»   »  ಶಂಕರ್ ನಾಗ್ ಮತ್ತು ಉಪೇಂದ್ರ ಒಂದೇ ಕಾರಿನಲ್ಲಿ ಹೋಗುವಾಗ...

ಶಂಕರ್ ನಾಗ್ ಮತ್ತು ಉಪೇಂದ್ರ ಒಂದೇ ಕಾರಿನಲ್ಲಿ ಹೋಗುವಾಗ...

Posted By:
Subscribe to Filmibeat Kannada

ಇಂದು ಶಂಕರ್ ನಾಗ್ ಜನ್ಮದಿನ. ಕನ್ನಡ ಚಿತ್ರರಂಗದ ನಟ, ನಿರ್ದೇಶಕರಿಗೆ ಶಂಕರ್ ನಾಗ್ ಸ್ಫೂರ್ತಿ. ಇಂದಿಗೂ ಅನೇಕರು ಅವರ ರೀತಿಯೇ ಬೆಳೆಯಬೇಕು ಎಂದು ಚಿತ್ರರಂಗಕ್ಕೆ ಬರುತ್ತಾರೆ. ಇವತ್ತಿನ ದೊಡ್ಡ ನಟರು ಶಂಕರ್ ನಾಗ್ ಅವರ ದೊಡ್ಡ ಅಭಿಮಾನಿಗಳಾಗಿದ್ದಾರೆ.

ಅದೇ ರೀತಿ ನಟ ಉಪೇಂದ್ರ ಕೂಡ ಶಂಕರ್ ನಾಗ್ ಅವರ ದೊಡ್ಡ ಫ್ಯಾನ್. ಅನೇಕರು ಉಪೇಂದ್ರ ಅವರನ್ನು ಶಂಕರ್ ನಾಗ್ ಅವರಿಗೆ ಹೋಲಿಸುತ್ತಾರೆ. ಹೀಗಿರುವಾಗ ಉಪೇಂದ್ರ ಮತ್ತು ಶಂಕರ್ ಒಮ್ಮೆ ಒಟ್ಟಿಗೆ ಕಾರ್ ನಲ್ಲಿ ಪ್ರಯಾಣ ಮಾಡಿದ್ದರು. ಆ ವಿಷಯವನ್ನು ಈ ಹಿಂದೆ ಉಪೇಂದ್ರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು. ಮುಂದೆ ಓದಿ...

ಮೊದಲು ನೋಡಿದ್ದು...

''ಸಂಕೇತ್ ಸ್ಟುಡಿಯೋದಲ್ಲಿ ಅವರನ್ನು(ಶಂಕರ್ ನಾಗ್) ಮೊದಲು ನಾನು ಭೇಟಿ ಮಾಡಿದೆ. ಅವರ ದೊಡ್ಡ ಫ್ಯಾನ್ ಆಗಿದ್ದ ನಾನು ಅವರಿಗೆ ಕಥೆ ಹೇಳುವಾಗ ರೋಮಾಂಚನ ಆಯ್ತು'' - ಉಪೇಂದ್ರ, ನಟ

ಸಿಕ್ಕಾಪಟ್ಟೆ ಸ್ಪೀಡ್ ಇದ್ದರು

''ಅವರು ಎಷ್ಟು ಸ್ಪೀಡ್ ಇದ್ದರು ಅಂದರೆ. ಪಟ.. ಪಟ.. ಅಂತ ಎಲ್ಲ ಕೆಲಸ ಮಾಡುತ್ತಿದ್ದರು. ಶೂಟಿಂಗ್ ನಲ್ಲಿಯೂ ಎಲ್ಲವನ್ನು ಸ್ಪೀಡ್ ಆಗಿ ಮಾಡುತ್ತಿದ್ದರು. ಅವರನ್ನು ನೋಡುವುದೇ ಒಂದು ಖುಷಿ. ಅಷ್ಟು ಬಿಜಿ ಆಗಿದ್ದರು'' - ಉಪೇಂದ್ರ, ನಟ

ನಮ್ಮ ಆಫೀಸ್ ನಲ್ಲಿ ಅವರ ಫೋಟೋ ಇದೆ

''ಒಂದು ಸಾರಿ ಶೂಟಿಂಗ್ ನಿಂದ ಮನೆಗೆ ಹೊರಡುವಾಗ 'ಬರ್ತಿನಿ ಉಪೇಂದ್ರ' ಅಂತ ಹೇಳಿ ಹೋದರು. ಆಗ ನನ್ನ ಹೆಸರು ಇವರಿಗೆ ನೆನಪಿದೆ ಅಂತ ತುಂಬ ಖುಷಿ ಆಗಿತ್ತು. ಈಗಲೂ ನಮ್ಮ ಆಫೀಸ್ ನಲ್ಲಿ ಅವರ ಫೋಟೋ ಇವೆ. ನಾನು ಮಲಗುವಾಗ ಅವರ ಫೋಟೋ ನೋಡಿ ಮಲಗಬೇಕು. ಎದ್ದಾಗ ಅವರ ಫೋಟೋ ನೋಡಿ ಏಳಬೇಕು ಅಂತ '' - ಉಪೇಂದ್ರ, ನಟ

ಶಂಕ್ರಣ್ಣ'ನನ್ನ ಮೊದಲ ಸಲ ಆಶ್ಚರ್ಯದಿಂದ ನೋಡಿದ್ದರಂತೆ ಜಗ್ಗೇಶ್.! ಯಾಕೆ?

ಕಾರ್ ನಲ್ಲಿ ಹೋಗುವಾಗ

''ಆ ಸಮಯಕ್ಕೆ ಅವರ 'ತರ್ಕ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಒಮ್ಮೆ ನಾನು ಅವರು ಕಾರ್ ನಲ್ಲಿ ಹೋಗುವಾಗ 'ಸರ್ ತರ್ಕ ಹಿಟ್ ಆಗಿದೆ. ನೂರು ದಿನದ ಕಾರ್ಯಕ್ರಮ ಮಾಡಬಹುದಲ್ವಾ' ಅಂದೆ. ಅದಕ್ಕೆ ಅವರು 'ಏನ್ ಉಪೇಂದ್ರ ಪಾಪ.. ಅವರಿಗೆ ಚಿತ್ರದಿಂದ ಸ್ವಲ್ಪ ದುಡ್ಡು ಸಿಕ್ಕಿದೆ. ಸುಮ್ಮನೆ ಕಾರ್ಯಕ್ರಮ ಮಾಡುವುದು ಯಾಕೆ. ಅವರು ಚೆನ್ನಾಗಿರಲ್ಲಿ' ಅಂತ ಹೇಳಿದರು. ನನ್ನ ಸಿನಿಮಾ.. ನನಗೆ ಹೆಸರು ಸಿಗಲಿ ಎನ್ನುವುದು ಯಾವುದು ಅವರಲ್ಲಿ ಇರಲಿಲ್ಲ. ಅಂತಹ ವ್ಯಕ್ತಿಗಳು ಬಹಳ ವಿರಳ'' - ಉಪೇಂದ್ರ, ನಟ

ಶಂಕರ-ನಿರಂತರ: ಶಂಕ್ರಣ್ಣನಿಂದ ನಾವು ಕಲಿಯಬೇಕಾದದ್ದು ಏನು?

ಸಾವಿನ ಸುದ್ದಿ

''ನನ್ನ ಜೀವನದಲ್ಲಿ ಕೇಳಿದ ಸಾವಿನ ಸುದ್ದಿಗಳಲ್ಲಿ ತುಂಬಾ ಶಾಕಿಂಗ್ ಅಂದರೆ ಅವರದ್ದು. ಕಲ್ಪನೆಯೂ ಮಾಡಿಕೊಳ್ಳುವುದಕ್ಕೆ ಆಗಲಿಲ್ಲ. ಆ ಸುದ್ದಿ ಬಂದಾಗ ಸುಳ್ಳು ಇರಬೇಕು ಎಂದುಕೊಂಡೆ. ಶಂಕರ್ ಸರ್ ಇಲ್ಲ ಅಂದರೆ ಅದನ್ನು ಅರಗಿಸಿಕೊಳ್ಳುವುದಕ್ಕೆ ಆಗಲಿಲ್ಲ. ಅವರ ಆ ನಗು ಮುಖ ಹಾಗೆ ಇರಲಿ ಎಂದು ಅವರ ಅಂತ್ಯಸಂಸ್ಕಾರಕ್ಕೂ ಹೋಗಲಿಲ್ಲ'' - ಉಪೇಂದ್ರ, ನಟ

English summary
Kannada Actor Upendra spoke about Shankar Nag in Weekend with Ramesh show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X