Just In
Don't Miss!
- News
ನಮ್ಮನ್ನು ಬಿಟ್ಟು ಓಡುತ್ತಿವೆ 500 ನಕ್ಷತ್ರಗಳು, ವಿಜ್ಞಾನಿಗಳಿಂದ ರಹಸ್ಯ ರಿವೀಲ್..!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಸರಿಗಮಪ'ಗೆ ಯಾಕೆ ಬರ್ತಿಲ್ಲ?, VPಗೆ ವೀಕ್ಷಕರ ಪ್ರಶ್ನೆಗಳು
ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮ ಕಳೆದ ಸಂಚಿಕೆಯ ಪರ್ಫಾರ್ಮೆನ್ಸ್ ಸುತ್ತು ಗ್ರಾಂಡ್ ಆಗಿ ಮುಗಿದಿದೆ. ಪ್ರತಿ ವಾರ ಕೂಡ ಬೇರೆ ಬೇರೆ ಥೀಮ್ ಜೊತೆಗೆ ಬರುತ್ತಿರುವ ಕಾರ್ಯಕ್ರಮ ವೀಕ್ಷಕರ ಮನ ಗೆಲ್ಲುತ್ತಿದೆ.
ಎಲ್ಲ ಇದ್ದರೂ ಕಾರ್ಯಕ್ರಮ ಒಂದು ವಿಷಯಕ್ಕೆ ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಗಾಯಕ ವಿಜಯ ಪ್ರಕಾಶ್ ಕಾರ್ಯಕ್ರಮಕ್ಕೆ ಬರುತ್ತಿಲ್ಲ ಎನ್ನುವುದು ಕಾರ್ಯಕ್ರಮದ ಕಳೆ ಕಡಿಮೆ ಮಾಡಿದೆ. ಸರಿಗಮಪ ಕಾರ್ಯಕ್ರಮದ ಎನರ್ಜಿ ಬೂಸ್ಟರ್, ಕವಿತೆ ಮಾಸ್ಟರ್ ಆಗಿರುವ ವಿಜಯ ಪ್ರಕಾಶ್ ರನ್ನು ವೀಕ್ಷಕರು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಕುರಿ ಕಾಯುವ ಹುಡುಗನಿಗೆ ಸಂಗೀತ ಕಲಿಸಲು ಮುಂದಾದ ವಿಜಯ ಪ್ರಕಾಶ್!
ಐದಾರು ವಾರಗಳಿಂದ ವಿಜಯ ಪ್ರಕಾಶ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಪ್ರತಿ ವಾರ ವಿಜಯ್ ಪ್ರಕಾಶ್ ವಾಪಸ್ ಬರಬಹುದು ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ನಿರಾಸೆ ಆಗುತ್ತಿದೆ.
ಇದೀಗ ಈ ಬಗ್ಗೆ ವೀಕ್ಷಕರೇ ವಿಜಯ ಪ್ರಕಾಶ್ ಅವರಿಗೆಯೇ ಪ್ರಶ್ನೆ ಮಾಡಿದ್ದಾರೆ...

ಕಾರ್ಯಕ್ರಮಕ್ಕೆ ವಿಜಯ ಪ್ರಕಾಶ್ ಬರುತ್ತಿಲ್ಲ
ಸರಿಗಮಪ ಕಾರ್ಯಕ್ರಮದಲ್ಲಿ ಹಂಸಲೇಖ, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಹಾಗೂ ವಿಜಯ ಪ್ರಕಾಶ್ ತೀರ್ಪುಗಾರರಾಗಿದ್ದಾರೆ. ಈ ನಾಲ್ವರ ಪೈಕಿ ಯಾರೇ ಒಬ್ಬರು, ಒಂದೇ ಒಂದು ಸಂಚಿಕೆಯಿಂದ ಮಿಸ್ ಆದರು ವೀಕ್ಷಕರಿಗೆ ಕೊಂಚ ಬೇಸರ ಆಗುತ್ತದೆ. ಹೀಗಿರುವಾಗ, ವಿಜಯ ಪ್ರಕಾಶ್ ಕಳೆದ ಐದಾರು ವಾರಗಳಿಂದ ಮಾಯ ಆಗಿದ್ದಾರೆ.
ವಿಜಯ ಪ್ರಕಾಶ್ ತಂದೆ ನಿಧನಕ್ಕೆ ಯೋಗರಾಜ್ ಭಟ್ ಸಂತಾಪ
|
ಅಭಿಮಾನಿಗಳ ಒತ್ತಾಯ
ವಿಜಯ ಪ್ರಕಾಶ್ ಕಮ್ ಬ್ಯಾಕ್ ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಕಾದು ಕಾದು ಸುತ್ತಾಗಿದ್ದಾರೆ. ಇದೀಗ ಟ್ವಿಟ್ಟರ್ ಖಾತೆಯ ಮೂಲಕ ನೇರವಾಗಿ ವಿಜಯ ಪ್ರಕಾಶ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ''ಉಪ್ಪು ಇಲ್ಲದ ಅಡುಗೆ, ಸಿಹಿ ಇಲ್ಲದ ಸ್ವೀಟು, ನೀರ್ ಇಲ್ಲದ ಭಾವಿ, ನೀವ್ ಇಲ್ಲದ ಸ ರಿ ಗ ಮ ಪ ಇದ್ದರೆಷ್ಟು ಬಿಟ್ಟರೆಷ್ಟು ಬೇಗ ಬನ್ನಿ ಸರ್ ನೀವ್ ಇದ್ರೆ ಮಾತ್ರ ಆ ಕಾರ್ಯಕ್ರಮ ಕ್ಕೆ ಒಂದು ಚಂದ ಅಂತ ಬರೋದು'' ಎಂದು ಅಭಿಮಾನಿಯೊಬ್ಬರು ಒತ್ತಾಯ ಮಾಡಿದ್ದಾರೆ.
|
ಮುಂದಿನ ವಾರ ಪಕ್ಕಾ ಅಂತೆ
ಅಭಿಮಾನಿಗಳ ಈ ಟ್ವೀಟ್ ಗಳಿಗೆ ಗಾಯಕ ವಿಜಯ ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ವಾರ ಕಾರ್ಯಕ್ರಮಕ್ಕೆ ಪಕ್ಕಾ ಬರುತ್ತಿದ್ದೇನೆ ಎಂದು ಭರವಸೆ ನೀಡಿದ್ದಾರೆ. ಜೊತೆಗೆ ಯಾಕೆ ಇಷ್ಟೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯ ಆಗಿಲ್ಲ ಎನ್ನುವ ಕಾರಣ ಕೂಡ ನೀಡುತ್ತಾರಂತೆ. ಈ ವಾರದ ಸಂಚಿಕೆಯಲ್ಲಿ ವಿಪಿ ಕಮ್ ಬ್ಯಾಕ್ ಆಗಲಿದ್ದಾರೆ.

100 ಮಿಲಿಯನ್ ಹಿಟ್ಸ್ ಪಡೆದ ವಿಪಿ ಹಾಡು
ಮತ್ತೊಂದು ಕಡೆ ವಿಜಯ ಪ್ರಕಾಶ್ ಹಾಡಿದ ಹಾಡೊಂದು 100 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. 'ಏನಮ್ಮಿ ಏನಮ್ಮಿ..' ಎಂಬ 'ಅಯೋಗ್ಯ' ಸಿನಿಮಾದ ಹಾಡು ಮೈಲಿಗಲ್ಲು ಸಾಧಿಸಿದೆ. ವಿಡಿಯೊ ಹಾಗೂ ಲಿರಿಕಲ್ ಹಾಡು ಸೇರಿ ನೂರು ಮಿಲಿಯನ್ ಹಿಟ್ಸ್ ಆಗಿದೆ. ವಿಜಯ ಪ್ರಕಾಶ್ ಕೆರಿಯರ್ ನ ಬೆಸ್ಟ್ ಹಾಡುಗಳ ಸಾಲಿಗೆ ಈ ಹಾಡು ಸೇರಿಕೊಂಡಿದೆ.