English summary
First time in the small screen, Udaya TV telecasting Om movie on August 15.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada