»   » ಹೊಸ ಸ್ಪರ್ಧಿ ವೈಷ್ಣವಿ ವಯಸ್ಸು ಎಷ್ಟು.? ಈಕೆ ನಿವೇದಿತಾಗಿಂತ ಚಿಕ್ಕವಳು.!

ಹೊಸ ಸ್ಪರ್ಧಿ ವೈಷ್ಣವಿ ವಯಸ್ಸು ಎಷ್ಟು.? ಈಕೆ ನಿವೇದಿತಾಗಿಂತ ಚಿಕ್ಕವಳು.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ನಿವೇದಿತಾ ಗೌಡಾಗಿಂತ ವೈಷ್ಣವಿ ಚಂದ್ರನ್ ಮೆನನ್ ಚಿಕ್ಕವಳು | Filmibeat Kannada

ಇಲ್ಲಿಯವರೆಗೂ 'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿಯೇ ಅತಿ ಕಿರಿಯ ಸ್ಪರ್ಧಿ ಅಂದ್ರೆ 'ಡಬ್ ಸ್ಮ್ಯಾಶ್ ರಾಜಕುಮಾರಿ' ನಿವೇದಿತಾ ಗೌಡ ಎನ್ನಲಾಗಿತ್ತು. ಆದ್ರೀಗ, ನಿವೇದಿತಾ ಗೌಡಕ್ಕಿಂತಲೂ ಕಿರಿಯ ಸ್ಪರ್ಧಿ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿದ್ದಾರೆ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 51ನೇ ದಿನ ಕನ್ನಡ ನಟಿ ವೈಷ್ಣವಿ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ 'ದೊಡ್ಮನೆ'ಯೊಳಗೆ ಕಾಲಿಟ್ಟರು.

ಅಚ್ಚರಿ ಅಂದ್ರೆ, ಈ ವೈಷ್ಣವಿ.. ನಿವೇದಿತಾಗಿಂತ ಎರಡು ತಿಂಗಳು ಚಿಕ್ಕವಳು. ಹತ್ತೊಂಬತ್ತು ವರ್ಷದ ವೈಷ್ಣವಿ ಅದಾಗಲೇ ಐದು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

Vaishnavi Chandran Menon is younger than Niveditha Gowda

ಬೆಂಗಳೂರಿನ ಪ್ರತಿಷ್ಟಿತ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ಪಿಯುಸಿ ವ್ಯಾಸಂಗ ಮಾಡಿರುವ ವೈಷ್ಣವಿ, ಸದ್ಯ ಮೊದಲನೇ ವರ್ಷದ ಬಿ.ಕಾಂ ಓದುತ್ತಿದ್ದಾರೆ. ಓದಿನ ಜೊತೆಗೆ ಅಭಿನಯವನ್ನೂ ಮಾಡುತ್ತಿರುವ ವೈಷ್ಣವಿ ಸದ್ಯ 'ಬಿಗ್ ಬಾಸ್' ಸ್ಪರ್ಧಿ.

'ಬಿಗ್' ಬ್ರೇಕಿಂಗ್: 'ಬಿಗ್ ಬಾಸ್' ಮನೆಯೊಳಗೆ ಹೊಸ ನಟಿ ಎಂಟ್ರಿ.?

ಅರ್ಧ ಆಟ ಮುಗಿದ ಮೇಲೆ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿರುವ ವೈಷ್ಣವಿ ಕಂಡರೆ ನಿವೇದಿತಾಗೆ ಅಭದ್ರತೆ ಕಾಡಲು ಆರಂಭಿಸಿದ್ಯಂತೆ. ಹಾಗಂತ ವೈಷ್ಣವಿ ಊಹಿಸಿದ್ದಾರೆ. ಅದು 'ಸೂಪರ್ ಟಾಕ್ ಟೈಮ್'ನ 'ದಿಢೀರ್ ಬೆಂಕಿ' ಸುತ್ತಿನಲ್ಲಿ.

'ಬಿಗ್' ಮನೆಗೆ ಕಾಲಿಟ್ಟ 'ಮಸ್ತ್ ಮಸ್ತ್ ಹುಡುಗಿ' ವೈಷ್ಣವಿ ಯಾರು.?

Vaishnavi Chandran Menon is younger than Niveditha Gowda

'ಬಿಗ್ ಬಾಸ್' ಮನೆಗೆ ಅಕುಲ್ ಬಾಲಾಜಿ ಸ್ಪೆಷಲ್ ಗೆಸ್ಟ್ ಆಗಿ ಆಗಮಿಸಿದ್ದರು. 'ಅಕುಲ್ ಕಮಾಲ್' ಎಂಬ ವಿಶೇಷ ಚಟುವಟಿಕೆ ಮುಗಿದ ಬಳಿಕ 'ಬಿಗ್ ಬಾಸ್' ಮನೆಯಲ್ಲಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ರೀತಿ 'ದಿಢೀರ್ ಬೆಂಕಿ' ಸುತ್ತು ನಡೆಯಿತು. ಮನೆಯ ಎಲ್ಲ ಸದಸ್ಯರು ಇದರಲ್ಲಿ ಪಾಲ್ಗೊಂಡು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಇದರಲ್ಲಿ, ''ನಿಮ್ಮ ಎಂಟ್ರಿಯಿಂದ ಮನೆಯಲ್ಲಿ ಯಾರಿಗೆ ಇನ್ ಸೆಕ್ಯೂರಿಟಿ ಫೀಲ್ ಆಗಿದೆ ಅನ್ಸುತ್ತೆ.?'' ಎಂದು ವೈಷ್ಣವಿಗೆ ಅಕುಲ್ ಬಾಲಾಜಿ ಕೇಳಿದರು.

ಅದಕ್ಕೆ, ''ಬಹುಶಃ ನಿವೇದಿತಾ ಇರಬೇಕು. ಯಾಕಂದ್ರೆ, ನಾನು ನಿವೇದಿತಾಗಿಂತಲೂ ಚಿಕ್ಕವಳು'' ಎಂದರು ನಟಿ ವೈಷ್ಣವಿ.

ಅಂದ್ಹಾಗೆ, ಈ ವೈಷ್ಣವಿ 'ಬಿಗ್ ಬಾಸ್' ವಿಜೇತ ಪ್ರಥಮ್ ನಾಯಕನಾಗಿ ಅಭಿನಯಿಸುತ್ತಿರುವ 'ದೇವ್ರಂಥ ಮನುಷ್ಯ' ಚಿತ್ರದ ನಾಯಕಿ.

English summary
Bigg Boss Kannada 5 Contestant Vaishnavi Chandran Menon is younger than Niveditha Gowda

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada