'ಡ್ರಾಮಾ ಜೂನಿಯರ್ಸ್' ತೀರ್ಪುಗಾರರ ಬದಲಾವಣೆಗೆ ಕಾರಣ ಕೊಡಿ ಎಂದ ವೀಕ್ಷಕರು!
'ಜೀ ಕನ್ನಡ' ವಾಹಿನಿಯ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರ ಬದಲಾವಣೆ ಆಗಿದೆ. ನಿರ್ದೇಶಕ ಸೀತಾರಾಮ್ ಅವರ ಜಾಗಕ್ಕೆ ಈಗ ಹಾಸ್ಯ ಮತ್ತು ಪೋಷಕ ನಟರಾದ ಮುಖ್ಯಮಂತ್ರಿ ಚಂದ್ರು ಬಂದಿದ್ದಾರೆ.
ತೀರ್ಪುಗಾರರ ಬದಲಾವಣೆ ಬಗ್ಗೆ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮ ನೋಡುವ ವೀಕ್ಷಕರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. 'ಜೀ ಕನ್ನಡ' ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ ತಮ್ಮ ಕಮೆಂಟ್ ಗಳ ಮೂಲಕ ತೀರ್ಪುಗಾರರ ಬದಲಾವಣೆ ವಿಚಾರವಾಗಿ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.
ಕೆಲವರಿಗೆ ವಾಹಿನಿಯ ಈ ನಿರ್ಧಾರ ಖುಷಿ ನೀಡಿದರೆ ಮತ್ತೆ ಕೆಲವರಿಗೆ ಅದು ಬೇಸರ ತರಿಸಿದೆ. ಮುಂದೆ ಓದಿ...

ಕಾರಣ ಕೊಡಿ
ಅನೇಕ ವೀಕ್ಷಕರು ಕಾರ್ಯಕ್ರಮದಲ್ಲಿ 'ತೀರ್ಪುಗಾರರ ಬದಲಾವಣೆಗೆ ಕಾರಣ ನೀಡಿ' ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ವಾಹಿನಿ ಕಡೆಯಿಂದ 'ಕಾರ್ಯಕ್ರಮ ನೋಡಿ ನಿಮಗೆ ಕಾರಣ ತಿಳಿಯುತ್ತದೆ' ಎಂಬ ಉತ್ತರ ಸಿಕ್ಕಿದೆ.

ಅಭಿಮಾನಿಯ ಕವನ
ಸಣ್ಣದಾಗಿ ಕವನ ಬರೆಯುವುದರ ಮೂಲಕ ಅಭಿಮಾನಿಯೊಬ್ಬರು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಂದ್ರು ಅವರಿಗೆ ಸ್ವಾಗತ ಕೋರಿದ್ದಾರೆ.

ಒಳ್ಳೆಯ ಆಯ್ಕೆ
ರಂಗಭೂಮಿ ಮತ್ತು ಸಿನಿಮಾ ಎರಡರಲ್ಲಿಯೂ ಅನುಭವ ಇರುವ ಮುಖ್ಯಮಂತ್ರಿ ಚಂದ್ರು ಅವರನ್ನು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರಾಗಿ ಆಯ್ಕೆ ಮಾಡಿದ್ದು, ಬಹಳ ಒಳ್ಳೆಯ ನಿರ್ಧಾರ ಎನ್ನುವುದು ಅನೇಕರ ಅಭಿಪ್ರಾಯ.

ಮಿಸ್ ಮಾಡಿಕೊಳ್ಳುತ್ತಿದ್ದೇವೆ
ಇನ್ನೂ ಕೆಲ ವೀಕ್ಷಕರು ನಾವು ಸೀತಾರಾಮ್ ಸರ್ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಒಳ್ಳೆಯದಾಗಲಿ
ಸೀತಾರಾಮ್ ಸರ್ 'ಡ್ರಾಮಾ ಜೂನಿಯರ್ಸ್' ಕೊನೆಯವರೆಗೂ ಇರಬೇಕಿತ್ತು. ಅವರ ಮುಂದಿನ ಕೆಲಸಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.

ಸೀತಾರಾಮ್ ಸ್ವಷ್ಟನೆ
ಈ ಬಗ್ಗೆ ನಿರ್ದೇಶಕ ಸೀತಾರಾಮ್ ಸ್ಪಷ್ಟನೆ ನೀಡಿದ್ದು, ''ನನ್ನ ಈಗಿನ ಚಿತ್ರದ promotion, ಹೊಸ ಚಿತ್ರದ ತಯಾರಿ, ಮತ್ತು ಕೆಲವರ ಜತೆ ಸೇರಿ web channel ಒಂದು ಶುರು ಮಾಡುವ ತಯಾರಿಯಲ್ಲಿ ಇದ್ದೇನೆ. ಇಷ್ಟರ ಮಧ್ಯೆ ಡ್ರಾಮಾ ಕ್ಕೆ ಹೋಗಲು ಸಾಧ್ಯವೇ ಇಲ್ಲ'' ಎಂದು ತಿಳಿಸಿದ್ದಾರೆ.


Click it and Unblock the Notifications











